
ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಒಂದರ ಹಿಂದೆ ಒಂದರಂತೆ ಸರಣಿ ಫೋನ್ ಗಳನ್ನು ಬಿಡುಗಡೆ ಮಾಡುತ್ತಿರುವ ಚೀನಾದ ಪ್ರಸಿದ್ಧ ಮೊಬೈಲ್ ಕಂಪನಿ ರಿಯಲ್ ಮಿ ಇದೀಗ ಮತ್ತೊಂದು ಹೊಸ ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಅದುವೇ ರಿಯಲ್ ಮಿ ಜಿಟಿ ನಿಯೋ 3 (RealMe GT Neo 3). ಈ ಸ್ಮಾರ್ಟ್ ಫೋನ್ ಇದೇ ಮಾರ್ಚ್ 22 ರಂದು ಬಿಡುಗಡೆಯಾಗಲಿದೆ. ಆರಂಭದಲ್ಲಿ ಚೀನಾದಲ್ಲಿ ಅನಾವರಣಗೊಳ್ಳಲಿರುವ ಈ ಫೋನ್ ನಂತರ ವಿಶ್ವದಾದ್ಯಂತ ಲಭ್ಯವಾಗಲಿದೆ.

ಅಚ್ಚರಿ ಎಂದರೆ ಈ RealMe GT Neo 3 ಸ್ಮಾರ್ಟ್ ಫೋನ್ ಬರೋಬ್ಬರಿ 150 ವ್ಯಾಟ್ಗಳ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತಿರುವ ಮೊದಲ ಸ್ಮಾರ್ಟ್ ಫೋನ್ ಆಗಿದೆ. ಈ ಫೋನ್ 4500mAh ಬ್ಯಾಟರಿಯೊಂದಿಗೆ ಬರುತ್ತದೆ. ಇದರಲ್ಲಿ ಬ್ಯಾಟರಿಯನ್ನು ಕೇವಲ 5 ನಿಮಿಷಗಳಲ್ಲಿ 50% ವರೆಗೆ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ.

RealMe GT Neo 3 ಹಿಂಬದಿಯ ಮುಖ್ಯ ಕ್ಯಾಮೆರಾ 50-ಮೆಗಾಪಿಕ್ಸೆಲ್ ನಿಂದ ಕೂಡಿದೆಯಂತೆ. ಸೋನಿ IMX766 ಸೆನ್ಸಾರ್ ಕ್ಯಾಮೆರಾ ಈ ಫೋನಿನ ವಿಶೇಷತೆಗಳಲ್ಲಿ ಒಂದು.


Published On - 8:35 am, Sun, 20 March 22