- Kannada News Photo gallery Lord Ganesha and Ganesha Temple Decorated by notes and coins in Bengaluru
Ganesh Chaturthi 2023: 2 ಕೋಟಿ ರೂ. ನೋಟು, 50 ಲಕ್ಷ ರೂ. ನಾಣ್ಯಗಳಿಂದ ಗಣಪತಿಗೆ ಶೃಂಗಾರ; ಫೋಟೋಗಳಲ್ಲಿ ನೋಡಿ
ನಾಡಿನಾದ್ಯಂತ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ನಗರದ ಹಲವು ದೇವಸ್ಥಾನದಲ್ಲಿ ಗಣೇಶನಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಹೂವಿನಂದ ಅಷ್ಟೇ ಅಲ್ಲದೇ ಹಣದಿಂದ ವಿಘ್ನನಿವಾರಕನಿಗೆ ಶೃಂಗರಿಸಲಾಗಿದೆ.
Updated on:Sep 19, 2023 | 9:56 AM

ನಾಡಿನಾದ್ಯಂತ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ನಗರದ ಹಲವು ದೇವಸ್ಥಾನದಲ್ಲಿ ಗಣೇಶನಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಹೂವಿನಂದ ಅಷ್ಟೇ ಅಲ್ಲದೇ ಹಣದಿಂದ ವಿಘ್ನನಿವಾರಕನಿಗೆ ಶೃಂಗರಿಸಲಾಗಿದೆ.

ಬೆಂಗಳೂರಿನ ಪುಟ್ಟೇನಹಳ್ಳಿಯ ಜೆ.ಪಿ. ನಗರದ ಸತ್ಯಸಾಯಿ ಗಣಪತಿ ದೇಗುಲವನ್ನು ನೋಟು, ನಾಣ್ಯಗಳಿಂದ ಅಲಂಕಾರ ಮಾಡಲಾಗಿದೆ.

ಬರೋಬ್ಬರಿ 2 ಕೋಟಿ ರೂ.ಗೂ ಹೆಚ್ಚು ನೋಟು ಹಾಗೂ 50 ಲಕ್ಷ ರೂ. ನಾಣ್ಯಗಳಿಂದ ಸಿಂಗರಿಸಲಾಗಿದೆ.

58 ಲಕ್ಷ ಮೌಲ್ಯದ 5, 10, 20 ನಾಣ್ಯಗಳಿಂದ, 10, 20, 50, 100, 200, 500, 2000 ನೋಟುಗಳಿಂದ ಹೂವಿನ ಸರಮಾಲೆ ಮಾಡಿ ವಿಶೇಷ ಬಗೆಯಲ್ಲಿ ಶೃಂಗರಿಸಲಾಗಿದೆ.

ಅಲಂಕಾರ ನೋಡುವ ಭಕ್ತರ ಮೇಲೆ ಸಿಸಿಟಿವಿ ಕಣ್ಗಾವಲು ಇದ್ದು, ಬ್ಯಾರಿಕೇಡ್ ಹಾಕಿ ಅಲಂಕಾರ ಹಣವನ್ನ ಮುಟ್ಟದಂತೆ ವ್ಯವಸ್ಥೆ ಮಾಡಲಾಗಿದೆ.

22 ಸಿಸಿಟಿವಿ ಅಳವಡಿಕೆ, ಗನ್ ಮ್ಯಾನ್, ಸೆಕ್ಯುರಟಿ, ಟ್ರಸ್ಟ್ ಸದಸ್ಯರು ಭಕ್ತರು ನಿರಂತರವಾಗಿ ಪರಿಶೀಲನೆ ಮಾಡುತ್ತಾರೆ.

ಚಂದ್ರಯಾನ - 3, ಜೈ ಕರ್ನಾಟಕ, ಜೈ ಜವಾನ್ ಜೈ ಕಿಸಾನ್, ಮೇರಾ ಭಾರತ್ ಮಹಾನ್ ಥೀಮ್ ಅಳವಡಿಸಲಾಗಿದೆ.

ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರ ಮತ್ತು 150 ಕ್ಕೂ ಜನರ ಈ ಅಲಂಕಾರವನ್ನು ಮಾಡಿದ್ದು, ಇವರ ಕೈ ಚಳಕ್ಕೆ ಜನರು ಫಿದಾ ಆಗಿದ್ದಾರೆ.
Published On - 12:38 pm, Mon, 18 September 23



















