ರಾಯಚೂರು: ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ನಡೆಯಿತು ಕೃಷಿ ಪಾಠ
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಬೆಂಡೋಣಿ ಸರ್ಕಾರಿ ಶಾಲೆ ಈಗ ಮಾದರಿ ಪಾಠ ಶಾಲೆಯಾಗಿದೆ. ವಿದ್ಯಾರ್ಥಿಗಳನ್ನು ಗದ್ದೆಗೆ ಇಳಿಸಿ ನಾಟಿ ಮಾಡಿಸಲಾಗಿದೆ. ಈ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರು ಕೃಷಿಯ ಪಾಠ ಹೇಳಿಕೊಟ್ಟಿದ್ದಾರೆ. ಮಕ್ಕಳಿಗೆ ಕೃಷಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಕೃಷಿ ಪಾಠ ಮಾಡಿದ್ದಾರೆ. ಶಾಲೆಯಲ್ಲಿ ಪ್ರತಿ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಮಾಡಲಾಗುತ್ತೆ. ಇದರ ಅಂಗವಾಗಿ ಈ ಬಾರಿ ಪರಿಸರದೆಡೆಗೆ ಮಕ್ಕಳ ಪಯಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
1 / 9
ಶಿಕ್ಷಣವೆಂಬುವುದು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿರುವ ಇಂದಿನ ದಿನಗಳಲ್ಲಿ ಈ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಗದ್ದೆಗೆ ಇಳಿದು ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಾಟಿ ಮಾಡುವುದು, ಕೃಷಿ ಬಳಕೆಯ ವಸ್ತುಗಳ ಬಗ್ಗೆ ತಿಳಿದುಕೊಂಡಿದ್ದಾರೆ.
2 / 9
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಬೆಂಡೋಣಿ ಸರ್ಕಾರಿ ಶಾಲೆ ಈಗ ಮಾದರಿ ಪಾಠ ಶಾಲೆಯಾಗಿದೆ. ವಿದ್ಯಾರ್ಥಿಗಳನ್ನು ಗದ್ದೆಗೆ ಇಳಿಸಿ ನಾಟಿ ಮಾಡಿಸಲಾಗಿದೆ. ಈ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರು ಕೃಷಿಯ ಪಾಠ ಹೇಳಿಕೊಟ್ಟಿದ್ದಾರೆ.
3 / 9
ಮಕ್ಕಳಿಗೆ ಕೃಷಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಕೃಷಿ ಪಾಠ ಮಾಡಿದ್ದಾರೆ. ಶಾಲೆಯಲ್ಲಿ ಪ್ರತಿ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಮಾಡಲಾಗುತ್ತೆ. ಇದರ ಅಂಗವಾಗಿ ಈ ಬಾರಿ ಪರಿಸರದೆಡೆಗೆ ಮಕ್ಕಳ ಪಯಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
4 / 9
ಮಕ್ಕಳಿಕೆ ಕೃಷಿ ಪರಿಕರಗಳನ್ನ ಪರಿಚಯಿಸಿ, ಅದರ ಉಪಯೋಗಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಬಳಿಕ ವಿದ್ಯಾರ್ಥಿಗಳು ಗದ್ದೆಯಲ್ಲಿ ಭತ್ತ ನಾಟಿ ಮಾಡಿದರು. ಶಿಕ್ಷಕರಾದ ಸುನೀತಾ ನೇತೃತ್ವದಲ್ಲಿ ಮಕ್ಕಳ ತಂಡ ಗದ್ದೆಯಲ್ಲಿ ನಾಟಿ ಮಾಡಿತು.
5 / 9
ಮಣ್ಣಿನ ಫಲವತ್ತತೆ, ಸಾವಯವ ಕೃಷಿ, ರಾಸಾಯನಿಕ ಗೊಬ್ಬರ ಬಳಕೆ, ಏಕದಳ, ದ್ವಿದಳ ಬೆಳೆಗಳ ಮಾಹಿತಿ ಸೇರಿದಂತೆ ಹೊಸ ತಳಿಗಳ ಬಗ್ಗೆ ಶಿಕ್ಷಕರು ಮಾಹಿತಿ ನೀಡಿ ಮಕ್ಕಳಲ್ಲಿ ಕೃಷಿಯ ಬಗ್ಗೆ ಜಾಗೃತಿ ಮೂಡಿಸಿದರು.
6 / 9
ಹಾಗೂ ರೈತನ ಕಷ್ಟ ಹೇಗಿರುತ್ತೆ, ದೇಶದ ಬೆಳವಣಿಗೆಗೆ ರೈತನ ಪಾತ್ರವೇನು? ಎಂಬುದರ ಬಗ್ಗೆಯೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಕೃಷಿಯೊಂದಿಗೆ ತೋಟಗಾರಿಕೆ, ಹೈನುಗಾರಿಕೆ, ಪಶುಸಂಗೋಪನೆ, ಜೇನುಕೃಷಿ, ಸೌರಶಕ್ತಿ ಬಳಕೆ, ಕೀಟ ನಿಯಂತ್ರಣ ತಿಳಿಸಿಕೊಡಲಾಯಿತು.
7 / 9
ಹನಿ ನೀರಾವರಿ ಹಾಗೂ ಕೃಷಿ ಸಂಬಂಧಿತ ಇನ್ನಿತರ ವಿಷಯಗಳ ಬಗ್ಗೆ ಶಿಕ್ಷಕರು ಪ್ರಾಕ್ಟಿಕಲ್ ಮಾಹಿತಿ ನೀಡಿದರು. ಶಿಕ್ಷಕರ ಹೊಸ ಬಗೆಯ ತರಬೇತಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.
8 / 9
ನಾಲ್ಕು ಗೋಡೆಗಳ ನಡುವೆ ಪಠ್ಯದಲ್ಲಿರುವ ವಿಷಯವನ್ನು ಕಲಿಯುತ್ತಿದ್ದ ಮಕ್ಕಳು ಗದ್ದೆಗೆ ಇಳಿದು ಮೈ-ಕೈ ಕೆಸರು ಮಾಡಿಕೊಂಡು ಅಪರೂಪದ ಅನುಭವವನ್ನು ಪಡೆದಿದ್ದಾರೆ. ಪ್ರಾಯೋಗಿಕವಾಗಿ ಕೃಷಿ ವಿಷಯದ ಅಧ್ಯನ ಮಾಡಿದ್ದಾರೆ.
9 / 9
ರೈತರು ಹೊಲದಲ್ಲಿ ಕೆಲಸ ಮಾಡುವುದನ್ನು ಆಸಕ್ತಿಯಿಂದ ಗಮನಿಸಿದ ವಿದ್ಯಾರ್ಥಿಗಳು ಬಳಿಕ ತಾವೇ ಗದ್ದೆಗೆ ಇಳಿದು ನಾಟಿ ಮಾಡುವ ಮೂಲಕ ಗಮನ ಸೆಳೆದರು.