ದಿನವೂ ರಾಗಿ ತಿಂದರೆ ನಿಮ್ಮ ಆರೋಗ್ಯದಲ್ಲಾಗುತ್ತೆ ಅಚ್ಚರಿಯ ಬದಲಾವಣೆ
ಕರ್ನಾಟಕದಲ್ಲಿ ಇಡೀ ದೇಶದಲ್ಲೇ ಅತಿ ಹೆಚ್ಚು ರಾಗಿಯನ್ನು ಬೆಳೆಯಲಾಗುತ್ತದೆ. ಇಡೀ ದೇಶದ ರಾಗಿ ಉತ್ಪಾದನೆಯಲ್ಲಿ ಶೇ. 58ರಷ್ಟು ರಾಗಿಯನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ರಾಗಿ ಮುದ್ದೆ, ರಾಗಿ ದೋಸೆ, ರಾಗಿ ರೊಟ್ಟಿ, ರಾಗಿ ಅಂಬಲಿ, ರಾಗಿ ಜ್ಯೂಸ್ ಹೀಗೆ ನಾನಾ ರೀತಿಯ ಅಡುಗೆಯನ್ನು ತಯಾರಿಸಬಹುದು.
1 / 15
ರಾಗಿ ಆಫ್ರಿಕಾ ಮೂಲದ ಒಂದು ಸಿರಿಧಾನ್ಯ. ಇದನ್ನು ಉಗಾಂಡಾ ಮತ್ತು ಇಥಿಯೋಪಿಯಾದಲ್ಲಿ ಸಾವಿರಾರು ವರ್ಷಗಳಿಂದ ಬೆಳೆಸಲಾಗುತ್ತಿದೆ.
2 / 15
ಭಾರತದಲ್ಲಿ ರಾಗಿ ಬೆಳೆಯನ್ನು 4000 ವರ್ಷಗಳ ಹಿಂದೆ ಪರಿಚಯಿಸಲಾಯಿತು. ಹರಪ್ಪನ್ ನಾಗರಿಕತೆಯ ಪುರಾತತ್ತ್ವ ಶಾಸ್ತ್ರದ ಉತ್ಖನನಗಳಲ್ಲಿ ರಾಗಿಯ ಉಲ್ಲೇಖ ಕಂಡುಬಂದಿದೆ.
3 / 15
ಕರ್ನಾಟಕದಲ್ಲಿ ಇಡೀ ದೇಶದಲ್ಲೇ ಅತಿ ಹೆಚ್ಚು ರಾಗಿಯನ್ನು ಬೆಳೆಯಲಾಗುತ್ತದೆ. ಇಡೀ ದೇಶದ ರಾಗಿ ಉತ್ಪಾದನೆಯಲ್ಲಿ ಶೇ. 58ರಷ್ಟು ರಾಗಿಯನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ.
4 / 15
ಇತ್ತೀಚೆಗೆ ಸಿರಿಧಾನ್ಯಗಳ ಬಳಕೆಯ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡುತ್ತಿರುವ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲೂ ರಾಗಿಗೆ ಬೇಡಿಕೆ ಹೆಚ್ಚಾಗುತ್ತಿದೆ.
5 / 15
ಉತ್ತರ ಕರ್ನಾಟಕ, ಮಂಡ್ಯ, ಕೋಲಾರ ಮುಂತಾದ ಭಾಗಗಳಲ್ಲಿ ರಾಗಿಯೇ ಪ್ರಮುಖ ಆಹಾರ. ಅನ್ನದ ಬದಲಾಗಿ ರಾಗಿ ಮುದ್ದೆಯನ್ನೇ ಅಲ್ಲಿನ ಜನರು ಸೇವಿಸುತ್ತಾರೆ.
6 / 15
ರಾಗಿಯನ್ನು ತಿಂದರೆ ಅನೇಕ ರೋಗಗಳಿಂದ ದೂರ ಇರಬಹುದು ಎಂಬುದು ಸಾಬೀತಾಗಿದೆ. ಅದರಲ್ಲೂ ಮಧುಮೇಹ ಸಮಸ್ಯೆ ಇರುವವರಿಗಂತೂ ರಾಗಿ ಅತ್ಯುತ್ತಮ ಆಹಾರ.
7 / 15
ರಾಗಿ ಭಾರತೀಯ ಹವಾಮಾನ ಪರಿಸ್ಥಿತಿಗಳಿಗೆ ಚೆನ್ನಾಗಿ ಹೊಂದಿಕೊಳ್ಳುವ ಬೆಳೆಯಾಗಿದೆ. ರಾಗಿ ಮುದ್ದೆ, ರಾಗಿ ದೋಸೆ, ರಾಗಿ ರೊಟ್ಟಿ, ರಾಗಿ ಅಂಬಲಿ, ರಾಗಿ ಜ್ಯೂಸ್ ಹೀಗೆ ನಾನಾ ರೀತಿಯ ಅಡುಗೆಯನ್ನು ತಯಾರಿಸಬಹುದು.
8 / 15
ರಾಗಿಯನ್ನು ಪಾಲಿಶ್ ಮಾಡಬೇಕಾಗಿಲ್ಲ, ಇತರ ಸಿರಿಧಾನ್ಯಗಳಿಗಿಂತ ಭಿನ್ನವಾಗಿರುವ ಇದು ಸೇವಿಸಲು ಆರೋಗ್ಯಕರವಾಗಿದೆ. ತೂಕ ಇಳಿಸಿಕೊಳ್ಳಲು, ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಒದಗಿಸಲು, ಬಿರು ಬೇಸಿಗೆಯ ದಿನಗಳಲ್ಲಿಯೂ ನಿಮ್ಮ ದೇಹವನ್ನು ತಂಪಾಗಿರಿಸಲು ರಾಗಿ ಬೆಸ್ಟ್ ಆಯ್ಕೆಯಾಗಿದೆ. ರಾಗಿಯ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.
9 / 15
ರಾಗಿಯಲ್ಲಿ ಹೆಚ್ಚಿನ ಪ್ರೋಟೀನ್ ಅಂಶವಿದೆ. ಈ ಪ್ರೋಟೀನ್ ಅಂಶವು ಸಾಕಷ್ಟು ವಿಶಿಷ್ಟವಾಗಿದೆ. ಇದರಲ್ಲಿರುವ ಎಲುಸಿನಿನ್ ಸುಲಭವಾಗಿ ದೇಹಕ್ಕೆ ಸೇರಿಕೊಳ್ಳುತ್ತದೆ. ಈ ಹೆಚ್ಚಿನ ಪ್ರೋಟೀನ್ ಅಂಶವು ಅಪೌಷ್ಟಿಕತೆಯನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಸಸ್ಯಾಹಾರಿಗಳಿಗೆ ಅಗತ್ಯವಾದ ಪ್ರೋಟೀನ್ ಅನ್ನು ಈ ರಾಗಿ ಒದಗಿಸುತ್ತದೆ.
10 / 15
ರಾಗಿಯಲ್ಲಿ ಖನಿಜಗಳು ಸಮೃದ್ಧವಾಗಿದೆ. ಇದು ಇತರ ಧಾನ್ಯಗಳಲ್ಲಿ ಕಂಡುಬರುವ ಕ್ಯಾಲ್ಸಿಯಂ ಅಂಶಕ್ಕಿಂತ 5ರಿಂದ 30 ಪಟ್ಟು ಹೆಚ್ಚು ಎಂದು ಕಂಡುಬಂದಿದೆ. ಇದರಲ್ಲಿ ರಂಜಕ, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂಶ ಕೂಡ ಸಮೃದ್ಧವಾಗಿದೆ. ಮೂಳೆ ಸಾಂದ್ರತೆ ಮತ್ತು ಆರೋಗ್ಯವನ್ನು ಕಾಪಾಡುವಲ್ಲಿ ಕ್ಯಾಲ್ಸಿಯಂ ಪ್ರಮುಖ ಅಂಶವಾಗಿದೆ.
11 / 15
ರಾಗಿ ಮಧುಮೇಹವನ್ನು ನಿಯಂತ್ರಿಸುತ್ತದೆ. ಬಾರ್ಲಿ, ಅಕ್ಕಿ, ಜೋಳ ಮತ್ತು ಗೋಧಿಯಂತಹ ಧಾನ್ಯಗಳಿಗೆ ಹೋಲಿಸಿದರೆ ರಾಗಿಯ ಬೀಜದ ಹೊರಮೈನಲ್ಲಿ ಪಾಲಿಫಿನಾಲ್ ಸಮೃದ್ಧವಾಗಿದೆ. ಉದಾಹರಣೆಗೆ, ಇದು ಅಕ್ಕಿಯ ಫೀನಾಲಿಕ್ ಅಂಶಕ್ಕಿಂತ 40ಪಟ್ಟು ಮತ್ತು ಗೋಧಿಗಿಂತ 5 ಪಟ್ಟು ಹೆಚ್ಚಾಗಿದೆ. ರಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಮತ್ತು ಹೈಪರ್ಗ್ಲೈಸೆಮಿಕ್ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ನಿಯಂತ್ರಿಸುತ್ತದೆ.
12 / 15
ರಾಗಿಯು ಫುಡ್ ಪಾಯ್ಸನ್ ಉಂಟುಮಾಡುವ ಬ್ಯಾಸಿಲಸ್ ಸೆರಿಯಸ್, ಟೈಫಾಯಿಡ್ ತರಹದ ಜ್ವರವನ್ನು ಉಂಟುಮಾಡುವ ಸಾಲ್ಮೊನೆಲ್ಲಾ ಎಸ್ಪಿ ಮತ್ತು ಚರ್ಮ ಮತ್ತು ಮೃದು ಅಂಗಾಂಶಗಳ ಸೋಂಕಿನ ಪ್ರಾಥಮಿಕ ಕಾರಣಗಳಲ್ಲಿ ಒಂದಾದ ಸ್ಟ್ಯಾಫಿಲೋಕೊಕಸ್ ಔರೆಸ್ ಸೇರಿದಂತೆ ಹಲವಾರು ಬ್ಯಾಕ್ಟೀರಿಯಾಗಳ ವಿರುದ್ಧ ಕಾರ್ಯನಿರ್ವಹಿಸುತ್ತದೆ.
13 / 15
ರಾಗಿಯು ಕ್ಯಾನ್ಸರ್ ವಿರೋಧಿ ಸಾಮರ್ಥ್ಯವನ್ನು ಹೊಂದಿದೆ. ರಾಗಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ರಾಗಿ-ಆಧಾರಿತ ಆಹಾರ ಸೇವಿಸುವ ಜನರು ಗೋಧಿ ಅಥವಾ ಮೆಕ್ಕೆಜೋಳದ ಆಹಾರ ಸೇವಿಸುವವರಿಗಿಂತ ಕಡಿಮೆ ಅನ್ನನಾಳದ ಕ್ಯಾನ್ಸರ್ ಸಾಧ್ಯತೆಯನ್ನು ಹೊಂದಿರುತ್ತಾರೆ.
14 / 15
ರಾಗಿಯು ನಿಮ್ಮ ದೇಹದ ಕಾಂತಿಯನ್ನು ರಕ್ಷಿಸುತ್ತದೆ. ರಾಗಿ ಚರ್ಮದ ಆರೋಗ್ಯ ಮತ್ತು ವಯಸ್ಸಾಗುವಿಕೆಯನ್ನು ತಡೆಯುತ್ತದೆ. ಚರ್ಮದ ಮೇಲಿನ ಕಜ್ಜಿಗಳು, ಸುಕ್ಕುಗಳು, ಚರ್ಮದ ಸಮಸ್ಯೆಗಳನ್ನು ಇದು ಕಡಿಮೆ ಮಾಡುತ್ತದೆ. ಕೂದಲ ಬೆಳವಣಿಗೆಯನ್ನು ಉತ್ತಮಗೊಳಿಸುತ್ತದೆ.
15 / 15
ರಾಗಿಯು ದೇಹದ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ. ಹೃದಯರಕ್ತನಾಳದ ಕಾಯಿಲೆಯನ್ನು ತಡೆಯುತ್ತದೆ. ಹಾಗೇ, ತಾಯಂದಿರಲ್ಲಿ ಎದೆಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಜೀರ್ಣ ಕ್ರಿಯೆಯನ್ನು ಕೂಡ ಸುಲಭಗೊಳಿಸುತ್ತದೆ.