ಭಾರತದಲ್ಲಿ ರೋಚಕತೆ ಸೃಷ್ಟಿಸಿರುವ ಹೊಸ ರಿಯಲ್ ಮಿ 12X ಫೋನ್ ಇಂದು ಬಿಡುಗಡೆ
Realme 12X Launch Today: ರಿಯಲ್ ಮಿ 12X ಸ್ಮಾರ್ಟ್ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಬಹುದು. ಈ ಹ್ಯಾಂಡ್‌ಸೆಟ್ ಆಕ್ಟಾ-ಕೋರ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಯಿಂದ ಚಾಲಿತವಾಗಿದೆ, ಜೊತೆಗೆ 12GB RAM ಇರುತ್ತದೆ. ಡೈನಾಮಿಕ್ RAM ವೈಶಿಷ್ಟ್ಯದೊಂದಿಗೆ, ಲಭ್ಯವಿರುವ ಮೆಮೊರಿಯನ್ನು 24GB ವರೆಗೆ ವಿಸ್ತರಿಸಬಹುದು.
1 / 5
ಪ್ರಸಿದ್ಧ ರಿಯಲ್ ಮಿ ಕಂಪನಿ ತನ್ನ 12 ಸರಣಿಯ ಅಡಿಯಲ್ಲಿ ಹೊಸ ರಿಯಲ್ ಮಿ 12X (Realme 12X) ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಇಂದು ಬಿಡುಗಡೆ ಮಾಡಲಿದೆ. ಈ ಫೋನ್ ಅನ್ನು ಈಗಾಗಲೇ ಚೀನಾದಲ್ಲಿ ಅನಾವರಣಗೊಳಿಸಿದೆ. ಇದು ಆಂಡ್ರಾಯ್ಡ್ 14-ಆಧಾರಿತ ರಿಯಲ್ ಮಿ UI 5.0 ಕಸ್ಟಮ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
2 / 5
ರಿಯಲ್ ಮಿ 12X ಸ್ಮಾರ್ಟ್ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಬಹುದು. ಚೀನಾದಲ್ಲಿ ಇದರ ಮೂಲ 12GB RAM + 256GB ಸ್ಟೋರೇಜ್ ರೂಪಾಂತರಕ್ಕಾಗಿ CNY 1,399. ಅಂತೆಯೆ 12GB + 512GB ಮಾದರಿಯಲ್ಲಿ ಬರುತ್ತದೆ, ಇದರ ಬೆಲೆ CNY 1,599. ಭಾರತದಲ್ಲಿ ಈ ಫೋನ್ ಬೆಲೆ 12,000 ರೂ. ಒಳಗಡೆ ಇರಲಿದೆ ಎಂದು ಹೇಳಲಾಗಿದೆ.
3 / 5
ಡ್ಯುಯಲ್-ಸಿಮ್ (ನ್ಯಾನೊ) ರಿಯಲ್ ಮಿ 12X ಆಂಡ್ರಾಯ್ಡ್ 14-ಆಧಾರಿತ ರಿಯಲ್ ಮಿ UI 5.0 ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 6.67-ಇಂಚಿನ ಪೂರ್ಣ-HD+ (1,080×2,400 ಪಿಕ್ಸೆಲ್‌ಗಳು) LCD ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರ ಮತ್ತು 625 nits ಗರಿಷ್ಠ ಬ್ರೈಟ್ನೆಸ್ ಹೊಂದಿದೆ.
4 / 5
ಈ ಹ್ಯಾಂಡ್‌ಸೆಟ್ ಆಕ್ಟಾ-ಕೋರ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಯಿಂದ ಚಾಲಿತವಾಗಿದೆ, ಜೊತೆಗೆ 12GB RAM ಇರುತ್ತದೆ. ಡೈನಾಮಿಕ್ RAM ವೈಶಿಷ್ಟ್ಯದೊಂದಿಗೆ, ಲಭ್ಯವಿರುವ ಮೆಮೊರಿಯನ್ನು 24GB ವರೆಗೆ ವಿಸ್ತರಿಸಬಹುದು. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi, ಬ್ಲೂಟೂತ್, GPS ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವಿದೆ. 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ.
5 / 5
ಕ್ಯಾಮೆರಾ ವಿಚಾರಕ್ಕೆ ಬಂದರೆ, ರಿಯಲ್ ಮಿ 12X 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದಿಂದ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಮುಂಭಾಗದಲ್ಲಿ, ಇದು 8-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಒಳಗೊಂಡಿದೆ. ಈ ಫೋನ್ 512GB ವರೆಗೆ ಆನ್‌ಬೋರ್ಡ್ ಸಂಗ್ರಹಣೆಯನ್ನು ನೀಡುತ್ತದೆ.