ಚಿಕ್ಕು ಹಣ್ಣಿನ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳಿವು
ಸಪೋಟ ನಿಮಗೆ ಆರೋಗ್ಯಕರ ಚರ್ಮವನ್ನು ನೀಡುತ್ತದೆ ಮತ್ತು ಉತ್ತಮ ದೃಷ್ಟಿಗೆ ಸಹಕಾರಿಯಾಗಿದೆ. ಚಿಕ್ಕು ಪೊಟ್ಯಾಸಿಯಂ, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಅಗತ್ಯವಾದ ಖನಿಜಗಳನ್ನು ಹೊಂದಿರುತ್ತದೆ.
1 / 10
ಚಿಕ್ಕು ಹಣ್ಣನ್ನು ಸಪೋಟ ಎಂದು ಕೂಡ ಕರೆಯುತ್ತಾರೆ. ಕಂದು ಬಣ್ಣದಲ್ಲಿರುವ ಸಪೋಟ ಬಹಳ ರುಚಿಯಾದ ಹಣ್ಣು. ಸಪೋಟ ಹಣ್ಣನ್ನು ಮನೆಯ ಹಿತ್ತಲಿನಲ್ಲಿ, ತೋಟದಲ್ಲಿ ಬೆಳೆಯಲಾಗುತ್ತದೆ. ಇದಕ್ಕೆ ಹೆಚ್ಚಿನ ಆರೈಕೆಯೇನೂ ಬೇಡ.
2 / 10
ಉಷ್ಣವಲಯದಲ್ಲಿ ಹೆಚ್ಚಾಗಿ ಬೆಳೆಯುವ ಸಪೋಟ ಅನೇಕ ಆರೋಗ್ಯ ಪ್ರಯೋಜನಗಳನ್ನು ಕೂಡ ಹೊಂದಿದೆ.
3 / 10
ಸಪೋಟ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದ್ದು, ವಿವಿಧ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿದೆ.
4 / 10
ಸಪೋಟ ವಿಟಮಿನ್ ಸಿಯ ಅತ್ಯುತ್ತಮ ಮೂಲವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹಕ್ಕೆ ವಿಟಮಿನ್ ಎಯನ್ನು ಒದಗಿಸುತ್ತದೆ.
5 / 10
ಸಪೋಟ ನಿಮಗೆ ಆರೋಗ್ಯಕರ ಚರ್ಮವನ್ನು ನೀಡುತ್ತದೆ ಮತ್ತು ಉತ್ತಮ ದೃಷ್ಟಿಗೆ ಸಹಕಾರಿಯಾಗಿದೆ. ಚಿಕ್ಕು ಪೊಟ್ಯಾಸಿಯಂ, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಅಗತ್ಯವಾದ ಖನಿಜಗಳನ್ನು ಹೊಂದಿರುತ್ತದೆ.
6 / 10
ಸಪೋಟ ಅತ್ಯಧಿಕ ಫೈಬರ್ ಅಂಶವನ್ನು ಹೊಂದಿದೆ. ಈ ಒಂದು ಹಣ್ಣು 9 ಗ್ರಾಂ ಫೈಬರ್ ಅನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ. ಇದು ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.
7 / 10
ಸಪೋಟ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹ ಅಥವಾ ಹೃದ್ರೋಗ ಹೊಂದಿರುವ ಜನರಿಗೆ ಉತ್ತಮ ಆಯ್ಕೆಯಾಗಿದೆ.
8 / 10
ಸಪೋಟದಲ್ಲಿ ಫೈಬರ್ ಅಂಶ ಅಧಿಕವಾಗಿರುವುದರಿಂದ ಮಲಬದ್ಧತೆಯನ್ನು ತಡೆಯುತ್ತದೆ.
9 / 10
ಸಪೋಟದ ಟ್ಯಾನಿನ್‌ಗಳು ಮತ್ತು ಪಾಲಿಫಿನಾಲ್‌ಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಜೀರ್ಣಾಂಗವನ್ನು ಉತ್ತಮಗೊಳಿಸುತ್ತದೆ ಮತ್ತು ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುತ್ತದೆ.
10 / 10
ಚಿಕ್ಕು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಈ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.