ಕಾಲೇಜು ಕ್ಯಾಂಪಸ್‌ನಲ್ಲಿ ಕುಣಿಯುತ್ತಿರುವ ವಿದ್ಯಾರ್ಥಿಗಳು, ಎಲ್ಲೆಲ್ಲೂ ಬಣ್ಣದ ಓಕುಳಿ; ಇದರ ಝಲಕ್ ಇಲ್ಲಿದೆ ನೋಡಿ
ದೇಶಾದ್ಯಂತ ಇಂದು ಹೋಳಿ ಸಂಭ್ರಮ ಮುಗಿಲುಮುಟ್ಟಿತ್ತು. ಹೋಳಿ ರಂಗಿನಲ್ಲಿ ಇಂದು ನಾಡಿನ ಜನತೆ ಕೂಡ ಮಿಂದೆದಿದ್ದು, ಅದರಂತೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಸಹ ಭರ್ಜರಿ ರಂಗಿನಾಟದಲ್ಲಿ ತೊಡಗಿದ್ದರು.
1 / 7
ದೇಶಾದ್ಯಂತ ಇಂದು ಹೋಳಿ ಸಂಭ್ರಮ ಮುಗಿಲುಮುಟ್ಟಿತ್ತು. ಹೋಳಿ ರಂಗಿನಲ್ಲಿ ಇಂದು ನಾಡಿನ ಜನತೆ ಕೂಡ ಮಿಂದೆದಿದ್ದು, ಅದರಂತೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಸಹ ಭರ್ಜರಿ ರಂಗಿನಾಟದಲ್ಲಿ ತೊಡಗಿದ್ದರು.
2 / 7
ಕಾಲೇಜು ಕ್ಯಾಂಪಸ್‌ನಲ್ಲಿ ಮನಪೂರ್ತಿಯಾಗಿ ಕುಣಿಯುತ್ತಿರುವ ವಿದ್ಯಾರ್ಥಿಗಳು. ಎಲ್ಲೆಲ್ಲೂ ಬಣ್ಣದ ಓಕುಳಿ, ವಿದ್ಯಾರ್ಥಿಗಳ ಜೋಶ್ ಇನ್ನಷ್ಟು ಹೆಚ್ಚಿಸಲು ಡಿಜೆ ಮ್ಯೂಸಿಕ್. ಅಂದಹಾಗೆ ಈ ಬಣ್ಣ ಬಣ್ಣದ ದೃಶ್ಯಾವಳಿ ಕಂಡು ಬಂದಿದ್ದು ಕಡಲನಗರಿ ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ಕಾಲೇಜ್ ಕ್ಯಾಂಪಸ್‌ನಲ್ಲಿ.
3 / 7
ಹಿಂದೂಗಳ ಪ್ರಮುಖ ಹಬ್ಬಗಳ ಪೈಕಿ ಒಂದಾದ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ನಿಮಿತ್ತ ಇಂದು ಶ್ರೀನಿವಾಸ ವಿವಿಯ ಹೋಟೆಲ್ ಮ್ಯಾನೇಜ್ಮೆಂಟ್, ಆ್ಯವಿಯೇಶನ್ ಸ್ಟಡೀಸ್, ಇಂಟಿರೀಯರ್ ಡಿಸೈನ್ ವಿಭಾಗದಿಂದ ರಂಗ್ 2023 ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
4 / 7
ಮಧ್ಯಾಹ್ನದ ವೇಳೆ ಬಣ್ಣಗಳ ಸ್ನಾನವನ್ನೇ ಮಾಡಿದ ವಿದ್ಯಾರ್ಥಿಗಳ ಸಂಭ್ರಮ ಕಣ್ಮನ ಸೆಳೆಯುವಂತಿತ್ತು. ಕಾಲೇಜ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಮನಪೂರ್ತಿಯಾಗಿ ಡಿಜೆ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ರು.
5 / 7
ಈ ಕಾಲೇಜಿನಲ್ಲಿ ಜಿಲ್ಲೆ, ರಾಜ್ಯದ ವಿದ್ಯಾರ್ಥಿಗಳು ಮಾತ್ರವಲ್ಲದೇ ಹೊರ ರಾಜ್ಯದ ವಿದ್ಯಾರ್ಥಿಗಳು ಸಹ ಕಲಿಯೋದಕ್ಕೆ ಬರ್ತಾರೆ. ಹೀಗಾಗಿ ತಮ್ಮ ಊರಿಗೆ ತೆರಳಿ ಹೋಳಿ ಸಂಭ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದಿರುವುದಕ್ಕೆ ಕಾಲೇಜು ವತಿಯಿಂದಲೇ ಈ ಹೋಳಿ ಸಂಭ್ರಮವನ್ನು ಆಯೋಜಿಸಲಾಗಿತ್ತು.
6 / 7
ಡಿಜೆ ಹಾಡಿಗೆ ಸತತ ಮೂರು ಗಂಟೆಗೂ ಹೆಚ್ಚು ಕಾಲ ಫುಲ್ ಎನರ್ಜಿಯಿಂದಲೇ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ಟೆಪ್ಸ್ ಹಾಕಿ, ಹೋಳಿ ರಂಗಿನ ಜೊತೆ ವಾಟರ್ ಡ್ಯಾನ್ಸ್ ಮೂಲಕ ಸಖತ್ ಎಂಜಾಯ್ ಮಾಡಿದ್ರು.
7 / 7
ಇಂದು ಇಡೀ ನಾಡೇ ಕಾಮನ ಹಬ್ಬಕ್ಕೆ ಸಾಕ್ಷಿಯಾಗಿದೆ. ಅಸುರ ಶಕ್ತಿಗಳ ನಿರ್ನಾಮಕ್ಕಾಗಿ, ಕೆಟ್ಟದ್ದರ ವಿರುದ್ಧ ಎಂದಿಗೂ ಒಳಿತೇ ಗೆಲ್ಲುವುದು ಎಂಬ ಸುಂದರ ಸಂದೇಶವನ್ನು ಹೊಂದಿರುವ ಈ ರಂಗಿನೋಕುಳಿಯ ಹಬ್ಬ ಭಾರೀ ಸಂಭ್ರಮದೊಂದಿಗೆ ಕೊನೆಯಾಗಿದೆ.
Published On - 12:52 pm, Wed, 8 March 23