ಮಹಿಳಾ ದಿನದಂದೇ ಹೆಣ್ಣು ಮಗುವಿಗೆ ತಂದೆಯಾದ ಟೀಂ ಇಂಡಿಯಾದ ಸ್ಟಾರ್ ಬೌಲರ್

ಟೀಂ ಇಂಡಿಯಾದ ವೇಗದ ಬೌಲರ್ ಉಮೇಶ್ ಯಾದವ್ ಅವರಿಗೆ ಹೋಳಿ ಹಬ್ಬದ ದಿನ ಬಹಳ ವಿಶೇಷವಾಗಿದೆ. ಏಕೆಂದರೆ ಮಹಿಳಾ ದಿನವಾದ ಇಂದು ಈ ಸ್ಟಾರ್ ಬೌಲರ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

ಪೃಥ್ವಿಶಂಕರ
|

Updated on:Mar 08, 2023 | 11:45 AM

ಟೀಂ ಇಂಡಿಯಾದ ವೇಗದ ಬೌಲರ್ ಉಮೇಶ್ ಯಾದವ್ ಅವರಿಗೆ ಹೋಳಿ ಹಬ್ಬದ ದಿನ ಬಹಳ ವಿಶೇಷವಾಗಿದೆ. ಏಕೆಂದರೆ ಮಹಿಳಾ ದಿನವಾದ ಇಂದು ಈ ಸ್ಟಾರ್ ಬೌಲರ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

ಟೀಂ ಇಂಡಿಯಾದ ವೇಗದ ಬೌಲರ್ ಉಮೇಶ್ ಯಾದವ್ ಅವರಿಗೆ ಹೋಳಿ ಹಬ್ಬದ ದಿನ ಬಹಳ ವಿಶೇಷವಾಗಿದೆ. ಏಕೆಂದರೆ ಮಹಿಳಾ ದಿನವಾದ ಇಂದು ಈ ಸ್ಟಾರ್ ಬೌಲರ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

1 / 5
ಉಮೇಶ್ ಯಾದವ್ ಪತ್ನಿ ತಾನ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ವಿಚಾರವನ್ನು ಸ್ವತಃ ಉಮೇಶ್ ಯಾದವ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಉಮೇಶ್ ಯಾದವ್ ಅವರ ತಂದೆ ಸಾವನ್ನಪ್ಪಿದ್ದರು. ಆದರೆ ಈಗ ಅವರ ಮನೆಗೆ ಪುಟ್ಟ ದೇವತೆ ಬಂದಿರುವುದು ಉಮೇಶ್ ಕುಟುಂಬದ ನೋವನ್ನು ಕೊಂಚ ಕಡಿಮೆ ಮಾಡಿದೆ.

2 / 5
2013 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಉಮೇಶ್ ಯಾದವ್ ಮತ್ತು ತಾನ್ಯಾ ದಂಪತಿಗಳಿಗೆ 2021 ರಲ್ಲಿಯೇ ಹೆಣ್ಣು ಮಗು ಜನಿಸಿತ್ತು. ಇದೀಗ ಅವರ ಮನೆಗೆ ಮತ್ತೊಂದು ಹೆಣ್ಣು ಕುಡಿ ಎಂಟ್ರಿಕೊಟ್ಟಿದೆ.

3 / 5
ಉಮೇಶ್ ಯಾದವ್ ಅವರಂತೆಯೇ ಟೀಂ ಇಂಡಿಯಾದ ಅನೇಕ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಅವರಿಗೂ ಮೊದಲು ಹೆಣ್ಣು ಮಕ್ಕಳು ಜನಿಸಿದ್ದಾರೆ. ಇದೀಗ ಉಮೇಶ್ ಯಾದವ್ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

4 / 5
ಇನ್ನು ಉಮೇಶ್ ಯಾದವ್ ವೃತ್ತಿ ಬದುಕಿನ ಬಗ್ಗೆ ಮಾತನಾಡುವುದಾದರೆ, ಸದ್ಯ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉಮೇಶ್ ಆಡುತ್ತಿದ್ದಾರೆ. ಇಂದೋರ್​ ಟೆಸ್ಟ್​ನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಯಾದವ್ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ನೆರವಾಗಿದ್ದರು. ಆದಾಗ್ಯೂ, ಅಂತಿಮವಾಗಿ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು.

5 / 5

Published On - 11:45 am, Wed, 8 March 23

Follow us