ಅತಿಯಾದ ಗೆಣಸು ಸೇವನೆಯಿಂದ ಆರೋಗ್ಯಕ್ಕೆ ತೊಂದರೆಯಾಗುತ್ತಾ?
ಗೆಣಸನ್ನು ಹೆಚ್ಚು ತಿಂದರೆ ಅದರಿಂದ ಕೆಲವು ಅಡ್ಡ ಪರಿಣಾಮಗಳು ಕೂಡ ಉಂಟಾಗುತ್ತದೆ. ಗೆಣಸನ್ನು ಅತಿಯಾಗಿ ಸೇವಿಸುವುದರಿಂದ ಅದರಲ್ಲಿರುವ ವಿಟಮಿನ್ ಎ ವಿಷತ್ವವನ್ನು ಉಂಟುಮಾಡಬಹುದು. ಇದರಿಂದ ಚರ್ಮದ ಮೇಲೆ ದದ್ದುಗಳು ಮತ್ತು ತಲೆನೋವು ಉಂಟಾಗುತ್ತದೆ.
1 / 17
ಗೆಣಸು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ತರಕಾರಿ. ಈ ಗಡ್ಡೆಯನ್ನು ಬೇಯಿಸಿಕೊಂಡು ತಿನ್ನಬಹುದು, ಪಲ್ಯ ಮಾಡಬಹುದು, ಸಾಂಬಾರ್ ಮಾಡಬಹುದು, ಬೋಂಡ ಕೂಡ ಮಾಡಿಕೊಂಡು ತಿನ್ನಬಹುದು.
2 / 17
ಜೀವಸತ್ವಗಳು ಮತ್ತು ಫೈಬರ್‌ನಿಂದ ಸಮೃದ್ಧವಾಗಿರುವ ಗೆಣಸು ನಿಮ್ಮ ಚರ್ಮ, ಹೃದಯ ಮತ್ತು ಒಟ್ಟಾರೆ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಪಿಷ್ಟ, ಫೈಬರ್, ಪ್ರೋಟೀನ್, ಖನಿಜಗಳಾದ ಮ್ಯಾಂಗನೀಸ್, ತಾಮ್ರ, ಪೊಟ್ಯಾಸಿಯಮ್, ಕಬ್ಬಿಣ, ವಿಟಮಿನ್‌ಗಳಾದ ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಎ ಗೆಣಸಿನಲ್ಲಿದೆ.
3 / 17
ಗೆಣಸು ಗೋಧಿ ಅಥವಾ ಅಕ್ಕಿಗಿಂತ ಹೆಚ್ಚಿನ ಮಟ್ಟದ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಪ್ರೊ-ವಿಟಮಿನ್ ಎ, ವಿಟಮಿನ್ ಸಿ ಮತ್ತು ಖನಿಜಗಳನ್ನು ನೀಡುತ್ತವೆ.
4 / 17
ಗೆಣಸು ಫೈಬರ್ ಭರಿತ ಆಹಾರವಾಗಿದ್ದು, ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಇದು ದೇಹಕ್ಕೆ ಬೇಕಾದ ವಿಟಮಿನ್ ಬಿ6, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಝಿಂಕ್, ಮೆಗ್ನೀಸಿಯಂ ಮೊದಲಾದ ಅಂಶಗಳನ್ನು ಒದಗಿಸುತ್ತದೆ.
5 / 17
ಇದರಲ್ಲಿ ಉತ್ತಮ ಪ್ರಮಾಣದ ನಾರಿನಂಶ, ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶಗಳಿವೆ.
6 / 17
ಗೆಣಸುಗಳಲ್ಲಿ ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಅದು ರಕ್ತದ ಸಕ್ಕರೆ ಅಂಶವನ್ನು ಕಡಿಮೆ ಮಾಡಿ, ಇನ್ಸುಲಿನ್ ಪ್ರಮಾಣವನ್ನು ಸ್ಥಿರವಾಗಿಡುತ್ತದೆ.
7 / 17
ಗೆಣಸು ಗರ್ಭಿಣಿಯರಿಗೆ ಬಹಳ ಅವಶ್ಯಕವಾದ ವಿಟಮಿನ್ ಬಿ ಸೇರಿದಂತೆ ಪೋಲಿಕ್ ಆಸಿಡ್ ಅನ್ನು ಹೊಂದಿದೆ.
8 / 17
ಇದರಲ್ಲಿ ವಿಟಮಿನ್, ಮಿನರಲ್ಸ್, ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಆರೋಗ್ಯಕರವಾಗಿದೆ.
9 / 17
ಗೆಣಸಿನ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಸ್ತಮಾ ಸಮಸ್ಯೆ ನಿವಾರಣೆಯಾಗುತ್ತದೆ, ಮಲಬದ್ಧತೆ ನಿವಾರಣೆಯಾಗುತ್ತದೆ.
10 / 17
ಗೆಣಸಿನಲ್ಲಿರುವ ವಿಟಮಿನ್ ಸಿ ಜೀವಸತ್ವವು ಮೂಳೆ ಮತ್ತು ಹಲ್ಲಿನ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
11 / 17
ಇದರಲ್ಲಿರುವ ಬೀಟಾ- ಕೆರೊಟಿನ್ ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಿಂದ ನಮ್ಮನ್ನು ಕಾಪಾಡುತ್ತದೆ.
12 / 17
ಗೆಣಸು ಶೀತ ಮತ್ತು ಜ್ವರದ ಸೊಂಕು ಹರಡುವುದನ್ನು ತಡೆಗಟ್ಟುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ನಮ್ಮ ಹೃದಯದ ಬಡಿತವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ
13 / 17
ಹೃದ್ರೋಗ ಹೊಂದಿರುವವರು ಮತ್ತು ಬೀಟಾ ಬ್ಲಾಕರ್‌ಗಳ ಔಷಧಿ ಹೊಂದಿರುವವರು ಗೆಣಸನ್ನು ಸೇವಿಸಬೇಡಿ. ಬೀಟಾ ಬ್ಲಾಕರ್‌ಗಳು ಪೊಟ್ಯಾಸಿಯಂ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತವೆ. ಪೊಟ್ಯಾಸಿಯಂ ಹೇರಳವಾಗಿರುವ ಗೆಣಸಿನ ಹೆಚ್ಚಿನ ಸೇವನೆಯು ಸಮಸ್ಯೆಗಳನ್ನು ಉಂಟುಮಾಡಬಹುದು.
14 / 17
ಗೆಣಸನ್ನು ಅತಿಯಾಗಿ ಸೇವಿಸುವುದರಿಂದ ಅದರಲ್ಲಿರುವ ವಿಟಮಿನ್ ಎ ವಿಷತ್ವವನ್ನು ಉಂಟುಮಾಡಬಹುದು. ಇದರಿಂದ ಚರ್ಮದ ಮೇಲೆ ದದ್ದುಗಳು ಮತ್ತು ತಲೆನೋವು ಉಂಟಾಗುತ್ತದೆ.
15 / 17
ಗೆಣಸನ್ನು ಹೆಚ್ಚು ತಿಂದರೆ ಅದರಿಂದ ಕೆಲವು ಅಡ್ಡ ಪರಿಣಾಮಗಳು ಕೂಡ ಉಂಟಾಗುತ್ತದೆ. ಗೆಣಸಿನಲ್ಲಿ ಆಕ್ಸಲೇಟ್ ಅಂಶ ಸಮೃದ್ಧವಾಗಿದೆ. ಇದರಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗಬಹುದು.
16 / 17
ಹೆಚ್ಚಿನ ಫೈಬರ್ ಅಂಶದ ಕಾರಣದಿಂದಾಗಿ ಗೆಣಸಿನ ಹೆಚ್ಚಿನ ಸೇವನೆಯು ಹೊಟ್ಟೆ ನೋವು ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಗೆಣಸಿನಿಂದ ಗ್ಯಾಸ್ಟ್ರಿಕ್ ಕೂಡ ಉಂಟಾಗುತ್ತದೆ.
17 / 17
ಗೆಣಸುಗಳ ಅತಿಯಾದ ಸೇವನೆಯು ನಿಮ್ಮ ಚರ್ಮ ಮತ್ತು ಉಗುರುಗಳನ್ನು ಸ್ವಲ್ಪ ಕಿತ್ತಳೆ ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ.