Updated on: Apr 22, 2023 | 6:30 AM
ನಟಿ ಪ್ರಿಯಾಂಕಾ ತಿಮ್ಮೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಸ್ಪರ್ಧಿ ಆಗಿ ಬಂದಿದ್ದರು. ತಮ್ಮ ನೇರ ನಡೆನುಡಿಯಿಂದ ಅವರು ಗುರುತಿಸಿಕೊಂಡರು.
ಬಿಗ್ ಬಾಸ್ ರಿಯಾಲಿಟಿ ಶೋನಿಂದ ಪ್ರಿಯಾಂಕಾ ತಿಮ್ಮೇಶ್ ಅವರ ಖ್ಯಾತಿ ಹೆಚ್ಚಾಗಿದೆ. ಅವರು ಸದ್ಯ ಪರಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ.
ಪ್ರಿಯಾಂಕಾ ತಿಮ್ಮೇಶ್ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋದಲ್ಲಿ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಪ್ರಿಯಾಂಕಾ ತಿಮ್ಮೇಶ್ ಅವರು ಇತ್ತೀಚೆಗೆ ಡ್ಯಾನ್ಸ್ ಮಾಡುವ ರೀಲ್ಸ್ ಹಂಚಿಕೊಂಡಿದ್ದರು. ಅವರ ಬಟ್ಟೆ ಬಗ್ಗೆ ನೆಗೆಟಿವ್ ಕಮೆಂಟ್ ಬಂದಿತ್ತು.
ಈ ಎಲ್ಲಾ ಕಮೆಂಟ್ಗಳಿಗೆ ಪ್ರಿಯಾಂಕಾ ತಿಮ್ಮೇಶ್ ಪಾಸಿಟಿವ್ ಆಗಿ ಉತ್ತರ ನೀಡಿದ್ದರು. ಇದು ಅನೇಕರಲ್ಲಿ ಅಚ್ಚರಿ ಮೂಡಿಸಿತ್ತು.