Mukesh Ambani: ಜಗತ್ತಿನ 12ನೇ ಶ್ರೀಮಂತ ಮುಕೇಶ್ ಅಂಬಾನಿ ಆಸ್ತಿ ಹಂಚಿಕೆಯ ಪ್ಲ್ಯಾನ್ ತಯಾರಿ!​

| Updated By: Srinivas Mata

Updated on: Nov 23, 2021 | 5:39 PM

ಜಗತ್ತಿನ 12ನೇ ಅತ್ಯಂತ ಶ್ರೀಮಂತ, ಉದ್ಯಮಿ ಮುಕೇಶ್​ ಅಂಬಾನಿ ಉದ್ಯಮ ಸಾಮ್ರಾಜ್ಯದ ಹಂಚಿಕೆ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

1 / 6
ಭಾರತವಷ್ಟೇ ಅಲ್ಲ, ಏಷ್ಯಾದ ಶ್ರೀಮಂತ, ಉದ್ಯಮಿ ಮುಕೇಶ್ ಅಂಬಾನಿ ಈಗಾಗಲೇ ತಮ್ಮ ಉತ್ತರಾಧಿಕಾರದ ಪ್ಲ್ಯಾನ್ ಸಿದ್ಧ ಮಾಡುತ್ತಿದ್ದಾರೆ. ತಮ್ಮ ಉದ್ಯಮ ಸಾಮ್ರಾಜ್ಯವನ್ನು ಮಕ್ಕಳಿಗೆ ಹಸ್ತಾಂತರಿಸಲು ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆಸ್ತಿ, ಉದ್ಯಮಕ್ಕಾಗಿ ಸೋದರ ಅನಿಲ್ ಅಂಬಾನಿ ನಡುವೆ ನಡೆದ ಕಲಹದಂತೆ ತಮ್ಮ ಮಕ್ಕಳ ಮಧ್ಯೆ ಕಲಹ ಆಗದಂತೆ ಎಚ್ಚರಿಕೆಯ ಪ್ಲ್ಯಾನ್ ಅನ್ನು ಮುಕೇಶ್ ಅಂಬಾನಿ ರೂಪಿಸುತ್ತಿದ್ದಾರೆ. ತಮ್ಮ ಉದ್ಯಮ ಸಾಮ್ರಾಜ್ಯವನ್ನು ಮಕ್ಕಳಿಗೆ ಹಸ್ತಾಂತರಿಸಲು ಮುಕೇಶ್ ಅಂಬಾನಿ ಮಾಡಿಕೊಂಡಿರುವ ಯೋಜನೆ ಏನು ಎನ್ನುವುದರ ಫುಲ್ ಡೀಟೈಲ್ಸ್ ಇಲ್ಲಿದೆ. 

ದೊಡ್ಡ ದೊಡ್ಡ ಉದ್ಯಮ ಸಾಮ್ರಾಜ್ಯಗಳನ್ನು ಕಟ್ಟಿ ಬೆಳೆಸುವುದು ನಿಜಕ್ಕೂ ಸವಾಲು. ಬಳಿಕ ಆ ಉದ್ಯಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳುವುದು ಮತ್ತೊಂದು ಸವಾಲು. ಈಗ ನಮ್ಮ ದೇಶ ಹಾಗೂ ಏಷ್ಯಾದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ತಮ್ಮ ಉದ್ಯಮ ಸಾಮ್ರಾಜ್ಯ ಮಕ್ಕಳ ನಡುವೆ ಇಬ್ಭಾಗ ಆಗದಂತೆ ಪ್ಲ್ಯಾನ್ ಮಾಡಿದ್ದಾರೆ. ಆ ಪ್ಲ್ಯಾನ್ ಅನ್ನು ಸದ್ದಿಲ್ಲದೆ ಕಾರ್ಯರೂಪಕ್ಕೂ ತರುತ್ತಿದ್ದಾರೆ. ಇದರಿಂದ ಮುಕೇಶ್ ಅಂಬಾನಿ ಉದ್ಯಮ ಸಾಮ್ರಾಜ್ಯವೇ ಭಾರತ ಹಾಗೂ ಏಷ್ಯಾದಲ್ಲಿ ದೊಡ್ಡದಾಗಿ ಉಳಿಯಲಿದೆ. ಅನೇಕ ವರ್ಷಗಳ ಕಾಲ ಮುಕೇಶ್ ಅಂಬಾನಿ ಅವರು ವಾಲ್ಟನ್‌ನಿಂದ ಕೋಚ್‌ಗಳವರೆಗಿನ ಬಿಲಿಯನೇರ್ ಕುಟುಂಬಗಳು ಅವರು ಸಂಪಾದಿಸಿದ ಉದ್ಯಮ ಸಾಮ್ರಾಜ್ಯವನ್ನು  ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಿದ ವಿಧಾನಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಇತ್ತೀಚೆಗೆ, ಆ ಪ್ರಕ್ರಿಯೆಯು ತೀವ್ರಗೊಂಡಿದೆ.  ಏಷ್ಯಾದ ಶ್ರೀಮಂತ ವ್ಯಕ್ತಿ ತನ್ನ 208 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಉದ್ಯಮ ಸಾಮ್ರಾಜ್ಯವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ನೀಲನಕ್ಷೆಯನ್ನು ಸಿದ್ದಪಡಿಸಿದ್ದಾರೆ. ಮುಕೇಶ್ ಅಂಬಾನಿ ಪ್ಲ್ಯಾನ್​ನಿಂದಾಗಿ ಅವರ ಸ್ವಂತ ಕುಟುಂಬವೂ ಸೇರಿದಂತೆ  ಅನೇಕ ಶ್ರೀಮಂತ ಕುಟುಂಬಗಳಲ್ಲಿ ನಡೆದ ಉತ್ತರಾಧಿಕಾರದ ಯುದ್ಧವನ್ನು ತಪ್ಪಿಸಲಿದೆ.

ಭಾರತವಷ್ಟೇ ಅಲ್ಲ, ಏಷ್ಯಾದ ಶ್ರೀಮಂತ, ಉದ್ಯಮಿ ಮುಕೇಶ್ ಅಂಬಾನಿ ಈಗಾಗಲೇ ತಮ್ಮ ಉತ್ತರಾಧಿಕಾರದ ಪ್ಲ್ಯಾನ್ ಸಿದ್ಧ ಮಾಡುತ್ತಿದ್ದಾರೆ. ತಮ್ಮ ಉದ್ಯಮ ಸಾಮ್ರಾಜ್ಯವನ್ನು ಮಕ್ಕಳಿಗೆ ಹಸ್ತಾಂತರಿಸಲು ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆಸ್ತಿ, ಉದ್ಯಮಕ್ಕಾಗಿ ಸೋದರ ಅನಿಲ್ ಅಂಬಾನಿ ನಡುವೆ ನಡೆದ ಕಲಹದಂತೆ ತಮ್ಮ ಮಕ್ಕಳ ಮಧ್ಯೆ ಕಲಹ ಆಗದಂತೆ ಎಚ್ಚರಿಕೆಯ ಪ್ಲ್ಯಾನ್ ಅನ್ನು ಮುಕೇಶ್ ಅಂಬಾನಿ ರೂಪಿಸುತ್ತಿದ್ದಾರೆ. ತಮ್ಮ ಉದ್ಯಮ ಸಾಮ್ರಾಜ್ಯವನ್ನು ಮಕ್ಕಳಿಗೆ ಹಸ್ತಾಂತರಿಸಲು ಮುಕೇಶ್ ಅಂಬಾನಿ ಮಾಡಿಕೊಂಡಿರುವ ಯೋಜನೆ ಏನು ಎನ್ನುವುದರ ಫುಲ್ ಡೀಟೈಲ್ಸ್ ಇಲ್ಲಿದೆ. ದೊಡ್ಡ ದೊಡ್ಡ ಉದ್ಯಮ ಸಾಮ್ರಾಜ್ಯಗಳನ್ನು ಕಟ್ಟಿ ಬೆಳೆಸುವುದು ನಿಜಕ್ಕೂ ಸವಾಲು. ಬಳಿಕ ಆ ಉದ್ಯಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳುವುದು ಮತ್ತೊಂದು ಸವಾಲು. ಈಗ ನಮ್ಮ ದೇಶ ಹಾಗೂ ಏಷ್ಯಾದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ತಮ್ಮ ಉದ್ಯಮ ಸಾಮ್ರಾಜ್ಯ ಮಕ್ಕಳ ನಡುವೆ ಇಬ್ಭಾಗ ಆಗದಂತೆ ಪ್ಲ್ಯಾನ್ ಮಾಡಿದ್ದಾರೆ. ಆ ಪ್ಲ್ಯಾನ್ ಅನ್ನು ಸದ್ದಿಲ್ಲದೆ ಕಾರ್ಯರೂಪಕ್ಕೂ ತರುತ್ತಿದ್ದಾರೆ. ಇದರಿಂದ ಮುಕೇಶ್ ಅಂಬಾನಿ ಉದ್ಯಮ ಸಾಮ್ರಾಜ್ಯವೇ ಭಾರತ ಹಾಗೂ ಏಷ್ಯಾದಲ್ಲಿ ದೊಡ್ಡದಾಗಿ ಉಳಿಯಲಿದೆ. ಅನೇಕ ವರ್ಷಗಳ ಕಾಲ ಮುಕೇಶ್ ಅಂಬಾನಿ ಅವರು ವಾಲ್ಟನ್‌ನಿಂದ ಕೋಚ್‌ಗಳವರೆಗಿನ ಬಿಲಿಯನೇರ್ ಕುಟುಂಬಗಳು ಅವರು ಸಂಪಾದಿಸಿದ ಉದ್ಯಮ ಸಾಮ್ರಾಜ್ಯವನ್ನು ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಿದ ವಿಧಾನಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಇತ್ತೀಚೆಗೆ, ಆ ಪ್ರಕ್ರಿಯೆಯು ತೀವ್ರಗೊಂಡಿದೆ. ಏಷ್ಯಾದ ಶ್ರೀಮಂತ ವ್ಯಕ್ತಿ ತನ್ನ 208 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಉದ್ಯಮ ಸಾಮ್ರಾಜ್ಯವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ನೀಲನಕ್ಷೆಯನ್ನು ಸಿದ್ದಪಡಿಸಿದ್ದಾರೆ. ಮುಕೇಶ್ ಅಂಬಾನಿ ಪ್ಲ್ಯಾನ್​ನಿಂದಾಗಿ ಅವರ ಸ್ವಂತ ಕುಟುಂಬವೂ ಸೇರಿದಂತೆ ಅನೇಕ ಶ್ರೀಮಂತ ಕುಟುಂಬಗಳಲ್ಲಿ ನಡೆದ ಉತ್ತರಾಧಿಕಾರದ ಯುದ್ಧವನ್ನು ತಪ್ಪಿಸಲಿದೆ.

2 / 6
ವಾಲ್ಟನ್ ಕುಟುಂಬದ ಉದ್ಯಮ ಸಾಮ್ರಾಜ್ಯದ ಉತ್ತರಾಧಿಕಾರ ಪ್ಲ್ಯಾನ್ ಇಷ್ಟಪಟ್ಟಿದ್ದಾರೆ
64 ವರ್ಷ ವಯಸ್ಸಿನ ಮುಕೇಶ್ ಅಂಬಾನಿ ಅವರು ವಾಲ್‌ಮಾರ್ಟ್ ಇಂಕ್‌ನ ವಾಲ್ಟನ್ ಕುಟುಂಬದ ಉದ್ಯಮ ಸಾಮ್ರಾಜ್ಯದ ಉತ್ತರಾಧಿಕಾರ ಪ್ಲ್ಯಾನ್ ಅನ್ನು ಇಷ್ಟಪಟ್ಟಿದ್ದಾರೆ. ಅದೇ ರೀತಿ ತಮ್ಮ ಕುಟುಂಬದ ಉದ್ಯಮ ಸಾಮ್ರಾಜ್ಯವನ್ನು ಕೂಡ ಮಕ್ಕಳಿಗೆ ಹಸ್ತಾಂತರ ಮಾಡಬೇಕೆಂದು ಮುಕೇಶ್ ಅಂಬಾನಿ ಬಯಕೆ ಎಂಬುದನ್ನು ಈ ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂಪತ್ತಿನ ಅತಿದೊಡ್ಡ ವರ್ಗಾವಣೆಗೆ ವಾಲ್ಟನ್ ಕುಟುಂಬದ ಉದ್ಯಮ ಸಾಮ್ರಾಜ್ಯ ವರ್ಗಾವಣೆಯು ಮಾದರಿಯಾಗಿದೆ. ಮುಕೇಶ್ ಅಂಬಾನಿ ಅವರು ಟ್ರಸ್ಟ್ ರಚಿಸುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸೇರಿದಂತೆ ತಮ್ಮ ಕುಟುಂಬದ ಉದ್ಯಮ, ಆಸ್ತಿ, ಕಂಪೆನಿಗಳನ್ನು ಅದಕ್ಕೆ ವರ್ಗಾವಣೆ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಮುಕೇಶ್ ಅಂಬಾನಿ, ಅವರ ಪತ್ನಿ ನೀತಾ ಮತ್ತು ಮೂವರು ಮಕ್ಕಳು ಹೊಸ ಟ್ರಸ್ಟ್ ನ ಪಾಲುದಾರರಾಗಿರುತ್ತಾರೆ. ಈ ಟ್ರಸ್ಟ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸೇರಿದಂತೆ ಎಲ್ಲ ಕಂಪೆನಿ, ಉದ್ಯಮ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ. 

ಟ್ರಸ್ಟ್ ನ ಆಡಳಿತ ಮಂಡಳಿಯಲ್ಲಿ ಮುಕೇಶ್ ಅಂಬಾನಿ ಅವರ ದೀರ್ಘಕಾಲದ ವಿಶ್ವಾಸಾರ್ಹ ವ್ಯಕ್ತಿಗಳು ಸಲಹೆಗಾರರಾಗಿ ಇರುತ್ತಾರೆ. ಆದರೂ ಭಾರತದ ಅತ್ಯಂತ ಪ್ರಭಾವಶಾಲಿ ಕಂಪೆನಿಯ ದಿನನಿತ್ಯದ ಕಾರ್ಯಾಚರಣೆಗಳನ್ನು ಹೊರಗಿನವರು, ವೃತ್ತಿಪರರು ನಿರ್ವಹಿಸುತ್ತಾರೆ. ಇಂಥವರಿಗೆ ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್‌ಗಳನ್ನು ದೂರಸಂಪರ್ಕ, ಇ-ಕಾಮರ್ಸ್ ಮತ್ತು ಗ್ರೀನ್ ಎನರ್ಜಿ ಸೇರಿದಂತೆ ವಿವಿಧ ವ್ಯವಹಾರಗಳನ್ನು ವಹಿಸಲಾಗುತ್ತದೆ. ಮುಂದಿನ ದಿನಗಳಲ್ಲೂ ರಿಲಯನ್ಸ್ ಉದ್ಯಮ ಸಾಮ್ರಾಜ್ಯವನ್ನು ನೋಡಿಕೊಳ್ಳುವ ಬಯಕೆಯಲ್ಲಿ ಮುಕೇಶ್ ಅಂಬಾನಿ ಮಾತ್ರ ಇಲ್ಲ. ಏಷ್ಯದಾದ್ಯಂತ ವಯಸ್ಸಾದ ಉದ್ಯಮಿಗಳ ಪೀಳಿಗೆಯು ಸಂಪತ್ತನ್ನು ಸೃಷ್ಟಿಸುವುದರಿಂದ ಅದನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವವರೆಗೂ ಸವಾಲು, ಸಂಕಷ್ಟ, ತೊಂದರೆಗಳನ್ನು ಎದುರಿಸುತ್ತಿದೆ.

ವಾಲ್ಟನ್ ಕುಟುಂಬದ ಉದ್ಯಮ ಸಾಮ್ರಾಜ್ಯದ ಉತ್ತರಾಧಿಕಾರ ಪ್ಲ್ಯಾನ್ ಇಷ್ಟಪಟ್ಟಿದ್ದಾರೆ 64 ವರ್ಷ ವಯಸ್ಸಿನ ಮುಕೇಶ್ ಅಂಬಾನಿ ಅವರು ವಾಲ್‌ಮಾರ್ಟ್ ಇಂಕ್‌ನ ವಾಲ್ಟನ್ ಕುಟುಂಬದ ಉದ್ಯಮ ಸಾಮ್ರಾಜ್ಯದ ಉತ್ತರಾಧಿಕಾರ ಪ್ಲ್ಯಾನ್ ಅನ್ನು ಇಷ್ಟಪಟ್ಟಿದ್ದಾರೆ. ಅದೇ ರೀತಿ ತಮ್ಮ ಕುಟುಂಬದ ಉದ್ಯಮ ಸಾಮ್ರಾಜ್ಯವನ್ನು ಕೂಡ ಮಕ್ಕಳಿಗೆ ಹಸ್ತಾಂತರ ಮಾಡಬೇಕೆಂದು ಮುಕೇಶ್ ಅಂಬಾನಿ ಬಯಕೆ ಎಂಬುದನ್ನು ಈ ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂಪತ್ತಿನ ಅತಿದೊಡ್ಡ ವರ್ಗಾವಣೆಗೆ ವಾಲ್ಟನ್ ಕುಟುಂಬದ ಉದ್ಯಮ ಸಾಮ್ರಾಜ್ಯ ವರ್ಗಾವಣೆಯು ಮಾದರಿಯಾಗಿದೆ. ಮುಕೇಶ್ ಅಂಬಾನಿ ಅವರು ಟ್ರಸ್ಟ್ ರಚಿಸುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸೇರಿದಂತೆ ತಮ್ಮ ಕುಟುಂಬದ ಉದ್ಯಮ, ಆಸ್ತಿ, ಕಂಪೆನಿಗಳನ್ನು ಅದಕ್ಕೆ ವರ್ಗಾವಣೆ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಮುಕೇಶ್ ಅಂಬಾನಿ, ಅವರ ಪತ್ನಿ ನೀತಾ ಮತ್ತು ಮೂವರು ಮಕ್ಕಳು ಹೊಸ ಟ್ರಸ್ಟ್ ನ ಪಾಲುದಾರರಾಗಿರುತ್ತಾರೆ. ಈ ಟ್ರಸ್ಟ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸೇರಿದಂತೆ ಎಲ್ಲ ಕಂಪೆನಿ, ಉದ್ಯಮ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ. ಟ್ರಸ್ಟ್ ನ ಆಡಳಿತ ಮಂಡಳಿಯಲ್ಲಿ ಮುಕೇಶ್ ಅಂಬಾನಿ ಅವರ ದೀರ್ಘಕಾಲದ ವಿಶ್ವಾಸಾರ್ಹ ವ್ಯಕ್ತಿಗಳು ಸಲಹೆಗಾರರಾಗಿ ಇರುತ್ತಾರೆ. ಆದರೂ ಭಾರತದ ಅತ್ಯಂತ ಪ್ರಭಾವಶಾಲಿ ಕಂಪೆನಿಯ ದಿನನಿತ್ಯದ ಕಾರ್ಯಾಚರಣೆಗಳನ್ನು ಹೊರಗಿನವರು, ವೃತ್ತಿಪರರು ನಿರ್ವಹಿಸುತ್ತಾರೆ. ಇಂಥವರಿಗೆ ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್‌ಗಳನ್ನು ದೂರಸಂಪರ್ಕ, ಇ-ಕಾಮರ್ಸ್ ಮತ್ತು ಗ್ರೀನ್ ಎನರ್ಜಿ ಸೇರಿದಂತೆ ವಿವಿಧ ವ್ಯವಹಾರಗಳನ್ನು ವಹಿಸಲಾಗುತ್ತದೆ. ಮುಂದಿನ ದಿನಗಳಲ್ಲೂ ರಿಲಯನ್ಸ್ ಉದ್ಯಮ ಸಾಮ್ರಾಜ್ಯವನ್ನು ನೋಡಿಕೊಳ್ಳುವ ಬಯಕೆಯಲ್ಲಿ ಮುಕೇಶ್ ಅಂಬಾನಿ ಮಾತ್ರ ಇಲ್ಲ. ಏಷ್ಯದಾದ್ಯಂತ ವಯಸ್ಸಾದ ಉದ್ಯಮಿಗಳ ಪೀಳಿಗೆಯು ಸಂಪತ್ತನ್ನು ಸೃಷ್ಟಿಸುವುದರಿಂದ ಅದನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವವರೆಗೂ ಸವಾಲು, ಸಂಕಷ್ಟ, ತೊಂದರೆಗಳನ್ನು ಎದುರಿಸುತ್ತಿದೆ.

3 / 6
$94 ಶತಕೋಟಿ ನಿವ್ವಳ ಮೌಲ್ಯ

$94 ಶತಕೋಟಿ ನಿವ್ವಳ ಮೌಲ್ಯ

4 / 6
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸೂಚನೆ

ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸೂಚನೆ

5 / 6
ಹತ್ತಿದ ಜಗಳ ಹರಿಯುತ್ತಿರಲಿಲ್ಲ

ಹತ್ತಿದ ಜಗಳ ಹರಿಯುತ್ತಿರಲಿಲ್ಲ

6 / 6
ತಾಯಿ ಮಧ್ಯಸ್ಥಿಕೆಯಲ್ಲಿ ರಾಜೀ-ಸಂಧಾನ

ತಾಯಿ ಮಧ್ಯಸ್ಥಿಕೆಯಲ್ಲಿ ರಾಜೀ-ಸಂಧಾನ

Published On - 5:37 pm, Tue, 23 November 21