Tech Tips: ನಿಮ್ಮ ಫೋನ್​ನಲ್ಲಿ ಡಿಲೀಟ್ ಆದ ಕಾಂಟೆಕ್ಟ್ ರಿಕವರಿ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

Updated on: Mar 08, 2024 | 6:55 AM

Contact Recovery: ಈಗ ಜನರು ತಮ್ಮ ಫೋನ್‌ಗಳಲ್ಲಿ ಕಾಂಟೆಕ್ಟ್ ಅನ್ನು ಸೇವ್ ಮಾಡಿಟ್ಟುಕೊಳ್ಳುತ್ತಾರೆ. ಯಾರಿಗಾದರೂ ಕರೆ ಮಾಡಬೇಕು ಎಂದಿದ್ದರೆ, ಆ ನಂಬರ್ ಅನ್ನು ಡಯಲ್ ಮಾಡುವ ಬದಲು, ಕಾಂಟೆಕ್ಟ್ ಲಿಸ್ಟ್​ಗೆ ಹೋಗಿ ಕರೆ ಮಾಡಿದರೆ ಆಯಿತು. ಆದರೆ, ಇದ್ದಕ್ಕಿದ್ದಂತೆ ಎಲ್ಲಾ ಕಾಂಟೆಕ್ಟ್ ನಂಬರ್ ಡಿಲೀಟ್ ಆಗಿಬಿಟ್ಟರೆ?.

1 / 5
ನಿಮ್ಮ ಮೊಬೈಲ್​ನಲ್ಲಿ ಇದ್ದಕ್ಕಿದ್ದಂತೆ ಎಲ್ಲಾ ಕಾಂಟೆಕ್ಟ್ ನಂಬರ್ ಡಿಲೀಟ್ ಆಗಿಬಿಟ್ಟರೆ ಅಥವಾ ಇನ್ನಾವುದೋ ಕಾರಣದಿಂದ ಕಾಂಟೆಕ್ಟ್ ಡಿಲೀಟ್ ಆದರೆ ಏನು ಗತಿ?. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಕೆಲವು ತಂತ್ರಗಳನ್ನು ಬಳಸಿ ಡಿಲೀಟ್ ಆದ ಕಾಂಟೆಕ್ಟ್ ಸಂಖ್ಯೆಯನ್ನು ಮರಳಿ ಪಡೆಯಬಹುದು. ಇದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಬೇಕು.

ನಿಮ್ಮ ಮೊಬೈಲ್​ನಲ್ಲಿ ಇದ್ದಕ್ಕಿದ್ದಂತೆ ಎಲ್ಲಾ ಕಾಂಟೆಕ್ಟ್ ನಂಬರ್ ಡಿಲೀಟ್ ಆಗಿಬಿಟ್ಟರೆ ಅಥವಾ ಇನ್ನಾವುದೋ ಕಾರಣದಿಂದ ಕಾಂಟೆಕ್ಟ್ ಡಿಲೀಟ್ ಆದರೆ ಏನು ಗತಿ?. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಕೆಲವು ತಂತ್ರಗಳನ್ನು ಬಳಸಿ ಡಿಲೀಟ್ ಆದ ಕಾಂಟೆಕ್ಟ್ ಸಂಖ್ಯೆಯನ್ನು ಮರಳಿ ಪಡೆಯಬಹುದು. ಇದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಬೇಕು.

2 / 5

ನಿಮ್ಮ ಫೋನ್‌ನಲ್ಲಿ ಗೂಗಲ್ ಕಾಂಟೆಕ್ಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. ಫೋನ್ ನಂಬರ್ ಸೇವ್ ಮಾಡಲು Google ID ಯೊಂದಿಗೆ ಈ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ. ಈಗ ಕೆಳಭಾಗದಲ್ಲಿರುವ ಫಿಕ್ಸ್ & ಮ್ಯಾನೇಜ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಈಗ ನೀವು ಕಾಂಟೆಕ್ಟ್ ನಂಬರ್ ಆಮದು ಮಾಡಲು, ರಫ್ತು ಮಾಡಲು ಮತ್ತು ಮರುಸ್ಥಾಪಿಸಲು ಆಯ್ಕೆಗಳನ್ನು ಪಡೆಯುತ್ತೀರಿ. ಇಲ್ಲಿ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ. ಈಗ ಡಿಲೀಟ್ ಆದ ಎಲ್ಲಾ ಕಾಂಟೆಕ್ಟ್ ಫೋನ್‌ಗೆ ಹಿಂತಿರುಗುತ್ತವೆ. ಫೋನ್ ಬ್ಯಾಕಪ್‌ನಿಂದ ಮೊಬೈಲ್

3 / 5

ನಿಮ್ಮ ಫೋನ್‌ನ ಬ್ಯಾಕಪ್ ನೀವು ಮಾಡಿದರೆ, ಡಿಲೀಟ್ ಆದ ಸಂಪರ್ಕ ಸಂಖ್ಯೆಗಳನ್ನು ಮರುಪಡೆಯಬಹುದು. ಇದಕ್ಕಾಗಿ ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್‌ಗಳನ್ನು ತೆರೆಯಿರಿ. ಬ್ಯಾಕಪ್ ಮತ್ತು ರಿ-ಸ್ಟೋರ್ ಆಯ್ಕೆಗೆ ಹೋಗಿ. ಇಲ್ಲಿ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ. ಕಾಂಟೆಕ್ಸ್ ಆಯ್ಕೆಯನ್ನು ಆರಿಸಿ.

4 / 5

ಈಗ ನಿಮ್ಮ ಡಿಲೀಟ್ ಆದ ಕಾಂಟೆಕ್ಟ್ ನಂಬರ್ ರಿ-ಸ್ಟೋರ್ ಮಾಡಲು ಬಯಸುತ್ತೀರಾ ಅಥವಾ ಬೇಡವೇ ಎಂದು ಕೇಳುವ ಸಂದೇಶವನ್ನು ನೀವು ನೋಡಬಹುದು. ನೀವು ಹೌದು ಎಂದು ಬಯಸಿದರೆ, ನಂತರ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ.

5 / 5

ನೀವು ಗೂಗಲ್ ಖಾತೆ ಅಥವಾ ಫೋನ್ ಬ್ಯಾಕಪ್ ಹೊಂದಿಲ್ಲದಿದ್ದರೆ, ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಡಿಲೀಟ್ ಆದ ಕಾಂಟ್ಯಾಕ್ಟ್ ನಂಬರ್ ಗಳನ್ನೂ ಇವುಗಳ ಮೂಲಕ ಹಿಂಪಡೆಯಬಹುದು. ಫೋನ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಡಿಲೀಟ್ ಆದ ಕಾಂಟ್ಯಾಕ್ಟ್ ಸಂಖ್ಯೆಗಳನ್ನು ಕಂಡುಹಿಡಿಯುವ ಸೌಲಭ್ಯವನ್ನು ಈ ಅಪ್ಲಿಕೇಶನ್‌ಗಳು ಒದಗಿಸುತ್ತವೆ.

Loading...
Unable to load recommendations.
Follow Us