
ಮತಾಂಧರಿಂದ ಹತ್ಯೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ದಿ. ಪ್ರವೀಣ್ ನೆಟ್ಟಾರು ಮನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭಾನುವಾರ ಭೇಟಿ ನೀಡಿದರು.

ಮನೆಯ ಮುಂಭಾಗದ ಪ್ರವೀಣ್ ಭಾವಚಿತ್ರಕ್ಕೆ ಜೆ.ಪಿ.ನಡ್ಡಾ ಪುಷ್ಪಾರ್ಚನೆ ಮಾಡಿದರು.

ಪ್ರವೀಣ್ ಪೋಷಕರು ಹಾಗೂ ಪತ್ನಿ ನೂತನ ಜೊತೆ ಮಾತುಕತೆ ನಡೆಸಿದ ನಡ್ಡಾ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಹತ್ಯೆಗೆ ನ್ಯಾಯ ಸಿಗೋವರೆಗೂ ವಿರಮಿಸಲ್ಲ. ಅವರ ಬಲಿದಾನ ಎಂದಿಗೂ ವ್ಯರ್ಥ ಆಗಲ್ಲ. ಪ್ರವೀಣ್ ಅವರ ಕುಟುಂಬಕ್ಕೆ ಸಂವೇದನಾಶೀಲ ಸರ್ಕಾರ ಎಲ್ಲವನ್ನೂ ಮಾಡಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ನೇತೃತ್ವದಲ್ಲಿ ಪ್ರವೀಣ್ ನೆಟ್ಟಾರು ಹೊಸ ಮನೆ ನಿರ್ಮಾಣವಾಗಿದ್ದು, ಏ. 27ರಂದು ಗೃಹ ಪ್ರವೇಶ ನೆರವೇರಿಸಲಾಗಿದೆ.
Published On - 7:00 pm, Sun, 30 April 23