ಗೋವಿಂದ ಬಾಬುಗೆ ಯಡಿಯೂರಪ್ಪರನ್ನು ಪರಿಚಯಿಸಿದ್ದ ಹಾಲಶ್ರೀ, ಖೆಡ್ಡಕ್ಕೆ ಕೆಡವಲು ತಮ್ಮ ಪ್ರಭಾವವನ್ನು ತೋರಿಸಿದ್ರಾ ಸ್ವಾಮೀಜಿ?
ಹಿಂದೂ ಫೈರ್ ಬ್ರ್ಯಾಂಡ್.. ರಾಜ್ಯದ ಉದ್ದಗಲಕ್ಕೂ ಪ್ರಚೋದನಾಕಾರಿ ಭಾಷಣ ಬಿಗಿಯುತ್ತಿದ್ದ ಚೈತ್ರಾ ಕುಂದಾಪುರ ಮಹಾ ವಂಚನೆಯ ನಾಟಕದ ನಿರ್ದೇಶಕಿ ಸಹ ಹೌದು.. ಚೈತ್ರಾ ಅಂದರ್ ಆಗಿದ್ದೇ ಆಗಿದ್ದು ವಂಚನೆ ಕೇಸ್ ದಿನಕ್ಕೊಂದು, ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ತನಿಖೆ ಚುರುಕುಗೊಂಡಂತೆಲ್ಲ ಸ್ಫೋಟಕ ವಿಚಾರಗಳೇ ಹೊರಬರುತ್ತಿವೆ. ಹಾಲಶ್ರೀ ಬಂಧನವಾದರೆ ದೊಡ್ಡವರು ಹೆಸರು ಹೊರ ಬರುತ್ತೆ ಅನ್ನೋ ಹೇಳಿಕೆ ಕುತೂಹಲ ಕೆರಳಿಸಿದೆ. ಇದರ ಮಧ್ಯೆ ಮೋಸ ಹೋದ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಹಾಲಶ್ರೀ ಯಡಿಯೂರಪ್ಪನವರನ್ನು ಪರಿಚಯಿಸಿದ್ದು, ಇದೀಗ ಫೋಟೋಗಳು ವೈರಲ್ ಆಗುತ್ತಿವೆ.
Published On - 4:47 pm, Mon, 18 September 23