ದಿನವೂ ಟೀ ಕುಡಿಯುವುದರಿಂದ ನಿಮ್ಮ ದೇಹದಲ್ಲಾಗುವ ಬದಲಾವಣೆಗಳೇನು?

|

Updated on: Oct 02, 2023 | 11:19 AM

Tea Health Benefits: ಚಹಾಗಳಲ್ಲಿ ಹಲವು ವಿಧಗಳಿವೆ. ಗ್ರೀನ್ ಟೀ, ಮಸಾಲೆ ಟೀ, ಬ್ಲಾಕ್ ಟೀ, ಲೆಮನ್ ಟೀ, ಶುಂಠಿ ಟೀ ಹೀಗೆ ಇನ್ನೂ ನಾನಾ ರೀತಿಯ ಟೀಗಳಿವೆ. ಕೆಲವು ಚಹಾಗಳು ನಿಮ್ಮ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ. ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ಗ್ರೀನ್ ಟೀ ಸೇವಿಸಿ. ನಿಮಗೆ ಕಿಡ್ನಿಯಲ್ಲಿ ಕಲ್ಲು ಇದ್ದರೆ ಅಥವಾ ಉರಿಮೂತ್ರದ ಸಮಸ್ಯೆಯಿದ್ದರೆ ದಾಂಡೇಲಿಯನ್ ಟೀ, ಗ್ರೀನ್ ಟೀ, ಬಾರ್ಲಿ ಟೀ, ಮತ್ತು ಹೈಬಿಸ್ಕಸ್ ಟೀ ಸೇವಿಸಿ.

1 / 11
ದಿನವೂ ಬೆಳಗ್ಗೆ ಟೀ ಕುಡಿಯದಿದ್ದರೆ ಹಲವರ ದಿನವೇ ಆರಂಭವಾಗುವುದಿಲ್ಲ. ಚಹಾವು ಬಹುತೇಕರ ಅತ್ಯಂತ ಪ್ರೀತಿಯ ಪಾನೀಯಗಳಲ್ಲಿ ಒಂದಾಗಿದೆ.

2 / 11
ಚಹಾ ಕುಡಿಯುವುದರಿಂದ ನಮ್ಮ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ ಎಂಬ ಮಾಹಿತಿ ಇಲ್ಲಿದೆ.

3 / 11
ಚಹಾಗಳಲ್ಲಿ ಹಲವು ವಿಧಗಳಿವೆ. ಗ್ರೀನ್ ಟೀ, ಮಸಾಲೆ ಟೀ, ಬ್ಲಾಕ್ ಟೀ, ಲೆಮನ್ ಟೀ, ಶುಂಠಿ ಟೀ ಹೀಗೆ ಇನ್ನೂ ನಾನಾ ರೀತಿಯ ಟೀಗಳಿವೆ. ಕೆಲವು ಚಹಾಗಳು ನಿಮ್ಮ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ.

4 / 11
ಬ್ಲಾಕ್ ಟೀ, ಗ್ರೀನ್ ಟೀ ಮತ್ತು ದಾಸವಾಳದ ಟೀಯಂತಹ ಕೆಲವು ಚಹಾಗಳು ಹೃದಯದ ಆರೋಗ್ಯವನ್ನು ಸುಧಾರಣೆ ಮಾಡುತ್ತವೆ. ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು, LDL ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿವೆ.

5 / 11
ಗ್ರೀನ್ ಟೀ ಕುಡಿಯುವವರು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಕುಡಿಯುತ್ತಾರೆ. ಗ್ರೀನ್ ಟೀ ಎಲ್-ಥಿಯಾನೈನ್ ಅನ್ನು ಹೊಂದಿರುತ್ತದೆ. ಇದು ನಮ್ಮ ದೇಹಕ್ಕೆ ಹೆಚ್ಚು ನಿರಂತರ ಶಕ್ತಿಯನ್ನು ಒದಗಿಸುತ್ತದೆ.

6 / 11
ನೀವು ಹೊಟ್ಟೆನೋವು ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಕ್ಯಾಮೊಮೈಲ್ ಟೀ, ಪುದೀನಾ ಟೀ ಮತ್ತು ಶುಂಠಿ ಟೀಯಂತಹ ಗಿಡಮೂಲಿಕೆ ಚಹಾಗಳನ್ನು ಸೇವಿಸಿ. ಇದು ನಿಮ್ಮ ಹೊಟ್ಟೆನೋವು, ಅಜೀರ್ಣ, ವಾಂತಿಯ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

7 / 11
ಕೆಲವು ಚಹಾಗಳು ನಮ್ಮ ದೇಹಕ್ಕೆ ಅಗತ್ಯವಾದಷ್ಟು ಕೆಫೀನ್ ಅನ್ನು ಹೊಂದಿರುತ್ತವೆ. ಬ್ಲಾಕ್ ಟೀ, ಗ್ರೀನ್ ಟೀ ಮತ್ತು ಊಲಾಂಗ್‌ನಂತಹ ಚಹಾಗಳು ಕೆಫೀನ್‌ನಿಂದ ಕೂಡಿರುತ್ತವೆ.

8 / 11
ಆದರೆ ಗಿಡಮೂಲಿಕೆ ಚಹಾಗಳು ಸಂಪೂರ್ಣವಾಗಿ ಕೆಫೀನ್ ಮುಕ್ತವಾಗಿರುತ್ತವೆ. ನಿಮಗೆ ಕೆಫೀನ್‌ ಸೇವಿಸಿದರೆ ಮಾತ್ರ ಮೂಡ್ ಸರಿಯಾಗುತ್ತದೆ ಎಂದಾದರೆ ಕೆಫೀನ್ ಇರುವ ಟೀಯನ್ನೇ ಸೇವಿಸಿ.

9 / 11
ಒಣಗಿದ ಕ್ಯಾಮೊಮೈಲ್ ಹೂವುಗಳಿಂದ ತಯಾರಿಸಲಾದ ಕ್ಯಾಮೊಮೈಲ್ ಚಹಾವನ್ನು ಸೇವಿಸಿದರೆ ನಿದ್ರೆ ಮತ್ತು ಒತ್ತಡ ನಿರ್ವಹಣೆಗೆ ಸೇವಿಸಲಾಗುತ್ತದೆ.

10 / 11
ನಿಮಗೆ ಕಿಡ್ನಿಯಲ್ಲಿ ಕಲ್ಲು ಇದ್ದರೆ ಅಥವಾ ಉರಿಮೂತ್ರದ ಸಮಸ್ಯೆಯಿದ್ದರೆ ದಾಂಡೇಲಿಯನ್ ಟೀ, ಗ್ರೀನ್ ಟೀ, ಬಾರ್ಲಿ ಟೀ, ಮತ್ತು ಹೈಬಿಸ್ಕಸ್ ಟೀ ಸೇವಿಸಿ. ಇದು ಮೂತ್ರವರ್ಧಕ ಗುಣಗಳನ್ನು ಹೊಂದಿವೆ. ಮೂತ್ರವರ್ಧಕಗಳು ನಿಮ್ಮ ದೇಹವು ಮೂತ್ರದ ರೂಪದಲ್ಲಿ ಉಪ್ಪು ಮತ್ತು ನೀರನ್ನು ಹೊರಹಾಕಲು ಕಾರಣವಾಗುವ ಪೋಷಕಾಂಶಗಳಾಗಿವೆ. ಮೂತ್ರಪಿಂಡದ ಸಮಸ್ಯೆಗಳು, ಮಧುಮೇಹ ಅಥವಾ ಕೆಲವು ಹೃದಯ ಸಮಸ್ಯೆಗಳಿರುವ ಜನರಿಗೆ ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿರುವ ಚಹಾವನ್ನು ಕುಡಿಯಲು ವೈದ್ಯರು ಸೂಚಿಸುತ್ತಾರೆ.

11 / 11
ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ಗ್ರೀನ್ ಟೀ ಸೇವಿಸಿ. ಗ್ರೀನ್ ಟೀಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದರ ಪರಿಣಾಮ ಜಾಸ್ತಿ ಇರುತ್ತದೆ.