
ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೈಚಳಕದಿಂದಲೇ ಮೂಡಿ ಬಂದ ಪ್ರಭು ಶ್ರೀರಾಮನ ಭಕ್ತ ಹನುಮಂತನ ಮೂರ್ತಿ ಮೈಸೂರಿನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ಇರುವ ಶ್ರೀರಾಮ ದೇವಾಲಯದ ಮುಂದೆ ಆಂಜನೇಯನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.

70 ಟನ್ ತೂಕದ ಏಕಾಶಿಲೆಯಲ್ಲಿ ಹನುಮಂತನ ವಿಗ್ರಹವನ್ನು ಕೆತ್ತನೆ ಮಾಡಲಾಗಿದೆ. ಇದನ್ನು ಒಂದು ವರ್ಷದ ಹಿಂದೆ ಕೆತ್ತನೆ ಮಾಡಿಗಿತ್ತು.

ಹೊಯ್ಸಳ ಶೈಲಿಯ ಚಿನ್ನಾಭರಣ, ಎದೆಯ ಮಧ್ಯಭಾಗದಲ್ಲಿ ಶ್ರೀ ರಾಮನ ಪದಕ ಅಲಂಕಾರದಲ್ಲಿ ಕೆತ್ತಲಾಗಿದೆ.

ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಏಕಶಿಲಾ ಹನುಮಂತನ ಪ್ರತಿಮೆ

ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22 ರಂದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ ರಾಮಲಲ್ಲಾನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಮಂಡ್ಯ ಜಿಲ್ಲೆಯ ಲೇಬರ್ ಕಾಲೋನಿಯಲ್ಲಿ ಜೀರ್ಣೋದ್ಧಾರ ಮಾಡಿದ ರಾಮನ ದೇವಾಲಯದಲ್ಲೂ ಇದೇ ಶಿಲ್ಪಿ ಕೆತ್ತಿದ ರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ.