
ಹದಿಹರೆಯದಲ್ಲಿಯೇ ಆಕರ್ಷಣೆಗೆ ಒಳಗಾಗುವುದರಿಂದ ಪ್ರೀತಿಯಲ್ಲಿ ಮೋಸ ಹೋಗುವ ಪ್ರಸಂಗಗಳು ಸಾಕಷ್ಟು ಕಂಡುಬರುತ್ತಿದೆ. ಇದರಿಂದಾಗಿ ಇಂದು ಸಾಕಷ್ಟು ಜನರು ಪ್ರೀತಿ ಮಾಡಲು ಹೆದರಿಕೊಳ್ಳುತ್ತಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.

ಪ್ರೀತಿ ಎಂಬುದು ಎರಡು ಜೀವಗಳ ನಡುವಿನ ಪರಸ್ಪರ ನಂಬಿಕೆಯ ಮೇಲೆ ನಿಂತಿದೆ. ಆದ್ದರಿಂದ ಇಂದು ಅನೇಕ ಸಂಬಂಧಗಳು ಭಿನ್ನಾಭಿಪ್ರಾಯಗಳಿಂದ ಬಿರುಕು ಬಿಡುತ್ತಿದೆ. ಇದರಿಂದಾಗಿ ಅನೇಕರು ಪ್ರೀತಿ ವಿಷಯದಲ್ಲಿ ದೂರ ಸರಿಯುತ್ತಿದ್ದಾರೆ ಎಂದು ಮನಶ್ಶಾಸ್ತ್ರಜ್ಞ ಎಮಿಲಿ ಹೆಚ್ ಸ್ಯಾಂಡರ್ಸ್ ವಿವರಿಸುತ್ತಾರೆ.

ಈ ಹಿಂದೆ ಪ್ರೀತಿಯಲ್ಲಿ ಸಾಕಷ್ಟು ನೋವು ಅನುಭವಿಸಿರುವವರು ಮತ್ತೇ ಮತ್ತೇ ಅದೇ ನೋವಿಗೆ ಒಳಗಾಗುತ್ತೇವೆ ಎಂದು ಭಯಪಡುತ್ತಾರೆ. ಆದ್ದರಿಂದ ಮತ್ತೇ ಪ್ರೀತಿ ಬೆಳೆಸಲು ಅವರು ಇಷ್ಟ ಪಡುವುದಿಲ್ಲ.

ಅತಿಯಾದ ಪ್ರೀತಿ ಕೆಲವೊಮ್ಮೆ ನಿಮ್ಮ ಸಂಗಾತಿ ಹೇಳಿದಂತೆ ಕೇಳುವಂತೆ ಮಾಡುತ್ತದೆ. ಇದರಿಂದಾಗಿ ನಿಮ್ಮ ಸಂಗಾತಿಗೆ ಖುಷಿ ನೀಡಬಹುದು ಆದರೆ ನಿಮ್ಮ ಮನಸ್ಸಿಗೆ ನೀವು ನೋಡಿ ಮಾಡಿಕೊಳ್ಳುತ್ತೀರಿ. ಆದ್ದರಿಂದ ಇದೇ ಭಯದಿಂದ ಸಾಕಷ್ಟು ಜನರು ಪ್ರೀತಿಯಿಂದ ದೂರ ಉಳಿದು ಬಿಡುತ್ತಾರೆ.

ಒತ್ತಡದ ಜೀವನದ ನಡುವೆ ಸಂಗಾಂತಿಯೊಂದಿಗೆ ಸರಿಯಾಗಿ ಸಮಯ ಕಳೆಯಲು ಸಾಧ್ಯವಾಗದ್ದಿದ್ದಾಗ, ಇದು ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಇಂದು ನಿಜವಾದ ಪ್ರೀತಿ ಕಂಡುಕೊಳ್ಳಲು ಭಯ ಪಡುತ್ತಾರೆ.

ಇಂದಿನ ಪ್ರೀತಿಯ ಪ್ರಾರಂಭದ ತಿಂಗಳುಗಳಲ್ಲಿಯೇ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ಇರುವುದರಿಂದ ಅಲ್ಲಿ ಜಗಳ ಮನಸ್ತಾಪ, ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಇರುತ್ತದೆ. ಇದೂ ಕೂಡ ನಿಜವಾದ ಪ್ರೀತಿಯನ್ನು ಕಂಡುಕೊಳ್ಳುವಲ್ಲಿ ಸೋಲಲು ಪ್ರಮುಖ ಕಾರಣವಾಗಿದೆ.

ಅತಿಯಾದ ಕಾಳಜಿ, ಪ್ರೀತಿ ನಿಮ್ಮ ಸಂಗಾತಿಗೆ ಉಸಿರುಗಟ್ಟಿದಂತೆ ಆಗಬಹುದು. ಇದು ನಿಮ್ಮ ಸಂಬಂಧದಲ್ಲಿ ಬಿರುಕು ಬಿಡುವಂತೆ ಮಾಡುತ್ತದೆ. ಆದ್ದರಿಂದ ಅತಿಯಾಗಿ ಪ್ರೀತಿಸಿ ನೊಂದವರು ಮತ್ತೇ ಮತ್ತೇ ಅದೇ ನೋವಿಗೆ ಒಳಗಾಗುತ್ತೇವೆ ಎಂದು ಭಯಪಡುತ್ತಾರೆ ಎಂದು ಸ್ಯಾಂಡರ್ಸ್ ವಿವರಿಸುತ್ತಾರೆ.