Kannada News Photo gallery Prime Minister Narendra Modi's grand campaign in Chitradurga city, What is the memorable gift given to Modi by the people of Chitradurga , See here
ಕೋಟೆನಾಡು ಚಿತ್ರದುರ್ಗದ ಜನ ಪ್ರಧಾನಿ ನರೇಂದ್ರ ಮೋದಿಗೆ ನೀಡಿದ ಮೆಮೊರೇಬಲ್ ಗಿಫ್ಟ್ ಏನು? ಇಲ್ಲಿದೆ ನೋಡಿ
ಕೋಟೆನಾಡು ಚಿತ್ರದುರ್ಗ ನಗರದಲ್ಲಿ ನಿನ್ನೆ(ಮೇ.2) ಪ್ರಧಾನಿ ನರೇಂದ್ರ ಮೋದಿ ಅದ್ಧೂರಿ ಪ್ರಚಾರ ನಡೆಸಿದ್ದಾರೆ. 10ಕ್ಷೇತ್ರಗಳ ಬಿಜೆಪಿ ಅಬ್ಯರ್ಥಿಗಳ ಪರ ಮತಯಾಚನೆ ನಡೆಸಿದ್ದು, ಈ ವೇಳೆ ದುರ್ಗದ ಸೊಗಡು, ಸೊಬಗು ಮತ್ತು ಕಲೆಯನ್ನು ಬಿಂಬಿಸುವ ಉಡುಗೊರೆಯನ್ನು ಮೋದಿಗೆ ನೀಡಿ ಗೌರವಿಸಲಾಗಿದೆ. ಹಾಗಾದ್ರೆ, ಕೋಟೆನಾಡಿನ ಜನ ಮೋದಿಗೆ ನೀಡಿದ ಮೆಮೊರೇಬಲ್ ಗಿಫ್ಟ್ ಏನು? ಇಲ್ಲಿದೆ ನೋಡಿ.
1 / 10
ವಿಧಾನಸಭೆ ಚುನಾವಣೆ ಹಿನ್ನಲೆ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಕೋಟೆನಾಡು ಚಿತ್ರದುರ್ಗ ನಗರದಲ್ಲಿ ನಿನ್ನೆ(ಮೇ.2)10ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದ್ದರು.
2 / 10
ಬಹುತೇಕ ಇದೇ ಮೊದಲ ಸಲ ತಮಟೆ ಬಾರಿಸಿದ ಪ್ರಧಾನಿ ನರೇಂದ್ರ ಮೋದಿ. ರೈತರು ಬೆಳೆದ ಸೇಂಗಾದಿಂದಲೇ
ತಯಾರಿಸಿದ ವಿಶೇಷ ಹಾರ, ಪೇಟ ತೊಡಿಸಿ ಗೌರವಿಸಲಾಯಿತು. ಜೊತೆಗೆ ಇದೇ ವೇಳೆ ‘ತಾಯಿ ಮೋದಿ ಹಣೆಗೆ ವಿಜಯ ತಿಲಕವಿಡುತ್ತಿರುವ ಅಪರೂಪದ ಪೇಂಟಿಂಗ್ ಗಿಫ್ಟ್ ನೀಡಲಾಯಿತು.
3 / 10
ಹೌದು ಚಿತ್ರದುರ್ಗದಲ್ಲಿ ನಿನ್ನೆ ಬಿಜೆಪಿ ನವ ಕರ್ನಾಟಕ ಸಂಕಲ್ಪ ಸಮಾವೇಶ ಆಯೋಜಿಸಿತ್ತು. ತಮಟೆ ಬಾರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಚಾಲನೆ ನೀಡಿದರು. ನಾಲ್ಕು ಹಲಗೆಗಳನ್ನು ತರಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ಮೊಳಕಾಲ್ಮೂರು ಬಿಜೆಪಿ ಅಬ್ಯರ್ಥಿ ಎಸ್.ತಿಪ್ಪೇಸ್ವಾಮಿ ತಮಟೆ ಬಾರಿಸಿದರು.
4 / 10
ಇನ್ನು ಪ್ರಧಾನಿ ಮೋದಿ ಸಮಾವೇಶಕ್ಕೆ ಚಾಲನೆ ನೀಡುವ ಮುನ್ನ ವಿಶೇಷವಾಗಿ ಗೌರವಿಸಲಾಯಿತು. ಈ
ಭಾಗದಲ್ಲಿ ಪ್ರಮುಖವಾಗಿ ಬೆಳೆಯುವ ಸೇಂಗಾದ ಮೂಲಕ ತಯಾರಿಸಿದ ಹಾರ ಮತ್ತು ಪೇಟ ತೊಡಿಸಿ ಗೌರವಿಸಲಾಯಿತು.
5 / 10
ಇನ್ನು ಪ್ರಧಾನಿ ನರೇಂದ್ರ ಮೋದಿಗೆ ಮದಕರಿ ನಾಯಕರ ವಿಗ್ರಹವನ್ನು ಗಿಫ್ಟಾಗಿ ನೀಡಲಾಯಿತು. ಅಷ್ಟೇ ಅಲ್ಲದೆ
ತಾಯಿ ಹೀರಾಬೆನ್ ಅವರು ಸುಪುತ್ರ ನರೇಂದ್ರ ಮೋದಿ ಹಣೆಗೆ ವಿಜಯ ತಿಲಕವಿಟ್ಟು ಆಶೀರ್ವದಿಸುವ ಅಪರೂಪದ ಪೇಂಟಿಂಗ್ ಒಂದನ್ನು ನೀಡಿ ಗೌರವಿಸಲಾಯಿತು. ಈ ವೇಳೆ ವಿಶೇಷವಾದ ಪೇಂಟಿಂಗ್ ನೋಡಿ, ಮೋದಿ ಬಹು ಕುತೂಹಲದಿಂದ ವೀಕ್ಷಿಸಿದರು.
6 / 10
ಈ ವಿಶೇಷ ಹಾರ ತಯಾರಿಸಲು ಕಲಾವಿದರು ಸುಮಾರು ಐದಾರು ತಾಸುಗಳನ್ನೇ ತೆಗೆದುಕೊಂಡಿದ್ದಾರೆ. ಆರೇಳು ಕೆಜಿ ಸೇಂಗಾವನ್ನು ಬಳಕೆ ಮಾಡಲಾಗಿದೆ. ಸೇಂಗಾದ ಜತೆಗೆ ಲೇಸ್ ಮತ್ತು ಕುಚ್ ಗಳನ್ನು ಮತ್ತು ಹೂವನ್ನು ಬಳಸಲಾಗಿದೆ ಅಂತಾರೆ ಕಲಾವಿದ ಅಭಿ. ಇನ್ನು ಇದನ್ನ ಭರತ್, ಕೋಟಿ, ಸುನೀಲ್ ಸೇರಿ ಐದಾರು ಜನ ಸ್ನೇಹಿತರ ಗುಂಪಿನಿಂದ ಈ ವಿಶೇಷ ಪ್ರಯತ್ನ ಮಾಡಿದ್ದಾರೆ.
7 / 10
ಈ ವಿಶೇಷ ಹಾರ ತಯಾರಿಸಲು ಕಲಾವಿದರು ಸುಮಾರು ಐದಾರು ತಾಸುಗಳನ್ನೇ ತೆಗೆದುಕೊಂಡಿದ್ದಾರೆ. ಆರೇಳು ಕೆಜಿ ಸೇಂಗಾವನ್ನು ಬಳಕೆ ಮಾಡಲಾಗಿದೆ. ಸೇಂಗಾದ ಜತೆಗೆ ಲೇಸ್ ಮತ್ತು ಕುಚ್ ಗಳನ್ನು ಮತ್ತು ಹೂವನ್ನು ಬಳಸಲಾಗಿದೆ ಅಂತಾರೆ ಕಲಾವಿದ ಅಭಿ. ಇನ್ನು ಇದನ್ನ ಭರತ್, ಕೋಟಿ, ಸುನೀಲ್ ಸೇರಿ ಐದಾರು ಜನ ಸ್ನೇಹಿತರ ಗುಂಪಿನಿಂದ ಈ ವಿಶೇಷ ಪ್ರಯತ್ನ ಮಾಡಿದ್ದಾರೆ.
8 / 10
ಚಿತ್ರದುರ್ಗದ ಖ್ಯಾತ ಕಲಾವಿದ ಕ್ರಿಯೇಟಿವ್ ವಿರೇಶ್ ಈ ಅಪರೂಪದ ಚಿತ್ರವನ್ನು ಕೇವಲ ಅರ್ಧಗಂಟೆಯಲ್ಲಿ ಚಿತ್ರಿಸಿದ್ದಾರೆ. ಈ ಹಿಂದೆ ಮೋದಿ ಅವರು ದುರ್ಗಕ್ಕೆ ಬರುವ ಸಂದರ್ಭದಲ್ಲಿ ನಾನೊಂದು ಫೋಟರೈಟ್ ಚಿತ್ರ ಬರೆದಿದ್ದೆನು. ಆದ್ರೆ, ಆ ಚಿತ್ರ ಮೋದಿ ಅವರಿಗೆ ತಲುಪಿಸಲು ಸಾಧ್ಯವಾಗಿರಲಿಲ್ಲ.
9 / 10
ಆದ್ರೆ, ನಿನ್ನೆಯಷ್ಟೇ ಗೆಳೆಯ ಮೋಹನ್ ಆಗಮಿಸಿ ಪ್ರಧಾನಿಗೆ ಗಿಫ್ಟ್ ನೀಡಲೊಂದು ಒಳ್ಳೇ ಚಿತ್ರಬೇಕು ಎಂದಾಗ ನಾನು ಕೆಲಸದ ಒತ್ತಡದಲ್ಲೇ ಇದ್ದೆನು. ಆದ್ರೂ, ಒತ್ತಡದ ಮದ್ಯೆಯೇ ಅರ್ಧಗಂಟೆಯಲ್ಲಿ ಅಪರೂಪದ ಚಿತ್ರ ಬರೆದೆನು. ಅದು ಪ್ರಧಾನಿ ಮೋದಿ ಕೈ ಸೇರಿದ್ದಕ್ಕೆ ನಾನು ಧನ್ಯ ಎನ್ನುತ್ತಾರೆ.
10 / 10
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಬಿಜೆಪಿ ನವ ಕರ್ನಾಟಕ ಸಂಕಲ್ಪ ಸಮಾವೇಶ ಯಶಸ್ವಿಯಾಗಿ ಜರುಗಿದೆ. ಇದೇ ಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ದುರ್ಗದ ಜನರು ನೀಡಿದ ಅಪರೂಪದ ಗಿಫ್ಟ್ ಮತ್ತು ಗೌರವ ಅವಿಸ್ಮರಣೀಯವಾಗಿದೆ.