79ನೇ ವರ್ಷದ ಸ್ವತಂತ್ರ ಭಾರತ; ಉದಾರೀಕರಣ ಮಾತ್ರವಲ್ಲ, ಮುಕ್ತಗೊಳಿಸುವ ಸಮಯ ಇದು: ಸದ್ಗುರು

Updated on: Aug 15, 2025 | 6:03 PM

ನವದೆಹಲಿ, ಆಗಸ್ಟ್ 15: ಭಾರತದ 79ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು ದೇಶದ ಅಭ್ಯುದಯಕ್ಕೆ ಪೂರಕವಾಗಬಹುದಾದ ಕೆಲ ಸಲಹೆಗಳನ್ನು ನೀಡಿದ್ದಾರೆ. ಶಿಕ್ಷಣ, ಕೈಗಾರಿಕೆ, ತಂತ್ರಜ್ಞಾನ, ಇನ್​ಫ್ರಾಸ್ಟ್ರಕ್ಚರ್ ಕ್ಷೇತ್ರಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ಕರೆ ನೀಡಿದ್ದಾರೆ. ಇದು ಉದಾರೀಕರಣಗೊಳಿಸುವುದಷ್ಟೇ ಅಲ್ಲ, ಮುಕ್ತಗೊಳಿಸುವ ಸಮಯ ಹೌದು ಎಂದಿದ್ದಾರೆ. ಅವರ ಸಂದೇಶಗಳ ಮುಖ್ಯಾಂಶಗಳು ಇಲ್ಲಿವೆ...

1 / 6
ಉದ್ಯಮ, ಶಿಕ್ಷಣ ಮತ್ತು ನಾವೀನ್ಯತೆಯ ಕ್ಷೇತ್ರಗಳಲ್ಲಿ ಉದಾರೀಕರಣ ನೀತಿಯಿಂದ ಪೂರ್ಣ ಮುಕ್ತತೆಯ ಧೋರಣೆಗೆ ಬದಲಾಗಬೇಕು. ಬಹಳ ಧೈರ್ಯದ, ಆತ್ಮವಿಶ್ವಾಸದ ಮತ್ತು ಸಾಹಸೀ ಮನೋಭಾವದ ಮುಕ್ತ ಉದ್ಯಮಗಳ ಅವಶ್ಯಕತೆ ಭಾರತಕ್ಕೆ ಇದೆ ಎಂದು ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ.

2 / 6
ಧೈರ್ಯವಂತ ರಾಷ್ಟ್ರಕ್ಕೆ ಸವಾಲುಗಳು ಸಮಸ್ಯೆಗಳಲ್ಲ, ಬದಲಾಗಿ ಬೆಳವಣಿಗೆಗೆ ಪೂರಕವಾದ ಸಂಗತಿಗಳಾಗಿವೆ ಎಂದು 79ನೇ ಸ್ವಾತಂತ್ರ್ಯ ದಿನೋತ್ಸವದಂದು ಸದ್ಗುರು ಸಂದೇಶ ನೀಡಿದ್ದಾರೆ.

3 / 6
ಜನರು ದೊಡ್ಡ ಕನಸು ಕಂಡಾಗ, ದೇಶವನ್ನು ಕಟ್ಟಲು ಹೋದಾಗ ಸಂಚಲನ ಸೃಷ್ಟಿಯಾಗುವುದು ಸಹಜ. ಹೊಸ ನಿಯಮಗಳನ್ನು ಮಾಡಬೇಕಾಗುತ್ತದೆ. ಹಳೆಯ ನಿಯಮಗಳನ್ನು ತೆಗೆಯಬೇಕಾಗಬಹುದು. ಜನರ ನಾವೀನ್ಯತೆಯನ್ನು ಆಡಳಿತಶಾಹಿ ವ್ಯವಸ್ಥೆ ಕೊಲ್ಲದಂತೆ ನೋಡಿಕೊಳ್ಳಬೇಕು ಎಂದು ಸದ್ಗುರು ತಿಳಿಸಿದ್ದಾರೆ.

4 / 6
ಐಟಿ ನಮ್ಮ ಮುಖ್ಯ ಶಕ್ತಿಯಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ನಾವು ಜಾಗತಿಕ ಆಟಗಾರರಾಗಿದ್ದೇವೆ. ಬಾಹ್ಯ ಶಕ್ತಿಯಿಂದ ಇದು ದುರ್ಬಲಗೊಳ್ಳದಂತೆ ನೋಡಿಕೊಳ್ಳಬೇಕು. ಪವರ್ ಗ್ರಿಡ್​ಗಳಲ್ಲಿ ಹೂಡಿಕೆ ಮಾಡಬೇಕು ಎಂದು ಜಗ್ಗಿ ವಾಸುದೇವ್ ಕರೆ ನೀಡಿದ್ದಾರೆ.

5 / 6
ಮನುಷ್ಯರಲ್ಲಿ ಪರಿವರ್ತನೆ ತರದ ಶಿಕ್ಷಣ ನಿರರ್ಥಕ. ಜನಸಂಖ್ಯೆಯ ಬಲವನ್ನು ಸರಿಯಾಗಿ ಉಪಯೋಗಿಸಬೇಕೆಂದರೆ ಮಕ್ಕಳನ್ನು ಸಣ್ಣ ವಯಸ್ಸಿನಿಂದಲೇ ನಾವೀನ್ಯತೆಗೆ ಉತ್ತೇಜಿಸುವಂತಹ ಶಿಕ್ಷಣ ಬೇಕು ಎಂದಿದ್ದಾರೆ ಜಗ್ಗಿ ವಾಸುದೇವ್.

6 / 6
ಅಂತಾರಾಷ್ಟ್ರೀಯವಾಗಿ ವಿವಿಧ ದೇಶಗಳ ನಡುವೆ ಆಳವಾದ ಮೈತ್ರಿ ಏರ್ಪಡುವ ಸಮಯ ಇದು. ಬಲಾಢ್ಯ ದೇಶಗಳ ಒತ್ತಡ ಪ್ರತಿರೋಧಿಸಲು ಇದು ಬೇಕು. ದೇಶಗಳ ನಡುವೆ ದ್ವಾರ ಮುಕ್ತಗೊಂಡಾಗ ಜನರಿಗೆ ಉಪಯೋಗವಾಗುತ್ತದೆ. ನಮಗೆ ಗೋಡೆಗಳು ಬೇಕಿಲ್ಲ, ಹೆಚ್ಚು ಕಿಟಕಿಗಳು ಬೇಕು ಎಂದು ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಸದ್ಗುರು ಹೇಳಿದ್ದಾರೆ.

Published On - 5:44 pm, Fri, 15 August 25