Spain Volcano: ಸ್ಪೇನ್ನ ಲಾ ಪಲ್ಮಾದಲ್ಲಿ ಜ್ವಾಲಾಮುಖಿ; ಹರಿದು ಸಾಗರ ಸೇರಿದ ಲಾವಾರಸ!
TV9 Web | Updated By: ganapathi bhat
Updated on:
Sep 29, 2021 | 9:57 PM
Spain Volcano Eruption 2021: ಲಾವಾ ರಸವು ಲಾ ಪಲ್ಮಾ ಐಲ್ಯಾಂಡ್ನಿಂದ ಅಟ್ಲಾಂಟಿಕ್ ಸಾಗರಕ್ಕೂ ಹರಿದಿದೆ. ಯುರೋಪಿಯನ್ ಯೂನಿಯನ್ನ ಮಾನಿಟರಿಂಗ್ ಗ್ರೂಪ್ ಹೇಳುವಂತೆ ಲಾವಾ ರಸವು ಲಾ ಪಲ್ಮಾದ ಸುಮಾರು 400 ಕಟ್ಟಡಗಳನ್ನು ಹಾಗೂ ಹಲವು ಮನೆಗಳನ್ನು ನಾಶಮಾಡಿದೆ.
1 / 6
ಸ್ಪೈನ್ ದೇಶದ ಕ್ಯಾನರಿ ಐಲ್ಯಾಂಡ್ನಲ್ಲಿ ಜ್ವಾಲಾಮುಖಿ ಉಂಟಾಗಿ ವಿಕೋಪಕ್ಕೀಡಾಗಿದ್ದ ಪರಿಸ್ಥಿತಿ ಇನ್ನೂ ತಿಳಿಗೊಂಡಿಲ್ಲ. ಜ್ವಾಲಾಮುಖಿ ಉಂಟಾಗಿ ಹತ್ತು ದಿನಗಳು ಕಳೆಯುತ್ತಾ ಬಂದಿದೆ. ಆದರೆ, ಈಗಲೂ ಜ್ವಾಲಾಮುಖಿ ಉಕ್ಕುತ್ತಿದೆ ಮತ್ತು ಲಾವಾ ಹರಿಯುತ್ತಿದೆ. ಈ ಕಾರಣದಿಂದ ಆ ಭಾಗದಲ್ಲಿ ವಾಸ ಮಾಡುತ್ತಿರುವ ಜನರು ಆತಂಕಕ್ಕೆ ಈಡಾಗಿದ್ದಾರೆ.
2 / 6
ಲಾವಾ ರಸವು ಲಾ ಪಲ್ಮಾ ಐಲ್ಯಾಂಡ್ನಿಂದ ಅಟ್ಲಾಂಟಿಕ್ ಸಾಗರಕ್ಕೂ ಹರಿದಿದೆ. ಯುರೋಪಿಯನ್ ಯೂನಿಯನ್ನ ಮಾನಿಟರಿಂಗ್ ಗ್ರೂಪ್ ಹೇಳುವಂತೆ ಲಾವಾ ರಸವು ಲಾ ಪಲ್ಮಾದ ಸುಮಾರು 400 ಕಟ್ಟಡಗಳನ್ನು ಹಾಗೂ ಹಲವು ಮನೆಗಳನ್ನು ನಾಶಮಾಡಿದೆ. ಐಲ್ಯಾಂಡ್ನ ಪಶ್ಚಿಮ ಭಾಗದಲ್ಲಿ ಈ ವಿಕೋಪ ಉಂಟಾಗಿದೆ. ಅಲ್ಲಿ ಸುಮಾರು 85,000 ಜನರು ವಾಸಮಾಡುತ್ತಿದ್ದಾರೆ.
3 / 6
ಜ್ವಾಲಾಮುಖಿ ಉಕ್ಕಿರುವ ಪ್ರಾಕೃತಿಕ ವಿಕೋಪದ ಹಲವಾರು ಚಿತ್ರಗಳು ಹರಿದಾಡಿವೆ. ಅದರಂತೆ, ಆ ಪ್ರದೇಶದಲ್ಲಿ ಆಕಾಶವು ಕಪ್ಪು ಮತ್ತು ಬಿಳಿ ಹೊಗೆಯಿಂದ ಆವೃತ್ತವಾಗಿ ಇರುವುದನ್ನು ನಾವು ಕಾಣಬಹುದು. ಅದೇ ರೀತಿ ರಾತ್ರಿ ವೇಳೆಯಲ್ಲಿ ಹೊಗೆ ಮತ್ತು ಕೆಂಪು ಬೆಳಕು ಕಂಡುಬಂದಿದೆ. ಇಲ್ಲಿ ಜ್ವಾಲಾಮುಖಿ ಸ್ಫೋಟ ಮುಂದುವರಿದಿರುವ ಕಾರಣ ಮತ್ತು ಇನ್ನಷ್ಟು ಅಪಾಯ ಇರುವ ಕಾರಣ ತುರ್ತು ಸೇವಾ ಸಿಬ್ಬಂದಿ ಕೂಡ ಕಾರ್ಯ ಹಿಂದೆಗೆದುಕೊಂಡಿದ್ದಾರೆ.
4 / 6
ಲಾವಾ ರಸವು ಮಂಗಳವಾರ ರಾತ್ರಿಯ ವೇಳೆ ಹೇಗೆ ನೀರಿನ ವರೆಗೆ ಹರಿದು ಹೋಗಿದೆ ಎಂದು ಕಾಣಬಹುದಾಗಿದೆ. ಜ್ವಾಲಾಮುಖಿ ಇನ್ನಷ್ಟು ಉಕ್ಕುವ ಮತ್ತು ಅದರಿಂದ ವಿಷಕಾರಿ ಅನಿಲ ಹರಡುವ ಬಗ್ಗೆ ಆತಂಕ ಹೆಚ್ಚಿದೆ. ಲಾವಾ ರಸವು ಪ್ಲಯಾ ನುಯೆವ ಎಂಬಲ್ಲಿ ಸಾಗರವನ್ನು ತಲುಪಿದೆ ಎಂಬ ಬಗ್ಗೆ ಕ್ಯಾನರಿ ಐಲ್ಯಾಂಡ್ ವಾಲ್ಕೆನೊ ಇನ್ಸ್ಟಿಟ್ಯೂಟ್ ಟ್ವೀಟ್ ಮಾಡಿದೆ.
5 / 6
ಆ ಪ್ರದೇಶದಲ್ಲಿ ವಾಸವಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ, ಆಶ್ರಯ ಪಡೆದುಕೊಳ್ಳುವಂತೆ ತುರ್ತು ಪರಿಸ್ಥಿತಿ ನಿರ್ವಹಣಾ ಘಟಕ ಹ=ಸೂಚನೆ ನೀಡಿದೆ. ಲಾವಾ ರಸವು ತಾನು ಹರಿಯುವ ದಾರಿಯಲ್ಲಿ ಇರುವ ಎಲ್ಲವನ್ನೂ ನಾಶ ಮಾಡುತ್ತಾ ಸಾಗುತ್ತದೆ ಎಂದು ಹೇಳಲಾಗಿದೆ.
6 / 6
ಯುರೋಪಿಯನ್ ಯೂನಿಯನ್ ಮಾನಿಟರಿಂಗ್ ಗ್ರೂಪ್ನ ವಿವರಣೆಯಂತೆ, ಲಾವಾ ರಸವು ಈಗ ಸುಮಾರು 258 ಹೆಕ್ಟೇರ್ನಷ್ಟು ಪ್ರದೇಶಕ್ಕೆ (637 ಎಕರೆ) ಹರಡಿದೆ. ಆದರೆ, ಇದುವರೆಗೆ ಯಾವುದೇ ಸಾವು ಸಂಭವಿಸಿರುವ ಬಗ್ಗೆ ಮಾಹಿತಿ ಲಭಿಸಿಲ್ಲ. 6,000 ಕ್ಕೂ ಹೆಚ್ಚು ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಸಮುದ್ರ ತೀರದ ಮೂರು ಹಳ್ಳಿಗಳಲ್ಲಿ ಕೂಡ ಈ ಬಗ್ಗೆ ಎಚ್ಚರಿಕೆ ಕೈಗೊಳ್ಳಲಾಗಿದೆ.