- Kannada News Photo gallery Cricket photos ICC World Cup 2023 Updated Points Table South Africa rises to second, India top after win over New Zealand
ಆಫ್ರಿಕಾ ವಿರುದ್ಧ ಸೋತು ಕೊನೆಯ ಸ್ಥಾನಕ್ಕೆ ಜಾರಿದ ಬಾಂಗ್ಲಾ! ವಿಶ್ವಕಪ್ನಿಂದ ಭಾಗಶಃ ಔಟ್..?
ICC World Cup 2023 Updated Points Table: 2023 ರ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 149 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ನಾಲ್ಕನೇ ಬಾರಿ ಗೆಲುವಿನ ಪತಾಕೆ ಹಾರಿಸಿದೆ. ದಕ್ಷಿಣ ಆಫ್ರಿಕಾದ ಈ ಗೆಲುವಿನ ನಂತರ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಹಲವು ಬದಲಾವಣೆಗಳು ಕಂಡು ಬಂದಿವೆ.
Updated on: Oct 25, 2023 | 7:11 AM

2023 ರ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 149 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ನಾಲ್ಕನೇ ಬಾರಿ ಗೆಲುವಿನ ಪತಾಕೆ ಹಾರಿಸಿದೆ.ದಕ್ಷಿಣ ಆಫ್ರಿಕಾದ ಈ ಗೆಲುವಿನ ನಂತರ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಹಲವು ಬದಲಾವಣೆಗಳು ಕಂಡು ಬಂದಿವೆ.

ಬಾಂಗ್ಲಾ ತಂಡವನ್ನು ಭಾರಿ ಅಂತರದಿಂದ ಮಣಿಸಿದ ದಕ್ಷಿಣ ಆಫ್ರಿಕಾ ತಂಡ ಪಾಯಿಂಟ್ ಪಟ್ಟಿಯಲ್ಲಿ ಟಾಪ್-2ಗೆ ಪ್ರವೇಶಿಸಿದೆ.

ಹೀಗಾಗಿ ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಉಭಯ ತಂಡಗಳೂ ತಲಾ ಎಂಟು ಅಂಕಗಳನ್ನು ಹೊಂದಿವೆ. ಆದರೆ ದಕ್ಷಿಣ ಆಫ್ರಿಕಾದ ನಿವ್ವಳ ರನ್ ರೇಟ್ (+2.370) ನ್ಯೂಜಿಲೆಂಡ್ (+1.481) ಗಿಂತ ಉತ್ತಮವಾಗಿದೆ.

ಇನ್ನುಳಿದಂತೆ ಟೀಂ ಇಂಡಿಯಾ ಆಡಿರುವ ಐದೂ ಪಂದ್ಯಗಳನ್ನು ಗೆದ್ದು, 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಪಾಯಿಂಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ನಾಲ್ಕನೇ ಮತ್ತು ಪಾಕಿಸ್ತಾನ ಐದನೇ ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನ ಆರನೇ ಸ್ಥಾನದಲ್ಲಿದೆ. ಸದ್ಯ ಮೂವರ ಖಾತೆಯಲ್ಲಿ ನಾಲ್ಕು ಅಂಕಗಳಿವೆ. ಆದಾಗ್ಯೂ, ಆಸ್ಟ್ರೇಲಿಯಾದ ನಿವ್ವಳ ರನ್ ರೇಟ್ ಸ್ವಲ್ಪ ಉತ್ತಮವಾಗಿದೆ.

ಬಾಂಗ್ಲಾದೇಶದ ಸೋಲಿನ ನಂತರ, ನೆದರ್ಲೆಂಡ್ಸ್, ಶ್ರೀಲಂಕಾ ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಲಾ ಒಂದು ಸ್ಥಾನ ಮೇಲೇರಿವೆ.

ನೆದರ್ಲೆಂಡ್ಸ್ ಈಗ ಏಳನೇ ಸ್ಥಾನದಲ್ಲಿದೆ, ಶ್ರೀಲಂಕಾ ಎಂಟನೇ ಮತ್ತು ಇಂಗ್ಲೆಂಡ್ ಒಂಬತ್ತನೇ ಸ್ಥಾನದಲ್ಲಿದೆ. ಮೂವರೂ ಇದುವರೆಗೆ ಕೇವಲ ಒಂದು ಪಂದ್ಯವನ್ನು ಗೆದ್ದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಸೋತಿರುವ ಬಾಂಗ್ಲಾದೇಶ ಮೂರು ಸ್ಥಾನಗಳನ್ನು ಕಳೆದುಕೊಂಡಿದ್ದು, ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಆಡಿರುವ 5 ಪಂದ್ಯಗಳಿಂದ 4 ರಲ್ಲಿ ಸೋತಿರುವ ಬಾಂಗ್ಲಾ ವಿಶ್ವಕಪ್ ಸೆಮಿಫೈನಲ್‌ಗೆ ಏರುವುದು ಕಷ್ಟಕರವಾಗಿದೆ.



















