ಶ್ರೀಗಂಧವು ಚರ್ಮವನ್ನು ಕಾಂತಿಯುತಗೊಳಿಸಲು ಮತ್ತು ಮೊಡವೆ ಸಮಸ್ಯೆಗಳನ್ನು ಹೋಗಲಾಡಿಸಲು ಉತ್ತಮ ಕೆಲಸ ಮಾಡುತ್ತದೆ. ಇದಕ್ಕಾಗಿ ನೀವು ಶ್ರೀಗಂಧದ ಫೇಸ್ ಪ್ಯಾಕ್ ಅನ್ನು ಬಳಸಬಹುದು. ಶ್ರೀಗಂಧದ ಫೇಸ್ ಪ್ಯಾಕ್ ಬಳಸುವ ಕೆಲವು ವಿಧಾನ ಇಲ್ಲಿದೆ.
ಶ್ರೀಗಂಧ ಮತ್ತು ರೋಸ್ ವಾಟರ್ ಫೇಸ್‌ಪ್ಯಾಕ್ - ಈ ಫೇಸ್‌ಪ್ಯಾಕ್ ಮಾಡಲು, ಒಂದು ಪಾತ್ರೆಯಲ್ಲಿ 1-2 ಟೀ ಚಮಚ ಶ್ರೀಗಂಧದ ಪುಡಿಯನ್ನು ತೆಗೆದುಕೊಳ್ಳಿ. ಅದಕ್ಕೆ ಬೇಕಾದಷ್ಟು ರೋಸ್ ವಾಟರ್ ಸೇರಿಸಿ. ಈಗ ಈ ಫೇಸ್ ಪ್ಯಾಕ್ ಅನ್ನು ಮುಖ, ಕುತ್ತಿಗೆಗೆ ಹಾಕಿಕೊಳ್ಳಿ. ಅದು ಒಣಗುವವರೆಗೆ ಬಿಡಿ. ನಂತರ ಚರ್ಮವನ್ನು ಲಘುವಾಗಿ ಮಸಾಜ್ ಮಾಡಿ ಮತ್ತು ತೊಳೆಯಿರಿ. ನೀವು ವಾರಕ್ಕೆ ಎರಡು ಬಾರಿ ಈ ರೀತಿ ಫೇಸ್ ಪ್ಯಾಕ್ ಹಾಕಿ.
Published On - 4:59 pm, Wed, 9 March 22