ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅದ್ಧೂರಿಯಾಗಿ ನಡೆದಿದ್ದು, ಅದರಂತೆ ಬನ್ನಿಮಂಟಪದ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕರು ವಿಕ್ಷೀಸಿದರು.
ಈ ಕಾರ್ಯಕ್ರಮದಲ್ಲಿ ಅಶ್ವಾರೋಹಿ ದಳ, ಪೊಲೀಸ್ ಪಡೆಗಳಿಂದ ಆಕರ್ಷಕ ಪಥಸಂಚಲನ ನಡೆದಿದ್ದು, ಸೇರಿರುವ ಜನರು ಕಣ್ತುಂಬಿಕೊಂಡರು.
ಇನ್ನು ಟಾರ್ಚ್ಲೈಟ್ ಪರೇಡ್ ನಡೆದಿದ್ದು, ಟಾರ್ಚ್ ಮೂಲಕ ಕರ್ನಾಟಕ ಸೇರಿದಂತೆ ಅನೇಕ ಚಿತ್ರಗಳನ್ನು ತೋರಿಸಲಾಯಿತು.
ಸಿಎಆರ್, ಡಿಎಆರ್, ಕಮಾಂಡೋ ಪೊಲೀಸ್, ಪೊಲೀಸ್ ಬ್ಯಾಂಡ್, ಟೆಂಟ್ ಪಿಕ್ಕಿಂಗ್ ಮಾಡಿದ ಅಶ್ವಾರೋಹಿ ಪಡೆ ಪೊಲೀಸರು ಸಾಹಸ ಪ್ರದರ್ಶನ ಮಾಡಿದರು.
ಶ್ವೇತಾಶ್ವ ತಂಡದಿಂದ ಬೈಕ್ ಸಾಹಸ ಪ್ರದರ್ಶನವಂತೂ ನೋಡುಗರ ಕಣ್ಮನ ಸೆಳೆದವು, ಸಿಳ್ಳೆ, ಚಪ್ಪಾಳೆಗಳ ಸುರಿಮಳೆಗೈದರು.
ಪೊಲೀಸ್ ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ಪಂಜಿನ ಕವಾಯತು ಕೂಡ ನೆರೆದಿದ್ದವರ ದಿಗ್ಬ್ರಮೆಗೊಂಡರು
ಇನ್ನು ಪಂಜು ಹಿಡಿದು ಆಕರ್ಷಕ ಆಕೃತಿ ಮೂಡಿಸಿದ ಪೊಲೀಸ್ ಪ್ರಶಿಕ್ಷಣಾರ್ಥಿಗಳು, 3 ಕಲಾತಂಡಗಳಿಂದ ನಾಡಿನ ಹಿರಿಮೆ ಗರಿಮೆ ನೃತ್ಯರೂಪಕ ಪ್ರದರ್ಶನ ಮಾಡಲಾಯಿತು.