ಮೈಸೂರು ನಾಗರಹೊಳೆ ಅಭಯಾರಣ್ಯದಲ್ಲಿ ಬಿಳಿ ಜಿಂಕೆಯೊಂದು ಕಾಣಿಸಿಕೊಂಡಿದೆ.
ಸಫಾರಿಗೆ ಹೋದ ಪ್ರವಾಸಿಗರ ಕ್ಯಾಮೆರಾದಲ್ಲಿ ಬಿಳಿ ಜಿಂಕೆ ಸೆರೆಯಾಗಿದೆ.
ಭಗೀರ ಎಂದು ಕರೆಯಲ್ಪಡುವ ಕರಿ ಚಿರತೆ ನಂತರ ಮೈಸೂರಿನಲ್ಲಿ ಬಿಳಿ ಬಣ್ಣದ ಜಿಂಕೆ ಹವಾ
ಎಚ್.ಡಿ.ಕೋಟೆ ತಾಲ್ಲೂಕು ಅಂತರ ಸಂತೆ ವಲಯದ ತಾರಕ ಜಲಾಶಯದ ಹಿನ್ನೀರಿನಲ್ಲಿ ಜಿಂಕೆಗಳ ಗುಂಪಿನಲ್ಲಿ ಬಿಳಿ ಜಿಂಕೆ ಕಾಣಿಸಿಕೊಂಡಿದೆ.
ವನ್ಯಪ್ರಾಣಿಗಳ ವರ್ಣದ್ರವ್ಯದಲ್ಲಿನ ವ್ಯತ್ಯಾಸದಿಂದ ಜಿಂಕೆ ಬಣ್ಣದಲ್ಲಿ ಬದಲಾವಣೆಯಾಗಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಮೆಲನಿನ್ ಕೂದಲಿಗೆ ಬಣ್ಣವನ್ನು ನೀಡುವ ರಾಸಾಯನಿಕವಾಗಿದ್ದು, ಪಿಗ್ಮೆಂಟ್ ಕೋಶವು ಇದನ್ನು ಉತ್ಪಾದಿಸುತ್ತದೆ. ಮೆಲನಿನ್ ದೇಹದಲ್ಲಿ ಹೆಚ್ಚಾದರೆ ಬಿಳಿ ಬಣ್ಣ, ಕಡಿಮೆಯಾದರೆ ಕಪ್ಪು ಬಣ್ಣದಲ್ಲಿ ಪ್ರಾಣಿಗಳು ಜನನವಾಗುತ್ತವೆ.
Published On - 1:37 pm, Sun, 11 June 23