
ಸಾಮಾನ್ಯವಾಗಿ ಜನಸಾಮಾನ್ಯರಿಗೆ ಸಂಕಷ್ಟ ಎದುರಾದ್ರೆ ಎಲ್ಲರು ದೇವರ ಮೊರೆ ಹೋಗ್ತಾರೆ, ಸಂಕಷ್ಟ ಪರಿ ಹರಿಸುವಂತೆ ಬೇಡುತ್ತಾರೆ, ಆದ್ರೆ ಜನರ ಕಷ್ಟ ಆಲಿಸೊ ಪರಮಾತ್ಮನಿಗೆ ಕಷ್ಟ ಎದುರಾದ್ರೆ ಎಲ್ಲಿಗೆ ಹೋಗ್ಬೇಕು, ಯಾರ ಬಳಿ ದೂರು ಕೊಡಬೇಕು?? ಅಂತಹುದೆ ಒಂದು ಪರಿಸ್ಥಿತಿ ಈಗ ಮಂಡ್ಯದಲ್ಲಿ ಎದುರಾಗಿದೆ.

Ranganath swamy temple: ಅಸಲಿಗೆ ಸಂಕಷ್ಟ ಬಂದಿರುವುದಾದ್ರು ಯಾರಿಗೆ ಅಂತೀರಾ? ಈ ರಿಪೋರ್ಟ್ ನೋಡಿ. ಬೇಕಾ ಬಿಟ್ಟಿಯಾಗಿ ಬಿದ್ದಿರುವ ಬೃಹದಾಕಾರದ ಕಲ್ಲುಗಳು.. ಕಾಟಾಚಾರಕ್ಕೆ ಒಂದಿಷ್ಟು ಫೌಂಡೇಷನ್ ಹಾಕಿರುವ ಸ್ಥಿತಿಯಲ್ಲಿ ಕಾಣ ಸಿಗುತ್ತಿರೊ ಅವಶೇಷಗಳು.. ಅನಾಥವಾಗಿ ಬಿದ್ದಿರುವ ಗದ್ದೆ ರಂಗನಾಥಸ್ವಾಮಿ (Ranganath swamy temple) ಬೃಹತ್ ಮೂರ್ತಿ ಕಲ್ಲು.. ಈ ಎಲ್ಲ ದೃಶ್ಯ ಕಣ್ಣಿಗೆ ಬಿದ್ದಿದ್ದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂನಲ್ಲಿ.. (ವರದಿ: ಸೂರಜ್ ಪ್ರಸಾದ್, ಟಿವಿ9, ಮಂಡ್ಯ)

ಹೌದು ಹೈವೆ ಅಥಾರಿಟಿ ಆಫ್ ಇಂಡಿಯಾ (High way authority) ಹಾಗೂ ಸ್ಥಳೀಯ ತಾಲೂಕು ಆಡಳಿತ ಮಾಡಿದ ಎಡವಟ್ಟಿಗೆ ಒಂದು ದೇವಾಲಯವೇ ನಾಶವಾದಂತಾಗಿದೆ.. ಪುರಾಣಗಳ ಐತಿಹ್ಯವುಳ್ಳ ಪ್ರಸಿದ್ದ ಗದ್ದೆ ರಂಗನಾಥಸ್ವಾಮಿ ದೇವಾಲಯ ದುಃಸ್ಥಿತಿ ಯಾರಿಗೂ ಹೇಳ ತೀರದಂತಾಗಿದೆ.. ಸೂಕ್ತ ಪರಿಹಾರ ನೀಡುವ ಬದಲು ತಾಲೂಕು ಆಡಳಿತ ಕೈಕಟ್ಟಿ ಕುಳಿತುಕೊಂಡಿದ್ದೆ ಇಷ್ಟೆಲ್ಲಾ ಅಚಾತುರ್ಯ, ಅಪಚಾರಕ್ಕೆ ಕಾರಣವಾಗಿದೆ.

ಆಗಿದ್ದಿಷ್ಟೆ. ಬೆಂಗಳೂರು-ಮೈಸೂರು ದಶಪಥ ರಸ್ತೆಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ನಾಲ್ಕು ವರ್ಷಗಳ ಹಿಂದೆ ಹೈವೆ ರೋಡ್ ಗಾಗಿ ಜಮೀನುಗಳನ್ನ ಪರಬಾರೆ ಮಾಡಲಾಯ್ತು,ಈ ವೇಳೆ ಗದ್ದೆರಂಗನಾಥ ಸ್ವಾಮಿ ದೇವಾಲಯವಿದ್ದ ಸ್ಥಳ ಕೂಡ ಹೈವೆ ಅಥಾರಿಟಿ ಆಫ್ ಇಂಡಿಯಾ ಪರಭಾರೆ ಮಾಡಿಕೊಂಡಿತು. ಈ ವೇಳೆ ಗದ್ದೆ ರಂಗನಾಥ ಸ್ವಾಮಿ ದೇವಾಲಯವನ್ನ ತೆರವುಗೊಳಿಸಲಾಯ್ತ.

ಅದಕ್ಕೆ ಪರ್ಯಾಯಾ ದೇವಾಲಯ ನಿರ್ಮಾಣ ಮಾಡಿ ಕೊಡುವುದಾಗಿ ಹೈವೆ ಅಥಾರಿಟಿ ಹಾಗೂ ಸ್ಥಳೀಯ ಆಡಳಿತ ಮಾತು ಕೊಟ್ಟಿತ್ತು. ಕೊಟ್ಟ ಮಾತಿನಂತೆ ಸರ್ವೀಸ್ ರಸ್ತೆಯಲ್ಲಿ ಸೂಕ್ತ ಸ್ಥಳ ಸಹ ಗುರುತು ಮಾಡಿ ನಿರ್ಮಾಣ ಕಾರ್ಯ ಸಹ ಆರಂಭಮಾಡಿತ್ತು.

ಆದ್ರೆ ಆಗ ಆರಂಭಶೂರತ್ವ ತೋರಿದ್ದ ಸ್ಥಳೀಯ ಆಡಳಿತ ಹಾಗೂ ಹೈವೆ ಅಥಾರಿಟಿ ಈಗ ನಿರ್ಲಕ್ಷ್ಯ ವಹಿಸಿದ ಪರಿಣಾಮವೇ ಇಂದಿಗೂ ದೇವಾಲಯ ನಿರ್ಮಾಣ ಆಗಿಲ್ಲ, ಮೂರ್ತಿಯ ಕೆತ್ತನೆಗಳು ಹಾಗೆಯೆ ಬೀದಿ ಬದಿ ಬಿದ್ದಿವೆ ಎಂದು ಪುರೋಹಿತರಾದ ಭಾನುಪ್ರಕಾಶ್ ಶರ್ಮಾ ವಿಷಾದ ವ್ಯಕ್ತಪಡಿಸಿದ್ದಾರೆ.

ಗದ್ದೆ ರಂಗನಾಥ ಸ್ವಾಮಿ ದೇವಾಲಯಕ್ಕಾದ ಅನ್ಯಾಯ, ಅಪಚಾರವನ್ನ ಗ್ರಾಮಸ್ಥರು ವಿರೋಧಿಸಿದ್ದಾರೆ. ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳದೆ ಇದ್ರೆ ಉಗ್ರ ಹೋರಾಟದ ಎಚ್ಚರಿಕೆಯನ್ನ ಭಕ್ತಗಣ ಸರ್ಕಾರಕ್ಕೆ ನೀಡಿದ್ದಾರೆ. ಈ ಮಂದ ಅಧಿಕಾರಿಗಳು ಯಾವಾಗ ಎಚ್ಚೆತ್ತು ದೇವಾಲಯ ಪೂರ್ಣ ಮಾಡ್ತಾರೊ ಕಾದು ನೋಡ್ಬೇಕಿದೆ.