ಪಾಟ್ನಾ ನಗರದ ತಖ್ತ್ ಶ್ರೀ ಹರ್ಮಂದಿರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ. ಕೇಸರಿ ಬಣ್ಣದ ಸಿಖ್ ಪೇಟಾ ಧರಿಸಿ ಮೋದಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು
ಮೋದಿಯವರು ಅರ್ದಾಸ್‌ನಲ್ಲಿ (ಸಿಖ್ಖರ ಪ್ರಾರ್ಥನೆ) ಮತ್ತು ಲೈವ್ ಕೀರ್ತನದಲ್ಲಿ ಭಾಗವಹಿಸಿದ್ದಾರೆ. ಶ್ರೀ ಗುರು ಗೋಬಿಂದ್ ಸಿಂಘಿ ಅವರು ನಿರ್ವಹಿಸಿದ ಪೂಜ್ಯ ಶಾಸ್ತ್ರಗಳನ್ನು ವೀಕ್ಷಿಸುವ ಅವಕಾಶವೂ ಪ್ರಧಾನಮಂತ್ರಿಯವರಿಗಿತ್ತು.
ಪ್ರಧಾನಿಯವರು ಚೌರ್ ಸಾಹಿಬ್‌ನ ಸೇವೆಯನ್ನು ಮಾಡಿದ್ದು "ಸರ್ಬತ್ ದ ಭಾಲಾ" ಪ್ರಾರ್ಥನೆಯಲ್ಲಿ ಭಕ್ತರ ಜತೆಯಾಗಿದ್ದಾರೆ.
ಪಾಟ್ನಾದ ಹರ್ಮಂದಿರ್ ಸಾಹಿಬ್, ಪಾಟ್ನಾ ಸಾಹಿಬ್ ಎಂದು ಜನಪ್ರಿಯವಾಗಿದೆ, ಇದು 10 ನೇ ಸಿಖ್ ಗುರು ಶ್ರೀ ಗುರು ಗೋವಿಂದ್ ಸಿಂಗ್ ಅವರ ಜನ್ಮಸ್ಥಳವಾಗಿದ್ದು ದೊಡ್ಡ ಸಂಖ್ಯೆಯಲ್ಲಿ ಸಿಖ್ ಯಾತ್ರಾರ್ಥಿಗಳು ಪ್ರತಿದಿನ ಇಲ್ಲಿ ಪೂಜಿಸಲು ಬರುತ್ತಾರೆ
ಗುರುದ್ವಾರದಲ್ಲಿ ಸುಮಾರು 20 ನಿಮಿಷಗಳ ಕಾಲ ಕಳೆದ ಮೋದಿ ಲಂಗರ್ ಸೇವೆ ಮಾಡಿದ್ದಾರೆ. ಅರ್ಥಾತ್ ಭಕ್ತರಿಗಾಗಿ ರೋಟಿ, ದಾಲ್ ತಯಾರಿಸಿ ಊಟ ಬಡಿಸಿದ್ದಾರೆ.
ಸಿಖ್ ಬೀಬಿಗಳು ಮೋದಿಯವರಿಗೆ ಮಾತಾ ಗುಜ್ರಿ ಜಿಯವರ ಭಾವಚಿತ್ರವನ್ನು ನೀಡಿದ್ದಾರೆ
ಪ್ರಧಾನಿ ಜತೆ ರವಿಶಂಕರ್ ಪ್ರಸಾದ್ ಮತ್ತು ಅಶ್ವಿನಿ ಚೌಬೆ ಇದ್ದರು. ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಪ್ರಧಾನ ಮಂತ್ರಿಯ ಚೊಚ್ಚಲ ಭೇಟಿಯಾಗಿದೆ ಇದು
ಸಿಖ್ಖರ ಹತ್ತನೇ ಗುರು ಗುರು ಗೋಬಿಂದ್ ಸಿಂಗ್ 1666 ರಲ್ಲಿ ಪಾಟ್ನಾದಲ್ಲಿ ಜನಿಸಿದರು. ಆನಂದಪುರ ಸಾಹಿಬ್‌ಗೆ ಹೋಗುವ ಮೊದಲು ಅವರು ತಮ್ಮ ಆರಂಭಿಕ ವರ್ಷಗಳನ್ನು ಇಲ್ಲಿ ಕಳೆದರು ಎನ್ನಲಾಗಿದೆ
ಗುರುದ್ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಟಿ ಮಾಡುತ್ತಿರುವುದು. ‘ಸೇವೆ’ ಮತ್ತು ‘ಲಂಗರ್’ ಇವೆರಡನ್ನೂ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಮಾಡಿದ್ದಾರೆ.
ಮೋದಿಯವರು ಪವಿತ್ರವಾದ "ಕರಃ ಪ್ರಸಾದ" ಸ್ವೀಕರಿಸುವಾಗ ಡಿಜಿಟಲ್ ಪಾವತಿಯನ್ನು ಆರಿಸಿಕೊಂಡರು. ಗುರುದ್ವಾರ ಸಮಿತಿಯು ಅವರಿಗೆ “ಸನ್ಮಾನ್ ಪತ್ರ” ನೀಡಿ ಗೌರವಿಸಿತು
Published On - 12:54 pm, Mon, 13 May 24