Shivamogga Airport: ಮೊದಲ ಪ್ರಯಾಣಿಕ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಶಿವಮೊಗ್ಗ ಹೇಗೆ ಸಜ್ಜಾಗಿತ್ತು ಗೊತ್ತಾ? ಇಲ್ಲಿವೆ ವಿಮಾನ ನಿಲ್ದಾಣ ​ ಉದ್ಘಾಟನೆ ಫೋಟೋಗಳು

|

Updated on: Feb 27, 2023 | 2:45 PM

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನೂತನ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಇದೇ ವೇಳೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪರ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಶುಭಾಶಯ ಹೇಳಿದರು.

1 / 11
ಇಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಇಡೀ ಶಿವಮೊಗ್ಗದಲ್ಲಿ ಭರ್ಜರಿ ಪ್ರಿಪರೇಷನ್​ ಮಾಡಿಕೊಳ್ಳಲಾಗಿತ್ತು.

2 / 11
ಶಿವಮೊಗ್ಗ ಏರ್​ಪೋರ್ಟ್​ ಮಲೆನಾಡಿಗರ ದಶಕಗಳ ಕನಸು. ಇಷ್ಟೇ ಅಲ್ಲBSY ಕನಸಿನ ಕೂಸಾಗಿದೆ. ಸತತ ಪ್ರಯತ್ನದ ಮೂಲಕ ಕೊನೆಗೂ ಯಡಿಯೂರಪ್ಪ ಕನಸು ಈಡೇರಿದೆ. ಸೋಗಾನೆ ಗ್ರಾಮದಲ್ಲಿ ಏರ್​ಪೋರ್ಟ್ ತಲೆಎತ್ತಿದೆ.

3 / 11
ಶಿವಮೊಗ್ಗಕ್ಕೆ ಮೋದಿ ಆಗಮನ ಹಿನ್ನೆಲೆ ಹೂವಿನ ರಂಗೋಲಿ ಬಿಡಿಸಿ ಸ್ವಾಗತಿಸಲಾಯಿತು.

4 / 11
ಮೋದಿ ಸ್ವಾಗತಕ್ಕೆ ರಸ್ತೆಗಳಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್​ಗಳು

5 / 11
ಬೆಳಗ್ಗೆ 11.30ಕ್ಕೆ ಪ್ರಾಧಾನಿ ಮೋದಿ ಸೇನಾ ವಿಮಾನದ ಮೂಲಕ ಶಿವಮೊಗ್ಗಕ್ಕೆ ಬಂದಿಳಿದರು.

6 / 11
ಪ್ರಧಾನಿ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣದ ಮಾದರಿಯನ್ನು ವೀಕ್ಷಿಸಿದ ಕ್ಷಣ. ಈ ವೇಳೆ ಸಿಎಂ ಬೊಮ್ಮಾಯಿ ಕೂಡ ಉಪಸ್ಥಿತರಿದ್ದರು.

7 / 11
ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದ ಬಳಿ ನಿರ್ಮಾಣಗೊಂಡ ನೂತನ ಏರ್​​ಪೋರ್ಟ್ ಅನ್ನು ಮೋದಿ ಉದ್ಘಾಟಿಸಿದರು. 775 ಎಕರೆ ಭೂಮಿಯಲ್ಲಿ 384 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ.

8 / 11
ಶಿವಮೊಗ್ಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಸ್ಮಾರ್ಟ್​ಸಿಟಿ ಕಾಮಗಾರಿ, ಶಿಮುಲ್​ ಹಾಲು ಪ್ಯಾಕಿಂಗ್​ ಘಟಕ, ಮಾಮ್​​ ಕೋಸ್ ಆಡಳಿತ ಭವನ, ಶಿಮೊಗ್ಗ-ಶಿಕಾರಿಪುರ, ರಾಣೆಬೆನ್ನೂರು ಹೊಸ ರೈಲು ಮಾರ್ಗಕ್ಕೆ ಚಾಲನೆ ಹಾಗೂ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋಗೆ ಶಿಲಾನ್ಯಾಸ ಮಾಡಿದರು.

9 / 11
ಶಿವಮೊಗ್ಗದಲ್ಲಿ ನೂತನ ಏರ್​ಪೋರ್ಟ್​ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಜೋಶಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ನಾರಾಯಣಗೌಡ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

10 / 11
ಶಿವಮೊಗ್ಗದಲ್ಲಿ ನೂತನ ಏರ್​ಪೋರ್ಟ್​ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಸಾವಿರಾರು ಮಂದಿ

11 / 11
ಶಿವಮೊಗ್ಗದಲ್ಲಿ ನೂತನ ಏರ್​ಪೋರ್ಟ್​ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ