
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಮೂರನೇ ದಿನ ಇಂದು (ಶನಿವಾರ). ಉಕ್ರೇನ್‌ನ ಎಲ್ಲಾ ನಗರಗಳು ಸೇರಿದಂತೆ ರಾಜಧಾನಿ ಕೀವ್ ಮೇಲೆ ರಷ್ಯಾ ಬಾಂಬ್ ದಾಳಿಯನ್ನು ಮುಂದುವರೆಸಿದೆ. ಇದರಿಂದ ಎಲ್ಲೆಡೆ ಯುದ್ಧದ ಪರಿಣಾಮ ಕಾಣಸಿಗುತ್ತಿದೆ.

ಸೌಂದರ್ಯಕ್ಕಾಗಿ ಹೆಸರುವಾಸಿಯಾಗಿದ್ದ ಉಕ್ರೇನ್, ಈಗ ಯುದ್ಧದ ಭೀಕರತೆಗೆ ಸಾಕ್ಷಿಯಾಗಿದೆ. ಮಕ್ಕಳು, ವೃದ್ಧರು ನಿರಾಶ್ರಿತರಾಗಿರುವ ದೃಶ್ಯಗಳು ಮನಸ್ಸನ್ನು ಆರ್ದ್ರಗೊಳಿಸುತ್ತವೆ.

ರಷ್ಯಾದ ವೈಮಾನಿಕ ದಾಳಿಗೆ ನಾಶವಾದ ಉಕ್ರೇನ್‌ನ ಕಟ್ಟಡ.

ರಷ್ಯಾವನ್ನು ಹಿಮ್ಮೆಟ್ಟಿಸುತ್ತಿದ್ದೇವೆ ಎಂದು ಉಕ್ರೇನ್ ಹೇಳಿಕೊಂಡಿದೆ.

ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೈವ್ಅನ್ನು ಸುತ್ತುವರೆದಿವೆ. ರಾಜಧಾನಿ ಇನ್ನೂ ನಮ್ಮ ವಶದಲ್ಲೇ ಇದೆ ಎಂದು ಉಕ್ರೇನ್ ತಿಳಿಸಿದೆ.

ಕೈವ್ಅನ್ನು ವಶಪಡಿಸಿಕೊಂಡು ರಷ್ಯಾ ಉಕ್ರೇನ್ಅನ್ನು ನಾಶ ಮಾಡಲು ಹೊರಟಿದೆ ಎಂದು ಉಕ್ರೇನ್ ಆರೋಪಿಸಿದೆ.

ರಷ್ಯಾದ ಪಡೆಗಳು ಉಕ್ರೇನ್‌ನ ಆಗ್ನೇಯ ಭಾಗದ ಮೆಲಿಟೊಪೋಲ್ ನಗರವನ್ನು ವಶಪಡಿಸಿಕೊಂಡಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಉತ್ತರ ಕ್ರಿಮಿಯನ್ ನಗರಗಳಾದ ಖೆರ್ಸನ್ ಮತ್ತು ಕಪ್ಪು ಸಮುದ್ರದ ಬಂದರು ನಗರಗಳಾದ ಮೈಕೊಲೆವ್, ಒಡೆಸ್ಸಾಗಳಲ್ಲಿ ಕದನ ನಡೆಯುತ್ತಿದೆ.

ಉಕ್ರೇನ್ ಅಧ್ಯಕ್ಷ ’ಝೆಲೆನ್ಸ್ಕಿ’ ವಿಡಿಯೋ ಸಂದೇಶದಲ್ಲಿ ಉಕ್ರೇನ್ ಶಸ್ತ್ರಾಸ್ತ್ರ ತ್ಯಜಿಸುತ್ತದೆ ಎಂಬ ಸುದ್ದಿಯನ್ನು ನಿರಾಕರಿಸಿದ್ದಾರೆ. ಹಲವು ರಾಷ್ಟ್ರಗಳು ಉಕ್ರೇನ್ ನೆರವಿಗೆ ಧಾವಿಸುತ್ತಿವೆ.
Published On - 4:10 pm, Sat, 26 February 22