ಇನ್ನು ನಾಯಕನಾಗಿ ರೋಹಿತ್ ಸಾಧಿಸಿದ ಎರಡನೇ ದಾಖಲೆಯೆಂದರೆ, ಮೊಹಮ್ಮದ್ ಅಜರುದ್ದೀನ್ ಮತ್ತು ಧೋನಿ ನಂತರ ನಾಯಕನಾಗಿ ಒಂದಕ್ಕಿಂತ ಹೆಚ್ಚು ಬಾರಿ ಏಷ್ಯಾಕಪ್ ಗೆದ್ದ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಅಜರ್ 1990-91 ಮತ್ತು 1995 ರಲ್ಲಿ ಏಷ್ಯಾ ಕಪ್ ಗೆದ್ದ ಭಾರತೀಯ ತಂಡದ ನಾಯಕರಾಗಿದ್ದರೆ, ಧೋನಿ 2010 ಮತ್ತು 2016 ರಲ್ಲಿ ಭಾರತವನ್ನು ಚಾಂಪಿಯನ್ ಮಾಡಿದ್ದರು.