Akshaya Tritiya 2023: ಅಕ್ಷಯ ತೃತೀಯ ಮತ್ತು ಚಿನ್ನಕ್ಕೆ ಇರುವ ಸಂಬಂಧ ಎಂತಹುದು? ಅಸಲಿಗೆ ಅಕ್ಷಯ ತೃತೀಯ ಎಂದರೆ ಏನು?

|

Updated on: Apr 21, 2023 | 11:25 AM

ಅಕ್ಷಯ ತೃತೀಯ.. ಈ ಹೆಸರು ಹೇಳಿದಾಗ ತಕ್ಷಣ ತಲೆಗೆ ಬರುವುದು ಚಿನ್ನ. ಅಷ್ಟರಮಟ್ಟಿಗೆ ಈ ಹಬ್ಬಕ್ಕೆ ಬಂಗಾರವನ್ನೇ ಮುಡಿಪಾಗಿಟ್ಟಿದ್ದಾರೆ ನಮ್ಮ ಮಾರುಕಟ್ಟೆ ತಜ್ಞರು! ಆದ್ದರಿಂದಲೇ ನಮ್ಮ ನಮ್ಮ ಪಾಲ್ಗೊಳ್ಳುವಿಕೆ ಇಲ್ಲದೆಯೇ, ನಮ್ಮ ಅರಿವಿಗೆ ಬಾರದೆಯೇ ಕನಿಷ್ಠ ಒಂದು ತಿಂಗಳು ಮುಂಚಿನಿಂದಲೇ ಈ ಹಬ್ಬದ ದಿನವನ್ನು ನೆನಪಿಸಿಕೊಳ್ಳುತ್ತಾ... ಈ ಸಚಿತ್ರ ಲೇಖನ ನಿಮಗಾಗಿ.

1 / 9
ಆಫರ್ ಗಳ ಜಾಲವನ್ನು ತಡಕಾಡುತ್ತಾ... ಚಿನ್ನದ ಪ್ರಿಯರನ್ನು ಆದಷ್ಟೂ ಸೆಳೆಯುವ ಪ್ರಯತ್ನಗಳೆಲ್ಲ ಮಾಡುತ್ತಾರೆ ಮಾರುಕಟ್ಟೆದಾರರು. ವಾಸ್ತವವಾಗಿ ಉತ್ತರದ ರಾಜ್ಯಗಳನ್ನು ಹೊರತುಪಡಿಸಿ ದಕ್ಷಿಣದ ರಾಜ್ಯಗಳಲ್ಲಿ ಅದರಲ್ಲೂ ನಮ್ಮ ಕರ್ನಾಟಕದಲ್ಲಿ 2000 ಇಸ್ವಿಗೆ ಮುಂಚೆ ಈ ಹಬ್ಬಕ್ಕೆ ಹೆಚ್ಚಿನ ಪ್ರಚಾರ ಇರಲಿಲ್ಲ. ಆದರೆ ಪ್ರಸಾರ ಮಾಧ್ಯಮಗಳು ಹೆಚ್ಚಾದ ನಂತರ... ಅಂದರೆ ಕಾರ್ಪೊರೇಟ್ ಸಂಸ್ಥೆಗಳು ಚಿನ್ನದ ವ್ಯಾಪಾರಕ್ಕೆ ಕಾಲಿಟ್ಟ ನಂತರ... ಅಕ್ಷಯ ತೃತೀಯ ಎಂದಾಕ್ಷಣ ಚಿನ್ನದ ಅಂಗಡಿಗಳು ಜನರಿಂದ ತುಂಬಿ ತುಳುಕತೊಡಗಿದವು.

2 / 9
ಆದರೆ ಸರಳವಾಗಿ ಹೇಳುವುದಾದರೆ, ಈ ದಿನದ ಶಬ್ದಾರ್ಥದಲ್ಲೇ ನಮಗೆ ಸ್ಪಷ್ಟತೆಯಿದೆ. ಅಕ್ಷಯ ಎಂದರೆ ಅಕ್ಷಯವಾಗುವುದು ಅನಂತವಾಗಿ ದೊರೆಯುವುದು.. ಅಂದರೆ ಎಂದಿಗೂ ಖಾಲಿ ಆಗದಿರುವುದು. ಆದ್ದರಿಂದಲೇ ಆ ದಿನ ಶುಭಕಾರ್ಯಗಳನ್ನು ಮಾಡಲು ಹೇಳಲಾಗುತ್ತದೆ. ಆ ಒಳ್ಳೆಯತನವು ಎಂದಿಗೂ ಕ್ಷೀಣಿಸುವುದಿಲ್ಲವಾದ್ದರಿಂದ... ಅದರ ಫಲಗಳು ಖಂಡಿತವಾಗಿ ಶುಭಕರವಾಗಿರುತ್ತವೆ. ಮಾರ್ಕೆಟಿಂಗ್ ತಜ್ಞರು ಈ ನಿಖರವಾದ ಅರ್ಥವನ್ನು ತಮ್ಮ ಚಿನ್ನದ ವ್ಯವಹಾರಕ್ಕೆ ಲಿಂಕ್ ಮಾಡಿಬಿಟ್ಟಿದ್ದಾರೆ ಅಷ್ಟೇ. ಏಕೆಂದರೆ ಭಾರತೀಯರಿಗೆ ಚಿನ್ನದ ಬಗ್ಗೆ ಒಲವು ತುಸು ಜಾಸ್ತಿಯೇ ಇದೆ... ಏಕೆಂದರೆ ಚಿನ್ನವನ್ನು ಕೊಳ್ಳುವುದು ಅದೃಷ್ಟದ ಸಂಕೇತ ಎಂದು ನಾವು ಭಾವಿಸುತ್ತೇವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಚಿನ್ನವು ಶಾಶ್ವತವಾಗಿ ಉಳಿಯುತ್ತದೆ ಎಂದು ಎಲ್ಲಾ ಮಹಿಳೆಯರು ಆಶಿಸುತ್ತಾರೆ ... ಅಕ್ಷಯ ತೃತೀಯ ಸ್ವಲ್ಪವೇ ಖರೀದಿ ಮಾಡಿದರೂ ಮತ್ತಷ್ಟು ಮತ್ತಷ್ಟು ಸೃಷ್ಟಿಯಾಗುತ್ತಲೇ ಇರುತ್ತದೆ ಎಂದು ಪ್ರಚಾರ ಮಾಡಲಾಗುತ್ತದೆ.

3 / 9
ಸದ್ಯದ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆ ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ... ಖರೀದಿಯಿಂದಾಗಿ ನಷ್ಟ ಆಗುವುದಕ್ಕಿಂತ ಲಾಭವೇ ಹೆಚ್ಚು. ಹಾಗಾಗಿಯೇ ಬಂಗಾರದ ವಿಚಾರದಲ್ಲಿ ಮಾರುಕಟ್ಟೆ ತಜ್ಞರು ಕೂಡ ಖರೀದಿಗೆ ಗ್ರೀನ್ ಸಿಗ್ನಲ್ ನೀಡುತ್ತಿರುವುದು ಸಮಾಧಾನ ತಂದಿದೆ. ಒಟ್ಟಿನಲ್ಲಿ... ಈ ಸತ್ಯಗಳು ಏನೇ ಇರಲಿ...ಅಕ್ಷಯ ತೃತೀಯದಂದು ಚಿನ್ನ ಖರೀದಿಸುವ ಅಭಿಯಾನ ಬಲವಾದ ನಂಬಿಕೆಯಾಗಿ ಬದಲಾಗಿದೆ. ಅಲ್ಲೊಂದು ಇಲ್ಲೊಂದು ಮಾರುವವರಿಗೂ ಇಲ್ಲಿ ಕೊಳ್ಳುವವರಿಗೂ ಇದನ್ನು ಕನಕವೃಷ್ಟಿ ದಿನ ಎಂದೇ ಹೇಳಬಹುದು. ಸರಿ... ನಾವು ಎಷ್ಟೇ ಟೀಕೆ ಮಾಡಿದರೂ... ಎಷ್ಟೇ ವ್ಯಾವಹಾರಿಕ ತಂತ್ರಗಳನ್ನು ಬಳಸಿದರೂ... ಅಕ್ಷಯ ತೃತೀಯದಂದು ಬೇರೂರಿರುವ ನಂಬಿಕೆಗಳನ್ನು ಬದಲಾಯಿಸಲು ನಮಗೆ ಸಾಧ್ಯವಿಲ್ಲ. ಹಾಗಾದರೆ ಚಿನ್ನ ಖರೀದಿಸಲು ನಿರ್ಧರಿಸಿರುವವರು ಯಾವೆಲ್ಲ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ನೋಡೋಣ.

4 / 9
ಕಚ್ಚಾ ಬೆಲೆಗಳಲ್ಲಿ ಚಿನ್ನವನ್ನು ಖರೀದಿಸುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯವೆಂದರೆ ಅದರ ಅಂತಾರಾಷ್ಟ್ರೀಯ ಬೆಲೆ. ಚಿನ್ನದ ಬೆಲೆ ಎಂದಿಗೂ ಸ್ಥಿರವಾಗಿರುವುದಿಲ್ಲ. ಅಲ್ಪಾವಧಿಯಲ್ಲಿ ಅನೇಕ ಏರಿಳಿತಗಳನ್ನು ಕಾಣುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳಿಂದ ಚಿನ್ನದ ಬೆಲೆಯಲ್ಲೂ ಏರಿಳಿತವಾಗುತ್ತದೆ. ಅಲ್ಲದೆ ದೇಶದಾದ್ಯಂತ ಬೆಲೆ ಒಂದೇ ಇರುವುದಿಲ್ಲ. ಒಂದೊಂದು ನಗರದಲ್ಲಿಯೂ ಒಂದೊಂದು ಭಿನ್ನವಾಗಿರಬಹುದು. ಹಾಗಾಗಿ ಚಿನ್ನ ಖರೀದಿಸುವ ಮುನ್ನ ಒಂದು ಅಥವಾ ಎರಡು ಅಂಗಡಿಗಳಲ್ಲಿ ಚಿನ್ನದ ಬೆಲೆಯನ್ನು ಪರಿಶೀಲಿಸಬೇಕು. ವಿಶ್ವಾಸಾರ್ಹ ವೆಬ್‌ಸೈಟ್‌ಗಳಲ್ಲಿಯೂ ದರಗಳನ್ನು ಪರಿಶೀಲಿಸಬಹುದು.

5 / 9
ಶುದ್ಧ ಚಿನ್ನವನ್ನು ಖರೀದಿಸುವಾಗ ತಿಳಿಯಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ ಅದರ ಶುದ್ಧತೆ. ಚಿನ್ನದ ಶುದ್ಧತೆಯನ್ನು ಕ್ಯಾರೆಟ್‌ನಲ್ಲಿ ಅಳೆಯಲಾಗುತ್ತದೆ. 24 ಕ್ಯಾರೆಟ್ ಚಿನ್ನವನ್ನು ಶುದ್ಧ ಚಿನ್ನವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ನಾವು ಖರೀದಿಸುವ ಎಲ್ಲಾ ಚಿನ್ನಾಭರಣಗಳು 22 ಕ್ಯಾರೆಟ್ ಆಗಿರುತ್ತವೆ. ಹಾಗಾಗಿ ಬೆಲೆ ನೋಡುವಾಗ 22 ಕ್ಯಾರೆಟ್ ಚಿನ್ನವನ್ನು ಪರಿಗಣಿಸಬೇಕು. ನಿಮಗೆ 24 ಕ್ಯಾರೆಟ್ ಶುದ್ಧ ಚಿನ್ನ ಬೇಕಾದರೆ ನಾಣ್ಯ ಮತ್ತು ಬಾರ್ ಗಳ ರೂಪದಲ್ಲಿ ಖರೀದಿಸಬೇಕು.

6 / 9
ಮೇಕಿಂಗ್ ಚಾರ್ಜ್‌ಗಳು, ಆಭರಣ ವಿನ್ಯಾಸ ಮತ್ತು ಅದನ್ನು ತಯಾರಿಸುವ ಜನರನ್ನು ಅವಲಂಬಿಸಿ ಉತ್ಪಾದನಾ ಶುಲ್ಕಗಳು ಬದಲಾಗುತ್ತವೆ. ನಾಣ್ಯ ರೂಪದಲ್ಲಿ ಚಿನ್ನವನ್ನು ಖರೀದಿಸಿದ ನಂತರ, ಅದನ್ನು ಆಭರಣವನ್ನಾಗಿ ಮಾಡಲು 8 ರಿಂದ 16 ಪ್ರತಿಶತದಷ್ಟು ಉತ್ಪಾದನಾ ಶುಲ್ಕವನ್ನು ಸೇರಿಸಲಾಗುತ್ತದೆ. ಇವುಗಳಲ್ಲಿ ಕೆಲವು ಉತ್ಪಾದನಾ ಶುಲ್ಕವಾಗಿದೆ ಮತ್ತು ಕೆಲವು ಸವಕಳಿ ರೂಪದ ವಚ್ಚವನ್ನು ನಿಮಗೆ ಖರೀದಿ ಮೇಲೆ ವಿಧಿಸಲಾಗುತ್ತದೆ. ಚಿನ್ನಾಭರಣ ತಯಾರಿಕೆಯಲ್ಲಿ ಒಂದಷ್ಟು ಚಿನ್ನ ವೃಥಾ ವ್ಯರ್ಥವಾಗುತ್ತದೆ. ಇದನ್ನು ಸವಕಳಿ ಅಥವಾ ವ್ಯರ್ಥ ಎಂದು ಕರೆಯಲಾಗುತ್ತದೆ. ಆಭರಣಗಳನ್ನು ತಯಾರಿಸಲು ವಿಧಿಸುವ ಮೊತ್ತವನ್ನು ಮಜೂರಿ ಎಂದು ಕರೆಯಲಾಗುತ್ತದೆ. ಇದು ಆಭರಣದ ಆಧಾರದ ಮೇಲೆ ಬದಲಾಗುತ್ತದೆ.

7 / 9
ಹಾಲ್ ಮಾರ್ಕಿಂಗ್ ಆಭರಣಗಳನ್ನು ಶುದ್ಧ ಚಿನ್ನದಿಂದ ಮಾಡಲಾಗುವುದಿಲ್ಲ. ಆದ್ದರಿಂದ ಆಭರಣಗಳನ್ನು ತಯಾರಿಸಲು ಇತರ ಲೋಹಗಳನ್ನು ಚಿನ್ನದೊಂದಿಗೆ ಬೆರೆಸಲಾಗುತ್ತದೆ. ಆಭರಣದ ಶುದ್ಧತೆಯು ಈ ಲೋಹಗಳು ಎಷ್ಟು ಮಿಶ್ರಣವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹಾಲ್‌ಮಾರ್ಕ್ ಗುರುತು ಚಿನ್ನದ ಆಭರಣದ ಶುದ್ಧತೆಯನ್ನು ಸೂಚಿಸುತ್ತದೆ. ಚಿನ್ನಾಭರಣಗಳನ್ನು ಖರೀದಿಸುವಾಗ ಗ್ರಾಹಕರು ಮೋಸ ಹೋಗದಂತೆ ನೋಡಿಕೊಳ್ಳಲು ಭಾರತ ಸರ್ಕಾರವು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅನ್ನು ಸ್ಥಾಪಿಸಿದೆ. ನೀವು ಖರೀದಿಸುವ ಚಿನ್ನದ ಆಭರಣಗಳು ಬಿಐಎಸ್ ಹಾಲ್ ಮಾರ್ಕ್ ಅನ್ನು ಹೊಂದಿರಬೇಕು. ಏಪ್ರಿಲ್ 1 ರಿಂದ, ಬಿಐಎಸ್ 6-ಅಂಕಿಯ HUID (ಹಾಲ್ ಮಾರ್ಕ್ ಯೂನಿಕ್ ಐಡೆಂಟಿಫಿಕೇಶನ್) ಹೊಂದಿರುವ ಚಿನ್ನದ ಆಭರಣಗಳನ್ನು ಮಾರಾಟ ಮಾಡುವುದನ್ನು ಕಡ್ಡಾಯಗೊಳಿಸಿದೆ. ಚಿನ್ನದ ಹಾಲ್‌ಮಾರ್ಕ್ ಕುರಿತು ನೀವು ಯಾವುದೇ ದೂರುಗಳನ್ನು ಹೊಂದಿದ್ದರೆ BIS ಅನ್ನು ನೇರವಾಗಿ ಸಂಪರ್ಕಿಸಬಹುದು.

8 / 9
ಚಿನ್ನವನ್ನು ಖರೀದಿಸುವುದು ಹೇಗೆ? ಇದು ಚಿನ್ನದಂತಹ ಪ್ರಶ್ನೆಯೇ ಸರಿ.. ಚಿನ್ನ ಬೇಕಾದರೆ ಸೀದಾ ಬಂಗಾರದ ಅಂಗಡಿಗೆ ಹೋಗಿ ಖರೀದಿ ಮಾಡಿ ಸಾಕು ಎಂದು ನೀವು ಹೇಳಬಹುದು. ಆದರೆ ಈಗ ಆಭರಣಗಳನ್ನು ಖರೀದಿಸಲು ಅಂಗಡಿಗಳಿಗೆ ಹೋಗಬೇಕಾಗಿಲ್ಲ. ಅನೇಕ ಕಾರ್ಪೊರೇಟ್ ಮಳಿಗೆಗಳು ಆನ್‌ಲೈನ್‌ನಲ್ಲಿ ಆಭರಣಗಳನ್ನು ಮಾರಾಟ ಮಾಡುತ್ತವೆ. ನೀವು ನಾಣ್ಯಗಳು ಅಥವಾ ಬಾರ್‌ಗಳ ರೂಪದಲ್ಲಿ ಚಿನ್ನವನ್ನು ಖರೀದಿಸಲು ಬಯಸಿದರೆ, MMTC ಯಂತಹ ಕೆಲವು ವೆಬ್‌ಸೈಟ್‌ಗಳು ಸಹ ಲಭ್ಯವಿದೆ. ಚಿನ್ನದ ನಾಣ್ಯಗಳನ್ನು ಖರೀದಿಸಲು ಬ್ಯಾಂಕ್‌ಗಳನ್ನು ಸಹ ಸಂಪರ್ಕಿಸಬಹುದು. ಅನೇಕ ಬ್ಯಾಂಕುಗಳು ವಿವಿಧ ಮಾದರಿಗಳ 24 ಕ್ಯಾರೆಟ್ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡುತ್ತವೆ.

9 / 9
ಖರೀದಿಸುವುದು ಸರಿಯೇ! ಆದರೆ ಅದನ್ನೇ ಮಾರಾಟ ಮಾಡಬಯಸಿದಾಗ ನೆನಪಿಡುವ ವಿಷಯಗಳು ಯಾವುವು? ಚಿನ್ನದ ಆಭರಣಗಳನ್ನು ಖರೀದಿಸುವಾಗ ಮೇಕಿಂಗ್ ಚಾರ್ಜ್, ಲಾಭಾಂಶ, ಜಿಎಸ್‌ಟಿ ಎಲ್ಲವೂ ಅನ್ವಯಿಸುತ್ತದೆ.  ಅದನ್ನೇ ಮರುಮಾರಾಟ ಮಾಡುವಾಗ, ಇವು ಯಾವುವೂ ಮರಳಿ ಬರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಮೇಲಾಗಿ ಹಳೆ ಬಂಗಾರದ ಬೆಲೆಯಲ್ಲಿ, ವೆಚ್ಚದ ರೂಪದಲ್ಲಿ ಕೊಂಚ ಇಳಿಕೆಯಾಗುವ ಸಾಧ್ಯತೆ ಇದೆ. ಕಲ್ಲುಗಳಿರುವ ಆಭರಣಗಳು ಇದ್ದರೆ ಸಾಮಾನ್ಯವಾಗಿ ಹೆಚ್ಚು ವ್ಯರ್ಥವಾಗುತ್ತವೆ. ಆದ್ದರಿಂದ ಹೆಚ್ಚಿನ ಕಲ್ಲುಗಳಿಲ್ಲದ ಆಭರಣಗಳನ್ನು ಖರೀದಿಸಲು ಪ್ರಯತ್ನಿಸುವುದು ಉತ್ತಮ. ಸಾಮಾನ್ಯವಾಗಿ, ಹೂಡಿಕೆಯಾಗಿ ಚಿನ್ನವನ್ನು ಖರೀದಿಸುವವರು ಅದನ್ನು ನಾಣ್ಯಗಳು ಮತ್ತು ಬಾರ್‌ಗಳ ರೂಪದಲ್ಲಿ ಖರೀದಿಸಲು ಬಯಸುತ್ತಾರೆ. ಸಾರ್ವಭೌಮ ಗೋಲ್ಡ್ ಬಾಂಡ್ ಸ್ಕೀಮ್, ಗೋಲ್ಡ್ ಇಟಿಎಫ್‌ಗಳ ಮೂಲಕ ಡಿಜಿಟಲ್ ರೂಪದಲ್ಲಿ ಚಿನ್ನವನ್ನು ಖರೀದಿಸುವ ಅವಕಾಶಗಳನ್ನು ಪರಿಶೀಲಿಸುವುದು ಒಳ್ಳೆಯದು. ಮತ್ತು ಕೊನೆಯದಾಗಿ ಹೇಳಬಹುದಾದ ವಿಷಯವೆಂದರೆ ಭಾರತೀಯ ನಂಬಿಕೆಯ ಪ್ರಕಾರ, ಚಿನ್ನವು ಸಂಪತ್ತಿನ ಸಂಕೇತವಾಗಿದೆ. ವರ್ಷವಿಡೀ ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೂ... ಕನಿಷ್ಠ ಅಕ್ಷಯ ತೃತೀಯ ಹೆಸರಲ್ಲಿ ಸ್ವಲ್ಪವೇ ಆದರೂ ಚಿನ್ನವನ್ನು ಖರೀದಿಸುವುದರಿಂದ ಆ ಕ್ಷಣಕ್ಕೆ ಮಹಿಳೆಯ ಬಾಯಲ್ಲಿ ನಗು ಕಾಣುವುದಷ್ಟೇ ಅಲ್ಲ.. ಭವಿಷ್ಯದಲ್ಲಿ ಅಕಸ್ಮಾತ್ ಏನೆಲ್ಲಾ ಅನಿರೀಕ್ಷಿತ ಅವಶ್ಯಕತೆಗಳು ಎದುರಾದರೂ... ಚಿನ್ನ ಖರೀದಿ ನಮಗೆ ಅಭಯ ನೀಡುತ್ತದೆ. ಜೊತೆಗೆ ನಮಗೆ ಅಗತ್ಯವಿರುವ ಆತ್ಮವಿಶ್ವಾಸ ಮತ್ತು ಧೈರ್ಯವನ್ನೂ ಇದು ತಂದುಕೊಡುತ್ತದೆ. ಅದಕ್ಕಾಗಿಯೇ ಈ ಅಕ್ಷಯ ತೃತೀಯ ಆಚರಣೆಯು ಭಾರತದಲ್ಲಿ ಉತ್ತಮ ಸ್ಪಂದನೆ ಪಡೆದಿದೆ.