ಸಂಗಾತಿ ಮಾತನಾಡುವಾಗ ಅಡ್ಡಿಪಡಿಸಬೇಡಿ. ತಾಳ್ಮೆಯಿಂದಿರಿ ಮತ್ತು ವ್ಯಕ್ತಿ ಮಾತನಾಡುವುದನ್ನು ಆಲಿಸಿ ಮತ್ತು ಅವರ ಹೇಳಿಕೆಯನ್ನು ಪೂರ್ಣಗೊಳಿಸುವಮೊದಲೇ ಪ್ರತಿಕ್ರಿಯಿಸಬೇಡಿ.
ನಾವು ಅಸಮಾಧಾನಗೊಂಡಾಗ ಒಮ್ಮೆಲೇ ಮನಸ್ಸಿನಲ್ಲಿರುವುದನ್ನು ಕೋಪದ ಮೂಲಕ ಹೊರಹಾಕುತ್ತೇವೆ. ಆದರೆ ಕುಳಿತು ಯೋಚನೆ ಮಾಡಿದಾಗ ಅದು ನಮಗೆ ತಪ್ಪೆಂದು ತಿಳಿಯುತ್ತದೆ. ಹೀಗಾಗಿ ಎಷ್ಟೇ ಕೋಪವಿದ್ದರೂ ಸ್ವಲ್ಪ ಸಮಾಧಾನದಿಂದ ಯೋಚಿಸಿ.
ವಾದ ಮಾಡುವಾಗ ಸಂಗಾತಿಗೆ ನೋವಾಗುವಂತೆ ಪದೇ ಪದೇ ಅವರ ಹೆಸರನ್ನು ಬಳಸಿ ಬೈಯಬೇಡಿ, ನೀವು ಹೇಳುವುದನ್ನು ನಿಧಾನವಾಗಿಯೇ ಹೇಳಬಹುದಲ್ಲವೇ?
ಊಹೆ ಮಾಡಿ, ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಒಮ್ಮೆಗೆ ರಿಯಾಕ್ಟ್ ಮಾಡಬೇಡಿ, ಗಂಭೀರ ವಿಷಯವನ್ನು ಕೂಡ ಕುಳಿತು ಬಗೆಹರಿಸಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ. ಊಹೆ ಮಾಡುವುದರಿಂದ ಸಾಕಷ್ಟು ಬೇಡದ ಪ್ರಶ್ನೆಗಳು ನಿಮ್ಮ ಮನಸ್ಸನ್ನು ಕಾಡುತ್ತದೆ.
ಏರು ಧ್ವನಿಯಲ್ಲಿ ಮಾತನಾಡುವುದು ನಿಮ್ಮ ಮೇಲೆ ಬೇರೆಯವರು ಇಟ್ಟಿರುವ ವಿಶ್ವಾಸವನ್ನು ದೂರ ಮಾಡಬಹುದು. ಹಾಗೆ ಬೇರೊಬ್ಬರ ಜತೆ ಮಾತನಾಡುವಾಗ ಧ್ವನಿ ತಗ್ಗಿಸಿ ಮಾತನಾಡಿ.