Polygamy Marriage: ಬಹುಪತ್ನಿತ್ವ ಪದ್ಧತಿ ಎಂದರೇನು? ಯಾವ ದೇಶಗಳಲ್ಲಿ ಈ ಪದ್ದತಿಯನ್ನು ಅನುಸರಿಸುತ್ತಾರೆ?
TV9 Web | Updated By: ನಯನಾ ಎಸ್ಪಿ
Updated on:
Feb 23, 2023 | 3:12 PM
ಬಹುಪತ್ನಿತ್ವ ಪದ್ಧತಿ ಹಿಂದಿನ ಕಾಲದಲ್ಲಿ ಹಲವಾರು ನಾಡುಗಳಲ್ಲಿ ವಾಡಿಕೆಯಲ್ಲಿತ್ತಾದರೂ, ಈಗ ಈ ಪದ್ಧತಿಯು ಮಂದಿ ಮೆಚ್ಚುಗೆಯನ್ನು ಕಳೆದುಕೊಂಡಿದೆ. ವಿಶ್ವದಲ್ಲಿ ಶೇ.3% ಜನ ಈಗಲೂ ಈ ಪದ್ದತಿಯನ್ನು ಅನುಸರಿಸುತ್ತಿದ್ದಾರೆ.
1 / 7
ಒಬ್ಬರಿಗಿಂತ ಹೆಚ್ಚು ಮಹಿಳೆಯರನ್ನು ಒಬ್ಬನೇ ಪುರುಷ ಮದುವೆಯಾದಲ್ಲಿ, ಅಂತಹ ಪದ್ಧತಿಯನ್ನು ಬಹುಪತ್ನಿತ್ವ ಎಂದು ಕರೆಯಲಾಗುತ್ತದೆ. ಅದೇ ರೀತಿ ಒಬ್ಬ ಮಹಿಳೆ ಒಂದಕ್ಕಿಂತ ಹೆಚ್ಚು ಪುರುಷರನ್ನು ಮದುವೆಯಾದರೆ ಅದು ಬಹುಪತಿತ್ವ ಪದ್ದತಿಯಾಗುತ್ತದೆ.
2 / 7
ಬಹುಪತ್ನಿತ್ವ ಪದ್ಧತಿ ಹಿಂದಿನ ಕಾಲದಲ್ಲಿ ಹಲವಾರು ನಾಡುಗಳಲ್ಲಿ ವಾಡಿಕೆಯಲ್ಲಿತ್ತಾದರೂ, ಈಗ ಈ ಪದ್ಧತಿಯು ಮಂದಿ ಮೆಚ್ಚುಗೆಯನ್ನು ಕಳೆದುಕೊಂಡಿದೆ. ವಿಶ್ವದಲ್ಲಿ ಶೇ.3% ಜನ ಈಗಲೂ ಈ ಪದ್ದತಿಯನ್ನು ಅನುಸರಿಸುತ್ತಿದ್ದಾರೆ.
3 / 7
ಸಹಜವಾಗಿ ಜನರು ಇಂತಹ ಪದ್ದತಿಯನ್ನು ಅನುಸರಿಸಲು ಮುಂದಾಗುವುದಿಲ್ಲ. ಹಾಗಾಗಿ ಹಲವು ದೇಶಗಳಲ್ಲಿ ಇದು ಕಾನೂನು ಬಾಹಿರವಾದರೂ, ಕೆಲವು ದೇಶಗಳು ಈ ಪದ್ದತಿಗೆ ಅನುಮಂತಿ ನೀಡಿದೆ
4 / 7
ಯಾವಯಾವ ದೇಶಗಳಲ್ಲಿ ಈ ಪದ್ದತಿಗೆ ಅನುಮತಿ ನೀಡಿದೆ ಎಂದು ನೋಡುವುದಾದರೆ;
ಅಫಘಾನಿಸ್ತಾನ, ಪಾಕಿಸ್ತಾನ, ಅರಬ್ ರಾಷ್ಟ್ರಗಳು, ಆಲ್ಜೀರಿಯಾ, ಕ್ಯಾಮರೂನ್, ಇರಾನ್, ನೈಜೀರಿಯಾ, ಈಜಿಪ್ಟ್, ಮೊರಾಕೊ, ಕೀನ್ಯಾ, ಮಾಲ್ಡೀವ್ಸ್, ಇನ್ನು ಹಲವು ದೇಶಗಳು ಈ ಸಾಲಿಗೆ ಸೇರುತ್ತದೆ.
5 / 7
ಯಾವಯಾವ ದೇಶಗಳಲ್ಲಿ ಈ ಪದ್ಧತಿ ಕಾನೂನು ಬಾಹಿರ ಎಂಬ ಪಟ್ಟಿ ಇಲ್ಲಿದೆ;
ಅಂಗೋಲ, ಮಾರಿಷಸ್, ಕೆನಡಾ, ಅರ್ಜೆಂಟೀನಾ, ಬಹಾಮಾಸ್, ಘಾನಾ, ಬುರುಂಡಿ, ಕಾಬೋ ವೆರ್ಡೆ, ಚಿಲಿ, ಕೊಲಂಬಿಯಾ, ಕೋಸ್ಟಾ ರೀಚಾ, ದಕ್ಷಿಣ ಕೊರಿಯಾ, ಥೈಲ್ಯಾಂಡ್, ಇನ್ನು ಹಲವು ದೇಶಗಳು ಈ ಸಾಲಿಗೆ ಸೇರಿದೆ.
6 / 7
1956 ರಲ್ಲಿ ಭಾರತದಲ್ಲಿ ಬಹುಪತ್ನಿತ್ವವು ಕಾನೂನುಬಾಹಿರವಾಯಿತು, ಮುಸ್ಲಿಮರನ್ನು ಹೊರತುಪಡಿಸಿ ಎಲ್ಲಾ ನಾಗರಿಕರಿಗೆ ಈ ಕಾನೂನು ಅನ್ವಯಿಸುತ್ತದೆ. ಮುಸ್ಲಿಮರು ನಾಲ್ಕು ಹೆಂಡತಿಯರನ್ನು ಹೊಂದಲು ಅನುಮತಿ ಇದೆ.
7 / 7
ಆಧುನಿಕ ಬಹುಪತ್ನಿತ್ವ ಸಂಬಂಧಗಳಲ್ಲಿ ಯಾವುದೇ ಕ್ರಮಾನುಗತವಿಲ್ಲ. ಇಬ್ಬರು ವ್ಯಕ್ತಿಗಳ ಮದುವೆಯಂತೆಯೇ, ತಮಗೆ ಬೇಕಾದ ರೀತಿಯಲ್ಲಿ ಸಂಬಂಧವನ್ನು ನಿಭಾಯಿಸಬಹುದು. ಯಾರು ಮೇಲು-ಕೀಳು ಎಂಬ ಭಾವೆ ಇರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಪಾತ್ರ ಅಥವಾ ಜವಾಬ್ದಾರಿಯ ಹೊಂದಿರಬಹುದು, ಇದು ಅವರು ಕುಟುಂಬದಲ್ಲಿ ಎಷ್ಟು ಕಾಲ ಇದ್ದಾರೆ ಎಂಬುದರ ಆಧಾರದ ಮೇಲೆ ನಿರ್ಧರಿಸಲಾಗುವುದಿಲ್ಲ.
Published On - 3:11 pm, Thu, 23 February 23