Kannada News Photo gallery Shravan Somvar 2024: These 11 precious messages of God Shiva or Eshwara are timely even in the corporate age
ಶ್ರಾವಣ ಸೋಮವಾರ 2024: ಕಾರ್ಪೊರೇಟ್ ಯುಗದಲ್ಲೂ ಸಕಾಲಿಕವಾಗಿದೆ ಈಶ್ವರನ ಈ 11 ಅಮೂಲ್ಯ ಸಂದೇಶಗಳು
ಶಿವನ ಚಿಂತನೆಗಳು: ಶಿವನ ಲೀಲೆಗಳು ಯಾರಿಗೆ ಗೊತ್ತಿಲ್ಲ ಹೇಳಿ. ಅದೇ ಧಾಟಿಯಲ್ಲಿ ಶಿವನ ಚಿಂತನೆಗಳು ಸಹ ಸಾರ್ವಕಾಲಿಕ. ಪ್ರಪಂಚದ ಎಲ್ಲಾ ಧರ್ಮಗಳ ಮೂಲ ಶಿವ. ಶಿವನ ತತ್ತ್ವಶಾಸ್ತ್ರ ಮತ್ತು ಜೀವನದ ಕಥೆಯು ಪ್ರಪಂಚದ ನಾನಾ ಧರ್ಮ ಮತ್ತು ನಾನಾ ಧರ್ಮಗ್ರಂಥಗಳಲ್ಲಿ ವಿಭಿನ್ನ ರೂಪಗಳಲ್ಲಿದೆ. ಭಗವಾನ್ ಶಿವನ ಅಮೂಲ್ಯ ಸಂದೇಶಗಳನ್ನು 'ಆಗಮ ಗ್ರಂಥ'ಗಳಲ್ಲಿ ಸಂಗ್ರಹಿಸಲಾಗಿದೆ. ಆಗಮ ಎಂದರೆ ಜ್ಞಾನ ಸಂಪಾದನೆ. ಸಾಂಪ್ರದಾಯಿಕವಾಗಿ ಶೈವ ಸಿದ್ಧಾಂತದಲ್ಲಿ 28 ಆಗಮಗಳು ಮತ್ತು 150 ಉಪ ಆಗಮಗಳಿವೆ. ಶಿವ ಪುರಾಣ, ಶಿವ ಸಂಹಿತೆ, ಶಿವ ಸೂತ್ರ, ಮಹೇಶ್ವರ ಸೂತ್ರ ಮತ್ತು ವಿಜ್ಞಾನ ಭೈರವ ತಂತ್ರ ಸೇರಿದಂತೆ ಅನೇಕ ಗ್ರಂಥಗಳಲ್ಲಿ ಅಮೂಲ್ಯ ಪದಗಳನ್ನು ಸಂಗ್ರಹಿಸಲಾಗಿದೆ. ಆ ಅಮೂಲ್ಯ ಮುತ್ತುಗಳಲ್ಲಿ ಕೆಲವು ಹೀಗಿವೆ...
1 / 11
ಜ್ಞಾನಕ್ಕಿಂತ ಕಲ್ಪನೆ/ ಆಲೋಚನೆಯೇ ಮುಖ್ಯ: ಐನ್‌ಸ್ಟೈನ್‌ಗಿಂತ ಮೊದಲು ಶಿವನೇ ಜ್ಞಾನಕ್ಕಿಂತ 'ಕಲ್ಪನೆ' ಮುಖ್ಯ ಎಂದು ಹೇಳಿದ್ದ. ನಾವು ಏನನ್ನು ಕಲ್ಪಿಸಿಕೊಳ್ಳುತ್ತೇವೋ ಮತ್ತು ಆಲೋಚಿಸುತ್ತೇವೋ, ನಾವು ಹಾಗೆಯೇ ಆಗುತ್ತೇವೆ. ಕನಸು ಕೂಡ ಕಲ್ಪನೆಯೇ. ಹೆಚ್ಚಿನ ಜನರು ತಮ್ಮ ಅಥವಾ ಇತರರ ಬಗ್ಗೆ ಕೆಟ್ಟ ಆಲೋಚನೆಗಳು ಅಥವಾ ಕೆಟ್ಟ ಅಭಿರುಚಿಗಳನ್ನು ಹೊಂದಿರುತ್ತಾರೆ. ಇಂದು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಭಯೋತ್ಪಾದನೆ ಮತ್ತು ಅಪರಾಧದ ವಾತಾವರಣದಲ್ಲಿ ಸಾಮೂಹಿಕ ಕಲ್ಪನೆಯು ಹೆಚ್ಚಿನ ಕೊಡುಗೆಯನ್ನು ಹೊಂದಿದೆ.
2 / 11
ಬದಲಾವಣೆಗೆ ಧ್ಯಾನ. ತಪಸ್ಸು ಅಗತ್ಯ: ದೇವರುಗಳ ಪೈಕಿ ಪರಮ ಧ್ಯಾನಿ ಅಂದರೆ ಶಿವ. ಈಶ್ವರನ ತಪಸ್ಸಿಗೆ ಅಷ್ಟೊಂದು ಬಲವಿದೆ. ಬದಲಾಗುವ ಮನಸ್ಸಿನೊಂದಿಗೆ ಪ್ರಮಾಣಿಕತೆ ಇಲ್ಲದಿದ್ದರೆ ವ್ಯಕ್ತಿಯನ್ನು ಬದಲಾಯಿಸಲಾಗು ಆಗದು. ಕೇವಲ ಉಪದೇಶದಿಂದ ಏನೂ ಬದಲಾಗುವುದಿಲ್ಲ. ಶಿವನು ಅಮರನಾಥ ಗುಹೆಯಲ್ಲಿ ತಾಯಿ ಪಾರ್ವತಿಗೆ ಮೋಕ್ಷವನ್ನು ಕಲಿಸಿದನು. ಪಾರ್ವತಿ ಮತ್ತು ಶಿವನ ನಡುವೆ ನಡೆಯುವ ಸಂಭಾಷಣೆಯನ್ನು 'ವಿಜ್ಞಾನ ಭೈರವ ತಂತ್ರ'ದಲ್ಲಿ ಸಂಗ್ರಹಿಸಲಾಗಿದೆ. ಧ್ಯಾನದ 112 ವಿಧಾನಗಳನ್ನು ಅದರಲ್ಲಿ ಸಂಗ್ರಹಿಸಲಾಗಿದೆ.
3 / 11
ಶೂನ್ಯದಲ್ಲಿ ಪ್ರವೇಶಿಸಿ: ವಿಜ್ಞಾನ ಭೈರವ ತಂತ್ರದಲ್ಲಿ, ಶಿವನು ಪಾರ್ವತಿಗೆ ಹೀಗೆ ಹೇಳುತ್ತಾನೆ: 'ಆಧಾರರಹಿತ, ಶಾಶ್ವತ, ಚಲನರಹಿತ ಸ್ಥಳವನ್ನು ಪ್ರವೇಶಿಸಿ. ಭಗವಾನ್ ಶಿವನು ಹೇಳುತ್ತಾನೆ- 'ವಾಮೋ ಮಾರ್ಗ: ಪರಮಗಹನೋ ಯೋಗಿತಾಂಪ್ಯಗಮ್ಯ' ಅಂದರೆ ಎಡ ಮಾರ್ಗವು ಅತ್ಯಂತ ಆಳವಾಗಿದ್ದು, ಗಹನವಾಗಿದೆ ಮತ್ತು ಯೋಗಿಗಳಿಗೆ ಸಹ ಅಲ್ಲಿಗೆ ಪ್ರವೇಶಿಸಲಾಗುವುದಿಲ್ಲ. ಮೇರು ತಂತ್ರ... ಶಿವನ ಯೋಗವನ್ನು ತಂತ್ರ ಅಥವಾ ವಾಮಯೋಗ ಎನ್ನುತ್ತಾರೆ. ಇದರ ಒಂದು ಶಾಖೆಯೇ ಹಠಯೋಗ.
4 / 11
ಮನುಷ್ಯನು ಪ್ರಾಣಿಯಂತೆ: ಮನುಷ್ಯನಲ್ಲಿ ಎಲ್ಲಿಯವರೆಗೆ ರಾಗ, ದ್ವೇಷ, ಅಸೂಯೆ, ವೈಮನಸ್ಯ, ಅಪಮಾನ ಮತ್ತು ಹಿಂಸೆಯಂತಹ ಅನೇಕ ಪಶು ಪ್ರವೃತ್ತಿಗಳನ್ನು ಹೊಂದಿರುತ್ತಾನೋ ಅಲ್ಲಿಯವರೆಗೂ ಅವನು ಪ್ರಾಣಿಯಾಗಿಯೇ ಉಳಿದಿರುತ್ತಾನೆ. ಪಶು ಭೀತಿಯಿಂದ ಮುಕ್ತಿ ಪಡೆಯಲು ಭಕ್ತಿ ಮತ್ತು ಧ್ಯಾನ ಅಗತ್ಯ. ಶಿವಸ್ತುತಿಯ ಅರ್ಥವೇನೆಂದರೆ ಮನುಷ್ಯ ಎಲ್ಲ ಗುಣಾವಗುಣಗಳ ಸಂಗ್ರಹಾಲಯ. ಮನುಷ್ಯನಲ್ಲಿ ಎಲ್ಲಾ ರೀತಿಯ ಪ್ರಾಣಿ ಮತ್ತು ಪಕ್ಷಿಗಳ ಪ್ರವೃತ್ತಿ ಇರುತ್ತದೆ. ಮನುಷ್ಯ ಎಂಬುವವನ್ನು ಮನುಷ್ಯನಾಗಿ ಹೇಗಿರಬೇಕೋ ಹಾಗೆ ಇರುವುದಿಲ್ಲ. ಆದರೆ ವ್ಯಕ್ತಿಯಲ್ಲಿ ಮನಸ್ಸು ಹೆಚ್ಚು ಕ್ರಿಯಾಶೀಲವಾಗಿರುವುದರಿಂದ ಅವನನ್ನು ಮನುಷ್ಯ ಎಂದು ಕರೆಯಲಾಗುತ್ತದೆ, ಏಕೆಂದರೆ ಅವನು ತನ್ನ ನಿಯಂತ್ರಣದಲ್ಲಿಯೇ ಇರುತ್ತಾನೆ.
5 / 11
ಸಾಯುವುದನ್ನು ಕಲಿಯಿರಿ: ನೀವು ಜೀವನದಲ್ಲಿ ಏನನ್ನಾದರೂ ಕಲಿಯಲು ಬಯಸಿದರೆ, ಸಾಯುವುದನ್ನು ಕಲಿಯಿರಿ. ಸಾಯುವುದನ್ನು ಕಲಿಯುವವನಿಗೆ ಮಾತ್ರ ಸುಂದರವಾಗಿ ಬದುಕುವುದು ಹೇಗೆ ಎಂದು ತಿಳಿದಿದೆ.
6 / 11
ಗಾಯತ್ರಿ ಮಂತ್ರ: 'ಗಾಯತ್ರಿ-ಮಂಜರಿ'ಯಲ್ಲಿ 'ಶಿವ-ಪಾರ್ವತಿ ಸಂವಾದ' ಬರುತ್ತದೆ. ಅದರಲ್ಲಿ ಭಗವತಿ ಕೇಳುತ್ತಾಳೆ - 'ಓ ದೇವರೇ! 'ನೀವು ಯಾವ ಯೋಗವನ್ನು ಉಪಾಸನೆ ಮಾಡಿ ಪರಮ ಸಾಧನೆ ಸಾಧಿಸಿರುವಿರಿ?' ಅದಕ್ಕೆ ಶಿವನ ಉತ್ತರ ಹೀಗಿತ್ತು- ಗಾಯತ್ರಿ ವೇದಮಾತೆ ಮತ್ತು ಭೂಮಿಯು ಮೊದಲ ಮತ್ತು ಶ್ರೇಷ್ಠ ಶಕ್ತಿ. ಅವಳು ಜಗತ್ತಿಗೇ ತಾಯಿ. ಗಾಯತ್ರಿ ಭೂಮಿಯ ಕಾಮಧೇನು. ಜ್ಞಾನಿಗಳು ಯೋಗದ ಎಲ್ಲಾ ಚಟುವಟಿಕೆಗಳಿಗೆ ಗಾಯತ್ರಿಯನ್ನು ಆಧಾರವೆಂದು ಪರಿಗಣಿಸಿದ್ದಾರೆ. ಹಾಗಾಗಿ ಗಾಯತ್ರಿ ಉಪಾಸನೆ ಮೂಲಕ ಎಲ್ಲವನ್ನೂ ಸಾಧಿಸಲಾಗುತ್ತದೆ ಎಂದು ಶಿವ ಉತ್ತರಿಸುತ್ತಾನೆ.
7 / 11
ಜೀವನವನ್ನು ಸಂತೋಷವಾಗಿಸಿಕೊಳ್ಳಲು: ತಿಂದು ಕುಡಿಯುವುದರಿಂದ (ಆಹಾರ ಮತ್ತು ಪಾನೀಯದಿಂದ) ಉತ್ಪತ್ತಿಯಾಗುವ ಸಂತೋಷ, ರಸ ಮತ್ತು ಆನಂದಕ್ಕಿಂತ ಹೆಚ್ಚು ಸಂಪೂರ್ಣತೆಯ ಭಾವ ಸ್ಥಿತಿಯನ್ನು ತಲುಪಬೇಕು. ಅದು ಮಹಾ ಆನಂದವನ್ನು ತರುತ್ತದೆ. ನೀವು ಇದ್ದಕ್ಕಿದ್ದಂತೆ ಯಾವುದೋ ಸಂತೋಷವನ್ನು ಪಡೆದಾಗ ಅಥವಾ ಬಹಳ ಸಮಯದ ನಂತರ ಸ್ನೇಹಿತರು ಮತ್ತು ಸಂಬಂಧಿಕರ ಭೇಟಿಯಿಂದ ಉಂಟಾಗುವ ಸಂತೋಷವನ್ನು ಆನಂದಿಸಿ - ಅದುವೇ ಮಹದಾನಂದ.
8 / 11
ಪ್ರಕೃತಿಯನ್ನು ಗೌರವಿಸಿ: ಪ್ರಕೃತಿ ನಮಗೆ ಜೀವನವನ್ನು ನೀಡುತ್ತದೆ, ಅದನ್ನು ಗೌರವಿಸಿ. ಇದನ್ನು ಅವಮಾನಿಸುವವನು ನನ್ನನ್ನೂ ಸಹ ಅವಮಾನಿಸುತ್ತಾನೆ ಎಂದು ಅರ್ಥಮಾಡಿಕೊಳ್ಳಿ. ಪ್ರಪಂಚದ ಪ್ರತಿಯೊಂದು ಕೆಲಸವನ್ನು ಪ್ರಕೃತಿಯ ನಿಯಮಗಳು ಮತ್ತು ವಿಧಾನಗಳ ಪ್ರಕಾರ ಮಾಡಲಾಗುತ್ತದೆ. ಆದರೆ ಅಹಂನಿಂದ ಬಳಲುತ್ತಿರುವ ಜನರು ಎಲ್ಲವನ್ನೂ ತಾವೇ ಮಾಡುತ್ತಿರುವುದಾಗಿ ನಂಬುತ್ತಾರೆ.
9 / 11
ಯೋಗದ ಶಕ್ತಿಯನ್ನು ಅರ್ಥಮಾಡಿಕೊಳ್ಳಿ: ವಿಸ್ಮಯೋ ಯೋಗಭೂಮಿಕಾ: । ಸ್ವಪದಶಕ್ತಿ । ವಿತರ್ಕ ಆತ್ಮಜ್ಞಾನ । ಲೋಕಾನಂದ: ಸಮಾಧಿಸುಖಂ । ಇದು ಶಿವಸೂತ್ರ.
ಇದರ ಅರ್ಥ ಹೀಗಿದೆ: ವಿಸ್ಮಯವೆಂಬುದು ಯೋಗದ ಪಾತ್ರವಾಗಿದೆ. ಸ್ವಯಂ ಸ್ಥಿತಿಯಲ್ಲಿ ಶಕ್ತಿ ಅಡಗಿದೆ. ವಿತರ್ಕ ಅಂದರೆ ವಿವೇಕವು ಆತ್ಮಜ್ಞಾನದ ಸಾಧನವಾಗಿದೆ. ಅಸ್ತಿತ್ವದ ಆನಂದವನ್ನು ಅನುಭವಿಸುವುದು ಸಮಾಧಿ ಸ್ಥಿತಿಯಾಗಿದೆ.
10 / 11
ನಿಮ್ಮ ಕಡೆಗೆ ನೋಡಿ - ಹಿಂದೆ ಅಥವಾ ಮುಂದೆ ಯಾರೂ ಇಲ್ಲ; ಯಾರೂ ನಿಮ್ಮವರಲ್ಲ. ಯಾವ ಮಗನೂ ನಿಮ್ಮನ್ನು ಭರ್ತಿ ಮಾಡಲಾರನು. ಯಾವುದೇ ಸಂಬಂಧವು ನಿಮ್ಮ ಆತ್ಮವಾಗುವುದಿಲ್ಲ. ನಿಮ್ಮನ್ನು ಹೊರತುಪಡಿಸಿ ನಿಮಗೆ ಸ್ನೇಹಿತರಿಲ್ಲ. ನಿಮಗೆ ನೀವೇ - ಎಂಬುದನ್ನು ಅರಿತುಕೊಳ್ಳಿ.
11 / 11
ಮಾಯೆಯನ್ನು ಅರ್ಥಮಾಡಿಕೊಳ್ಳಿ: ಆತ್ಮಾ ಚಿತ್ತಂ । ಕಾಲಾದೀನಾಂ ತತ್ವಾನಾಮ್ವಿವೇಕೋ ಮಯಾ । ಮೋಹಾವರಣಾತ್ ಸಿದ್ಧಿ । ಜಾಗ್ರತ್ ದ್ವಿತೀಯ್ ಕರಃ II
ಅರ್ಥ: ಆತ್ಮವೇ ಮನಸ್ಸು. ಕಲೆ ಮೊದಲಾದ ಅಂಶಗಳ ಅಜ್ಞಾನವೇ ಮಾಯೆ. ಮೋಹ ಬಾಂಧವ್ಯದಿಂದ ಅತೀತನಾದ ಮುಕ್ತನಾದ ವ್ಯಕ್ತಿಯು ಸಾಧನೆಗಳನ್ನು ಪಡೆಯುತ್ತಾನೆ. ಅದಿಲ್ಲದಿದ್ದರೆ ಆತ್ಮಜ್ಞಾನವನ್ನು ಪಡೆಯುವುದಿಲ್ಲ. ಬಾಂಧವ್ಯವನ್ನು ಕಾಯಂ ಆಗಿ ಜಯಿಸಿದಾಗ ಸಹಜ ವಿದ್ಯೆ ಫಲಿತವಾಗುತ್ತದೆ. ಅಂತಹ ಜಾಗೃತ ಯೋಗಿಯು ಇಡೀ ಪ್ರಪಂಚವು ತನ್ನ ಕಿರಣಗಳಿಂದ ಹೊರಹೊಮ್ಮುತಿದೆ ಎಂಬುದನ್ನು ಅರಿತುಕೊಳ್ಳುತ್ತಾನೆ.
Published On - 6:06 am, Sat, 3 August 24