PV Sindhu: ಚೀನಾದ ಎದುರಾಳಿಯನ್ನು ಮಣಿಸಿ ಚಿನ್ನದ ಪದಕದ ಬರ ನೀಗಿಸಿಕೊಂಡ ಪಿವಿ ಸಿಂಧು

|

Updated on: Dec 01, 2024 | 6:05 PM

PV Sindhu: ಲಕ್ನೋದಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಇಂದು ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ ಪಿವಿ ಸಿಂಧು ಚೀನಾದ ಆಟಗಾರ್ತಿ ಲುವೊ ಯು ವು ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

1 / 5
ಲಕ್ನೋದಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಇಂದು ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ ಪಿವಿ ಸಿಂಧು ಚೀನಾದ ಆಟಗಾರ್ತಿ ಲುವೊ ಯು ವು ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

2 / 5
ಚೀನಾದ ಆಟಗಾರ್ತಿ ಲುವೊ ಯು ವು ಅವರನ್ನು 21-14 21-16 ನೇರ ಸೆಟ್​ಗಳಿಂದ ಮಣಿಸಿದ ಸಿಂಧು ಮೂರನೇ ಬಾರಿಗೆ ಸೈಯದ್ ಮೋದಿ ಇಂಟರ್ನ್ಯಾಷನಲ್ ಟೂರ್ನಮೆಂಟ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇದಕ್ಕೂ ಮೊದಲು ಸಿಂಧು, 2017 ಮತ್ತು 2022 ರಲ್ಲಿ ಈ ಟೂರ್ನಮೆಂಟ್ ಗೆದ್ದಿದ್ದರು.

3 / 5
ಫೈನಲ್ ಪಂದ್ಯದಲ್ಲಿ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾದ ಸಿಂಧು, ಚೀನಾ ಆಟಗಾರ್ತಿಗೆ ಎರಡೂ ಸೆಟ್‌ಗಳಲ್ಲಿ ತಿರುಗೇಟು ನೀಡುವ ಅವಕಾಶವನ್ನು ನೀಡಲಿಲ್ಲ. ಮೊದಲ ಸೆಟ್‌ನಿಂದಲೇ ಚೀನಾದ ಆಟಗಾರ್ತಿ ಲುವೊ ಯು ವು ಮೇಲೆ ಒತ್ತಡ ಹೇರಿದ ಪಿವಿ ಸಿಂಧು 21-14 ರಿಂದ ಮೊದಲ ಸೆಟ್ ಗೆದ್ದರು. ಇದಾದ ಬಳಿಕ ಎರಡನೇ ಸೆಟ್‌ನಲ್ಲೂ ತಮ್ಮ ಅಮೋಘ ಪ್ರದರ್ಶನ ಮುಂದುವರಿಸಿದ ಸಿಂಧು 21-16ರಿಂದ ಎರಡನೇ ಸೆಟ್ ಗೆದ್ದು ಪಂದ್ಯವನ್ನು ಗೆದ್ದುಕೊಂಡರು.

4 / 5
ಇಡೀ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಸಿಂಧುಗೆ ಇದು 2024 ರಲ್ಲಿ ಒಲಿದ ಮೊದಲ ಪ್ರಶಸ್ತಿಯಾಗಿದೆ. ಇದರ ಜೊತೆಗೆ ಎರಡು ವರ್ಷಗಳ ಪ್ರಶಸ್ತಿಯ ಬರವನ್ನು ಸಿಂಧು ನೀಗಿಸಿಕೊಂಡಿದ್ದಾರೆ. ವಾಸ್ತವವಾಗಿ 2022 ರ ಜುಲೈನಲ್ಲಿ ನಡೆದಿದ್ದ ಸಿಂಗಾಪುರ್ ಓಪನ್‌ನಲ್ಲಿ ಸಿಂಧು ಕೊನೆಯ ಬಾರಿ ಪ್ರಶಸ್ತಿ ಗೆದ್ದಿದ್ದರು.

5 / 5
ಆದಾಗ್ಯೂ ಸಿಂಧುಗೆ ಈ ವರ್ಷ ಅಷ್ಟು ವಿಶೇಷವಾಗಿರಲಿಲ್ಲ. ಈ ವರ್ಷ ಎರಡು ಟೂರ್ನಿಗಳಲ್ಲಿ ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದ ಸಿಂಧುಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದರ ಜೊತೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಸಿಂಧು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗದೆ 16ರ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿದ್ದರು. ಇದೀಗ ವರ್ಷಾಂತ್ಯದಲ್ಲಿ ಪ್ರಶಸ್ತಿ ಗೆದ್ದಿರುವ ಸಿಂಧುಗೆ ಮುಂದಿನ ವರ್ಷ ಇನ್ನಷ್ಟು ಪ್ರಶಸ್ತಿಗಳು ಸಿಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

Published On - 6:03 pm, Sun, 1 December 24