ಶಕ್ತಿ ಯೋಜನೆ ಜಾರಿ ಬಳಿಕ ದೇವಾಲಯಗಳತ್ತ ಭಕ್ತರ ಹೊಳೆಯೇ ಹರಿದು ಬರುತ್ತಿದೆ. ಇದ್ರಿಂದ ಮುಜರಾಯಿ ದೇವಾಲಯಗಳ ಹುಂಡಿಗಳು ತುಂಬಿ ತುಳುಕುತ್ತಿದ್ದು, ಬಹುತೇಕ ದೇವಾಲಯಗಳ ಆದಾಯವೂ ದುಪ್ಪಟ್ಟಾಗಿದೆ.
2022ರ ಜೂನ್ 11ರಿಂದ ಜುಲೈ 15ರವರೆಗೆ 58 ದೇವಾಲಯಗಳಲ್ಲಿ ಇ-ಹುಂಡಿಗಳ ಮೂಲಕ 19 ಕೋಟಿ ರೂ. ಸಂಗ್ರಹವಾದ್ರೆ, ಈ ವರ್ಷ ಬರೋಬ್ಬರಿ 24 ಕೋಟಿ 47 ಲಕ್ಷ ರೂಪಾಯಿ ಆದಾಯ ಬಂದಿದೆ.
ಚಾಮುಂಡಿಬೆಟ್ಟ
ರಾಜ್ಯದ ಪ್ರಸಿದ್ಧ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಇ-ಹುಂಡಿಯಲ್ಲಿ ಈ ವರ್ಷ ಜೂನ್11 ರಿಂದ ಜುಲೈ 15 ವರೆಗೆ 11 ಕೋಟಿ 16 ಲಕ್ಷ ಸಂಗ್ರಹವಾಗಿದೆ.. ಕಳೆದ ವರ್ಷ 11 ಕೋಟಿ 13 ಲಕ್ಷ ಸಂಗ್ರಹವಾಗಿತ್ತು.
ಯಡಿಯೂರು ಸಿದ್ದಲಿಂಗೇಶ್ವರ ದೇಗುಲದ ಇ-ಹುಂಡಿಯಲ್ಲಿ ಈ ವರ್ಷ 1.48 ಕೋಟಿ ಸಂಗ್ರಹವಾಗಿದ್ರೆ, ಕಳೆದ ವರ್ಷ 1.20ಕೋಟಿ ರೂ. ಸಂಗ್ರಹವಾಗಿತ್ತು.
ಇನ್ನೂ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸನ್ನಿಧಿಯ ಇ -ಹುಂಡಿಯಲ್ಲಿ ಈ ವರ್ಷ 1.27 ಕೋಟಿ ರೂ. ಸಂಗ್ರಹವಾಗಿದ್ದು, ಕಳೆದ ವರ್ಷ 1 ಕೋಟಿ 5 ಲಕ್ಷ ಬಂದಿತ್ತು.
ಇನ್ನು ಬೆಂಗಳೂರಿನ ಬನಶಂಕರಿ ದೇಗುಲದಲ್ಲೂ ಈ ವರ್ಷ 83.64 ಲಕ್ಷ ರೂ. ಸಂಗ್ರಹವಾಗಿದ್ದು, ಕಳೆದ ವರ್ಷ 65.82 ಲಕ್ಷ ಸಂಗ್ರಹವಾಗಿತ್ತು.
ಬಳ್ಳಾರಿಯ ಕನಕದುರ್ಗಮ್ಮ ದೇವಿ, ಕೊಪ್ಪಳದ ಹುಲಿಗೆಮ್ಮ, ಕನಕಪುರದ ಕಬ್ಬಾಳಮ್ಮ, ಶ್ರೀರಂಗಪಟ್ಟಣದ ನಿಮಿಷಾಂಬ, ಬೆಂಗಳೂರಿನ ಬನಶಂಕರಿ ದೇವಿ ಸೇರಿ ದೇವಿ ದೇವಾಲಯಗಳಿಗೆ ಭಕ್ತರ ದಂಡಿನ ಜೊತೆ ಕೋಟ್ಯಂತರ ರೂ. ಆದಾಯ ಬಂದಿದೆ.
ಶಕ್ತಿ ಯೋಜನೆಯಿಂದ ಮಹಿಳೆಯರು ಫ್ರೀ ಬಸ್ ಟಿಕೆಟ್ನಿಂದ ರೌಂಡ್ಸ್ ಹಾಕ್ತಿದ್ದಾರೆ. ಇತ್ತ ದೇವಸ್ಥಾನಗಳಿಗೆ ನಿರೀಕ್ಷೆಗೂ ಮೀರಿದ ಆದಾಯ ಬರ್ತಿದೆ. ಮುಂದಿನ ದಿನಗಳಲ್ಲಿ ಈ ಆದಾಯ ದುಪ್ಪಾಟ್ಟಾಗುವ ಸಾಧ್ಯತೆ ಇದೆ.