
ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಶಿವಂ ದುಬೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ದೀರ್ಘಕಾಲದ ಗೆಳತಿ ಅಂಜುಂ ಖಾನ್ ಜೊತೆ ಮದುವೆ ಮಾಡಿಕೊಂಡಿದ್ದಾರೆ.

ದುಬೆ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿವಾಹ ಸಮಾರಂಭದ ಕೆಲವೊಂದು ಫೋಟೋ ಹಂಚಿಕೊಂಡಿದ್ದಾರೆ.

ಪ್ರೀತಿಗಿಂತಲೂ ಹೆಚ್ಚಾಗಿರುವುದನ್ನ ನಾವು ಪ್ರೀತಿಯಿಂದ ಪ್ರೀತಿಸಿದೆವು. ಎಂದೆಂದಿಗೂ ಮುಗಿಯದ ಸಂಬಂಧಕ್ಕೆ ಇದೀಗ ಅಧಿಕೃತ ಆರಂಭ ಸಿಕ್ಕಿದೆ. ಜಸ್ಟ್ ಮ್ಯಾರೀಡ್ ಎಂದು ದುಬೆ ಬರೆದುಕೊಂಡಿದ್ದಾರೆ.

ಅಂಜುಂ ಖಾನ್.

ಟೀಮ್ ಇಂಡಿಯಾದ ಎಡಗೈ ಬ್ಯಾಟ್ಸ್ಮನ್ ಮತ್ತು ಬಲಗೈ ಮಧ್ಯಮ ವೇಗಿ ಆಗಿರುವ ದುಬೆ ಅವರು 2019 ರ ನವೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

ಭಾರತದ ಪರ ಅವರು 13 ಟಿ-20 ಪಂದ್ಯಗಳನ್ನು ಆಡಿದ್ದು, ಒಂದು ಅರ್ಧಶತಕ ಸಿಡಿಸಿದ್ದಾರೆ. 30 ರನ್ ನೀಡಿ 3 ವಿಕೆಟ್ ಉರುಳಿಸಿದ್ದು ಟಿ-20ಯಲ್ಲಿ ಅವರ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿದೆ.
Published On - 10:53 am, Sat, 17 July 21