ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದಂತೆಯೇ ಹಲವು ಕಡೆ ಟೊಮೆಟೊ ಕಳ್ಳತನವಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ ಇದರ ಬೆನ್ನಲ್ಲೇ ಇದೀಗ ದಾಳಿಂಬೆ ತೋಟಕ್ಕೆ ಕಳ್ಳರ ಕಾಟ ಶರುವಾಗಿದೆ
ಟೆಮೆಟೊದಂತೆ ದಾಳಿಂಬೆ ಈಗ ಚಿನ್ನದ ಬೆಲೆ ಬರುತ್ತಿರುವುದರಿಂದ ಖದೀಮರು ರಾತ್ರೋ ರಾತ್ರಿ ತೋಟಕ್ಕೆ ಲಗ್ಗೆ ಇಟ್ಟು ದಾಳಿಂಬೆ ಕಿತ್ತುಕೊಂಡು ಹೋಗುತ್ತಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಕಟಾವಿಗೆ ಬಂದಿದ್ದ ದಾಳಿಂಬೆ ಇದೀಗ ಕಳ್ಳರ ಪಾಲಾಗಿದೆ.
ರೈತ ಜಗದೀಶ ಎನ್ನುವವರಿಗೆ ಸೇರಿದ ತೋಟದಲ್ಲಿ ಬೆಳೆದಿದ್ದ ದಾಳಿಂಬೆ ಹಣ್ಣುಗಳನ್ನು ಕದ್ದು ಪರಾರಿಯಾಗಿದ್ದಾರೆ.
ಮಧ್ಯರಾತ್ರಿ ತೋಟಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ದಾಳಿಂಬೆ ಕದ್ದು ಎಸ್ಕೇಪ್ ಆಗಿದ್ದಾರೆ.
ಕಟಾವಿಗೆ ಬಂದಿದ್ದ ಲಕ್ಷಾಂತರ ರೂಪಾಯಿ ದಾಳಿಂಬೆ ಕಳ್ಳತವಾಗಿದ್ದರಿಂದ ರೈತ ಜಗದೀಶ್ ಕಂಗಾಲಾಗಿದ್ದಾರೆ.
ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದ್ದು, ನಾಲ್ಕು ಜನ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.