Kannada News Photo gallery south india's first double deck flyover inaugurated In Bengaluru here Is flyover details karnataka News In Kannada
ಬೆಂಗಳೂರಿನಲ್ಲಿರುವ ದಕ್ಷಿಣ ಭಾರತದ ಫಸ್ಟ್ ಡಬಲ್ ಡೆಕ್ಕರ್ ಫ್ಲೈಓವರ್ ಲೋಕಾರ್ಪಣೆ, ಇದರ ವಿಶೇಷತೆಗಳೇನು?
ದಕ್ಷಿಣ ಭಾರತದ ಪ್ರಥಮ ರೋಡ್ ಕಮ್ ಮೆಟ್ರೋ ಮೇಲ್ಸೇತುವೆ ಬೆಂಗಳೂರಿನಲ್ಲಿದ್ದು, ಅದು ಇಂದು (ಜುಲೈ 17) ಲೋಕಾರ್ಪಣೆಗೊಂಡಿದೆ. ರಾಗಿಗುಡ್ಡ ಮೆಟ್ರೋ ಸ್ಟೇಷನ್ ಬಳಿ ಉಪಮುಖ್ಯಂತ್ರಿ ಡಿಕೆ ಶಿವಕುಮಾರ್ ಅವರು ಡಬಲ್ ಡೆಕ್ಕರ್ ಫ್ಲೈಓವರ್ ಪ್ರಾಯೋಗಿಕ ಸಂಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಹಾಗಾದ್ರೆ, ಏನಿದು ಡಬಲ್ ಡೆಕ್ಕರ್ ಫ್ಲೈಓವರ್? ಇದಕ್ಕೆ ಖರ್ಚಾದ ಹಣವೆಷ್ಟು? ಲಾಭ ಏನು? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
1 / 8
ದಕ್ಷಿಣ ಭಾರತದ ಅತಿ ಎತ್ತರದ ರೋಡ್-ಕಮ್-ರೈಲು ಮೇಲ್ಸೇತುವೆ ಲೋಕಾರ್ಪಣೆಗೊಂಡಿದೆ. ಡಿಸಿಎಂ ಡಿಕೆ ಶಿವಕುಮಾರ್ ಇಂದು (ಜುಲೈ 17) ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ಸ್ಟೇಷನ್ ಬಳಿ ಡಬಲ್ ಡೆಕ್ಕರ್ ಫ್ಲೈಓವರ್ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದರು.
2 / 8
ಈ ಮೂಲಕ ಒಟ್ಟು 449 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಡಬ್ಬಲ್ ಡೆಕ್ಕರ್ ಫ್ಲೈ ಓವರ್ ಅನ್ನು ಲೋಕಾರ್ಪಣೆ ಮಾಡಿದರು. ಈ ಫ್ಲೈಓವರ್ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಜಂಕ್ಷನ್‌ವರೆಗೆ (Silk Board Junction) ಜೋಡಿಸಲಿದೆ.
3 / 8
ಈ ಡಬಲ್ ಡೆಕ್ಕರ್-ಫ್ಲೈಓವರ್ ಮೇಲಿನ ಡೆಕ್‌ನಲ್ಲಿ ಎಲಿವೇಟೆಡ್ ಮೆಟ್ರೋ ಕಾರಿಡಾರ್ ಇದ್ದರೆ. ಕೆಳಗಿನ ಡೆಕ್‌ನಲ್ಲಿ ವಾಹನ ಸಂಚಾರಕ್ಕಾಗಿ ಎಲಿವೇಟೆಡ್ ರಸ್ತೆಯನ್ನು ಒಳಗೊಂಡಿದೆ. ಎಲಿವೇಟೆಡ್ ರಸ್ತೆಯ ಮೇಲೆ ಮೆಟ್ರೋ ಮಾರ್ಗವನ್ನು ಹೊಂದಿರುವ ದಕ್ಷಿಣ ಭಾರತದಲ್ಲಿ ಇದು ಮೊದಲ ಫ್ಲೈಓವರ್ ಆಗಿದೆ.
4 / 8
ಈ ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಇಂತಹ ವಾಹನಗಳು ಮಾತ್ರ ಸಂಚರಿಸಬೇಕೆಂದು ಇಲ್ಲ. ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಅವಕಾಶ ಇದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ಹಂಚಿಕೆಕೊಂಡಿದ್ದಾರೆ. ಇನ್ನು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಮಾರೇನಹಳ್ಳಿ ರಸ್ತೆಯಲ್ಲಿ 31 ಮೀಟರ್ ಎತ್ತರದಲ್ಲಿ ಮೇಲ್ಸೇತುವೆಯನ್ನು ನಿರ್ಮಿಸಿದ್ದು, ಆರ್‌ವಿ ರಸ್ತೆ-ಬೊಮ್ಮಸಂದ್ರ ಮೆಟ್ರೋ ಮಾರ್ಗವನ್ನು ಎರಡನೇ ಹಂತದಲ್ಲಿ ಹಾಕಲಾಗಿದೆ.
5 / 8
ಮೇಲ್ಸೇತುವೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಆಗುತ್ತಿದ್ದ ದಟ್ಟಣೆ ಕಡಿಮೆಯಾಗಲಿದೆ. ಎಲೆಕ್ಟ್ರಾನಿಕ್ಸ್ ಸಿಟಿಯ ಉದ್ಯೋಗಿಗಳು ಟ್ರಾಫಿಕ್ ಜಾಮ್ ನಿಂದ ಮುಕ್ತಿ ಪಡೆಯಲಿದ್ದಾರೆ. 3.3 ಕಿಲೋಮೀಟರ್ ವರೆಗೆ ತಡೆ ರಹಿತ ಸಂಚಾರವಿರಲಿದೆ. ಹೀಗಾಗಿ ಒಮ್ಮೆ ಫ್ಲೈ ಓವರ್ ಹತ್ತಿದರೆ 3.3 ಕಿಮೀವರೆಗೆ ಎಲ್ಲಿಯೂ ಇಳಿಯಲು ಅವಕಾಶವಿಲ್ಲ.
6 / 8
ಎರಡು ಕಡೆ ಯೂ ಟರ್ನ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಮುಖ್ಯವಾಗಿ ವಾಹನ ದಟ್ಟಣೆಗಾಗಿ ಕುಖ್ಯಾತವಾಗಿರುವ ಸಿಎಸ್‌ಬಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಅವ್ಯವಸ್ಥೆಯನ್ನು ಈ ಮೇಲ್ಸೇತುವೆ ಕಡಿಮೆ ಮಾಡಲು ಸಹಾಯಕವಾಗಿದೆ.
7 / 8
ಮೇಲ್ಸೇತುವೆಯ ಲೂಪ್‌ಗಳು ಮತ್ತು ಇಳಿಜಾರುಗಳ ನಿರ್ಮಾಣವನ್ನು M/s ಅಫ್ಕಾನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಾರ್ಯಗತಗೊಳಿಸಿದೆ. ರಾಗಿಗುಡ್ಡದಿಂದ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ಮೂಲಕ ಬರುವ ವಾಹನ ಬಳಕೆದಾರರು ಎ ರ‍್ಯಾಂಪ್ ಮೂಲಕ ಹೊಸೂರು ರಸ್ತೆ ಮತ್ತು ಸಿ ರ‍್ಯಾಂಪ್ ಮೂಲಕ ಎಚ್ಎಸ್ಆರ್ ಲೇಔಟ್ ತಲುಪುತ್ತಾರೆ.
8 / 8
ನೆಲಮಟ್ಟದಲ್ಲಿರುವ ರ‍್ಯಾಂಪ್ ಬಿ, ಬಿಟಿಎಂ ಬದಿಯಿಂದ ಹೊರವರ್ತುಲ ರಸ್ತೆ ಮತ್ತು ಹೊಸೂರು ರಸ್ತೆಯನ್ನು ಪ್ರವೇಶಿಸಲು ರ‍್ಯಾಂಪ್ ಎ ಅನ್ನು ಸಂಪರ್ಕಿಸುತ್ತದೆ. ಎಚ್‌ಎಸ್‌ಆರ್ ಲೇಔಟ್‌ನಿಂದ ಬರುವವರು ರ‍್ಯಾಂಪ್ ಎ ಮತ್ತು ಹಳದಿ ಲೈನ್ ಮೆಟ್ರೋ ಲೈನ್‌ನ ಮೇಲೆ ಹಾದು ಹೋಗುವ ರ‍್ಯಾಂಪ್ ಡಿ ಮೂಲಕ ರಾಗಿಗುಡ್ಡ ಕಡೆಗೆ ತಲುಪಲು ಸಾಧ್ಯವಾಗುತ್ತದೆ ಮತ್ತು ಬಿಟಿಎಂ ಲೇಔಟ್‌ಗೆ ಪ್ರವೇಶಿಸಲು ಡೌನ್ ರ‍್ಯಾಂಪ್ ಇ ಯೊಂದಿಗೆ ಮುಂದುವರಿಯುತ್ತದೆ.
Published On - 6:14 pm, Wed, 17 July 24