
ತಮ್ಮ ಕಟ್ಟುಮಸ್ತಾದ ಬಾಡಿಯಿಂದಲ್ಲೇ ಹೆಸರುವಾಸಿಯಾಗಿರುವ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್, ಜಿಮ್ನಲ್ಲಿ ಬೆವರಿಳಿಸಿದ ತಮ್ಮ ಇತ್ತೀಚಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದಿಂದ ತಮ್ಮ ಸಾಕಷ್ಟು ಅಭಿಮಾನಿಗಳಿಗೆ ಸ್ಪೂರ್ತಿಯಾಗಿದ್ದಾರೆ.

ಸಲ್ಮಾನ್ ಖಾನ್ ಆಗಾಗ ಅವರ ವರ್ಕೌಟ್ ಸೆಷನ್‌ನ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅವರ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಫಿಟ್ಗಾಗಿರುವಂತೆ ಸಲಹೆ ನೀಡುತ್ತಾರೆ.

ಸಲ್ಮಾನ್ ಖಾನ್ ತಮ್ಮ ಬೆನ್ನನ್ನು ತೋರಿಸುವ ಮೂಲಕ ಕೆಲಸಕ್ಕೆ ಮರಳಿರುವೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಸಲ್ಮಾನ್ ಖಾನ್ ವರ್ಕೌಟ್ ಸೆಷನ್‌ನಲ್ಲಿರುವಾಗ ಅವರ ಸ್ನೇಹಿತೆ ಮತ್ತು ಸಹ-ನಟಿಯಾಗಿರುವ ಜಾಕ್ವೆಲಿನ್ ಫರ್ನಾಂಡಿಸ್ ಕ್ಲಿಕ್ ಮಾಡಿರುವ ಶರ್ಟ್‌ಲೆಸ್ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ನೀವು ಹಿನ್ನೆಲೆಯಲ್ಲಿ ನಟಿಯನ್ನು ನೋಡಬಹುದು.

ಇಷ್ಟು ದಿನ ಬಿಗ್ಬಾಸ್ 15ರಲ್ಲಿ ತೋಡಗಿಕೊಂಡಿದ್ದ ಸಲ್ಮಾನ್ ಸದ್ಯ ಜಿಮ್ನಲ್ಲಿ ಬೆವರಿಳಿಸುತ್ತಿದ್ದಾರೆ. ಜೊತೆಗೆ 'ಟೈಗರ್ 3' ಮತ್ತು 'ಬಜರಂಗಿ ಭಾಯಿಜಾನ್'ನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಸಲ್ಮಾನ್ ಖಾನ್ಗೆ ಜೊಡಿಯಾಗಿ ಕತ್ರಿನಾ ಕೈಫ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಅವರು ಇತ್ತೀಚೆಗೆ ತಮ್ಮ ಹೊಸ ಹಾಡು 'ಡ್ಯಾನ್ಸ್ ವಿತ್ ಮಿ' ನಲ್ಲಿ ತಮ್ಮ ಹಾಡುಗಾರಿಕೆ ಮತ್ತು ನೃತ್ಯ ಕೌಶಲ್ಯಗಳನ್ನು ಪ್ರದರ್ಶಿಸಿದರು.

ಇನ್‌ಸ್ಟಾಗ್ರಾಮ್‌ನಲ್ಲಿ ಈ ಚಿತ್ರದೊಂದಿಗೆ ತಮ್ಮ ಅಭಿಮಾನಿಗಳನ್ನು ಗೇಲಿ ಮಾಡಿದ ಸಲ್ಮಾನ್, ಫೋಟೋದ ಹಿನ್ನೆಲೆಯಲ್ಲಿ ಕಂಡುಬರುವ ವೈರ್‌ಗಳ ಬಳಕೆ ಏನು ಎಂದು ಊಹಿಸಲು ಅಭಿಮಾನಿಗಳನ್ನು ಕೇಳಿದರು.

ರಿಯಾಲಿಟಿ ಶೋ ಆದ ಬಿಗ್ ಬಾಸ್ 15 ಸರಣಿಯನ್ನು ಮೊನ್ನೆಯಷ್ಟೇ ಸಲ್ಮಾನ ಖಾನ್ ಹೋಸ್ಟ್ ಮಾಡುವ ಮೂಲಕ ಯಶಸ್ವಿಯಾಗಿ ಮುಗಿಸಿದ್ದಾರೆ.