Google Maps: ಭಾರತದ ಬಳಕೆದಾರರಿಗಿಲ್ಲ ಗೂಗಲ್ ಮ್ಯಾಪ್​ನ ಈ ಅದ್ಭುತ ಫೀಚರ್​ಗಳು: ಯಾವುವು ನೋಡಿ

| Updated By: Vinay Bhat

Updated on: Feb 13, 2023 | 11:41 AM

ಅನೇಕ ಫೀಚರ್​ಗಳನ್ನು ಪ್ರಕಟಿಸಿವ ಗೂಗಲ್ ಮ್ಯಾಪ್ ಅನ್ನು ಭಾರತದಲ್ಲೂ ಅತಿ ಹೆಚ್ಚಿನ ಜನರು ಬಳಸುತ್ತಿದ್ದಾರೆ. ಆದರೆ, ಇತರೆ ದೇಶಗಳಿಗೆ ಹೋಲಿಸಿದರೆ ಗೂಗಲ್ ಮ್ಯಾಪ್​ನಲ್ಲಿರುವ ಫೀಚರ್ಸ್ ಭಾರತದಲ್ಲಿ ಕಡಿಮೆ. ಬೇರೆ ದೇಶಗಳಲ್ಲಿ ಇನ್ನಷ್ಟು ಆಕರ್ಷಕವಾದ ಆಯ್ಕೆಗಳಿವೆ. ಅವುಗಳಲ್ಲಿ ಪ್ರಮುಖವಾದವು ಯಾವುದು ಎಂಬುದನ್ನು ನೋಡೋಣ.

1 / 7
ಇಂದು ಗೂಗಲ್ ಮ್ಯಾಪ್ ಅನ್ನು ಹೆಚ್ಚಿನವರು ಬಳಸುತ್ತಿದ್ದು ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. 220 ಕ್ಕೂ ಅಧಿಕ ದೇಶಗಳಲ್ಲಿ ಇದನ್ನು ಉಪಯೋಗಿಸುತ್ತಿದ್ದಾರೆ. ನಮಗೆ ತಲುಪಬೇಕಾದ ಸ್ಥಳವನ್ನು ಇದರ ಮೂಲಕ ತಿಳಿಯಬಹುದು. ಟ್ರಾಫಿಕ್ ಬಗ್ಗೆ ಮಾಹಿತಿ, ಅಂಗಡಿಗಳ ಕುರಿತ ಮಾಹಿತಿ ಜೊತೆಗೆ ಆಫ್​ಲೈನ್​ನಲ್ಲಿ ಕೂಡ ಗೂಗಲ್ ಮ್ಯಾಪ್ ಉಪಯೋಗಿಸಬಹುದು.

2 / 7
ಅನೇಕ ಫೀಚರ್​ಗಳನ್ನು ಪ್ರಕಟಿಸಿವ ಗೂಗಲ್ ಮ್ಯಾಪ್ ಅನ್ನು ಭಾರತದಲ್ಲೂ ಅತಿ ಹೆಚ್ಚಿನ ಜನರು ಬಳಸುತ್ತಿದ್ದಾರೆ. ಆದರೆ, ಇತರೆ ದೇಶಗಳಿಗೆ ಹೋಲಿಸಿದರೆ ಗೂಗಲ್ ಮ್ಯಾಪ್​ನಲ್ಲಿರುವ ಫೀಚರ್ಸ್ ಭಾರತದಲ್ಲಿ ಕಡಿಮೆ. ಬೇರೆ ದೇಶಗಳಲ್ಲಿ ಇನ್ನಷ್ಟು ಆಕರ್ಷಕವಾದ ಆಯ್ಕೆಗಳಿವೆ. ಅವುಗಳಲ್ಲಿ ಪ್ರಮುಖವಾದವು ಯಾವುದು ಎಂಬುದನ್ನು ನೋಡೋಣ.

ಅನೇಕ ಫೀಚರ್​ಗಳನ್ನು ಪ್ರಕಟಿಸಿವ ಗೂಗಲ್ ಮ್ಯಾಪ್ ಅನ್ನು ಭಾರತದಲ್ಲೂ ಅತಿ ಹೆಚ್ಚಿನ ಜನರು ಬಳಸುತ್ತಿದ್ದಾರೆ. ಆದರೆ, ಇತರೆ ದೇಶಗಳಿಗೆ ಹೋಲಿಸಿದರೆ ಗೂಗಲ್ ಮ್ಯಾಪ್​ನಲ್ಲಿರುವ ಫೀಚರ್ಸ್ ಭಾರತದಲ್ಲಿ ಕಡಿಮೆ. ಬೇರೆ ದೇಶಗಳಲ್ಲಿ ಇನ್ನಷ್ಟು ಆಕರ್ಷಕವಾದ ಆಯ್ಕೆಗಳಿವೆ. ಅವುಗಳಲ್ಲಿ ಪ್ರಮುಖವಾದವು ಯಾವುದು ಎಂಬುದನ್ನು ನೋಡೋಣ.

3 / 7
ಲೈವ್ ವೀವ್: ಗೂಗಲ್ ಈ ಲೈವ್ ವೀವ್ ಆಯ್ಕೆಯನ್ನು ಕಳೆದ ಸಪ್ಟೆಂಬರ್​ನಲ್ಲಿ ಬಿಡುಗಡೆ ಮಾಡಿತ್ತು. ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಕ್ಯಾಮೆರಾವನ್ನು ತೆರೆದು ಇದನ್ನು ಉಪಯೋಗಿಸಬಹುದು. ಈ ವೈಶಿಷ್ಟ್ಯವು ಲಂಡನ್, ಲಾಸ್ ಏಂಜಲೀಸ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ಪ್ಯಾರಿಸ್ ಮತ್ತು ಟೋಕಿಯೊದಲ್ಲಿ ಲಭ್ಯವಿದೆ. ಮುಂಬರುವ ತಿಂಗಳುಗಳಲ್ಲಿ ಬಾರ್ಸಿಲೋನಾ, ಡಬ್ಲಿನ್ ಮತ್ತು ಮ್ಯಾಡ್ರಿಡ್​ನಲ್ಲಿ ಬರಲಿದೆಯಂತೆ.

4 / 7
ಇಂಡೋರ್ ಲೈವ್ ವೀವ್: ಒಳಾಂಗಣ ಲೈವ್ ವ್ಯೂ ಇದು ಥೇಟ್ ಹೊರಾಂಗಣ ಲೈವ್​ನಂತೆಯೆ ಕಾರ್ಯನಿರ್ವಹಿಸುತ್ತದೆ. ಮಾಲ್‌ಗಳು, ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳ ಒಳಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಇದು ತೋರಿಸುತ್ತದೆ. ಈ ವೈಶಿಷ್ಟ್ಯವು ಮುಂಬರುವ ತಿಂಗಳುಗಳಲ್ಲಿ ಬಾರ್ಸಿಲೋನಾ, ಬರ್ಲಿನ್, ಫ್ರಾಂಕ್‌ಫರ್ಟ್, ಲಂಡನ್, ಮ್ಯಾಡ್ರಿಡ್, ಮೆಲ್ಬೋರ್ನ್, ಪ್ಯಾರಿಸ್, ಪ್ರೇಗ್, ಸಾವೊ ಪಾಲೊ, ಸಿಂಗಾಪುರ, ಸಿಡ್ನಿ ಮತ್ತು ತೈಪೆಯಲ್ಲಿ 1,000 ಕ್ಕೂ ಹೆಚ್ಚು ಹೊಸ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಮಾಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ.

5 / 7
ಇಂಪ್ರೆಸಿವ್ ವೀವ್: ಇದರ ಮೂಲಕ ಹವಾಮಾನ, ಟ್ರಾಫಿಕ್ ಅಥವಾ ಒಂದು ಸ್ಥಳದ ಕುರಿತು ಸಂಪೂರ್ಣ ಮಾಹಿತಿ ಪಡೆಯಬಹುದು. ಉದಾಹರಣೆಗೆ, ನೀವು ಬೆಂಗಳೂರಿನ ಇಸ್ಕಾನ್ ಟೆಂಪಲ್​ಗೆ ಭೇಟಿ ನೀಡುತ್ತಿದ್ದರೆ ಅಲ್ಲಿನ ಟ್ರಾಫಿಕ್, ಪ್ರವೇಶ ದ್ವಾರ, ಸುತ್ತಮುತ್ತಲಿನ ರೆಸ್ಟೋರೆಂಟ್‌ ಹಾಗೂ ವಿವಿಧ ಸಮಯಗಳಲ್ಲಿ ಈ ಪ್ರದೇಶ ಹೇಗೆ ಕಾಣುತ್ತದೆ ಎಂಬುದನ್ನು ನೋಡಬಹುದು.

6 / 7
ಸೈಕ್ಲಿಸ್ಟ್‌ಗಳಿಗೆ ಲೈಟ್ ನ್ಯಾವಿಗೇಷನ್: ಸೈಕ್ಲಿಂಗ್ ಮಾಡುವಾಗ ಅವರು ತಮ್ಮ ಫೋನನ್ನು ಕೈಯಲ್ಲಿ ಹಿಡಿದುಕೊಂಡಿರಲು ಸಾಧ್ಯವಿಲ್ಲ. ಹೀಗಾಗಿ ಈ ವೈಶಿಷ್ಟ್ಯವನ್ನು ಗೂಗಲ್ ಸೈಕ್ಲಿಸ್ಟ್‌ಗಳಿಗಾಗಿ ಪರಿಚಯಿಸಿತು. ಇದರ ಮೂಲಕ ಡಿಸ್ ಪ್ಲೇ ಆನ್‌ನಲ್ಲಿ ಇರುವ ಅಗತ್ಯವಿಲ್ಲ. ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ನಮೂದಿಸದೆಯೇ ಅವರ ಮಾರ್ಗದ ಕುರಿತು ETA ಅಪ್‌ಡೇಟ್ ನೀಡುತ್ತಿರುತ್ತದೆ.

7 / 7
ಸ್ಥಳೀಯ ಜಾಗವನ್ನು ಪರಿಶೀಲಿಸುವ ಆಯ್ಕೆ: ನೀವು ಒಂದು ಸ್ಥಳಕ್ಕೆ ಭೇಟಿ ನೀಡುವ ಮೊದಲು ಆ ಸ್ಥಳದ ಪರಿಸ್ಥಿತಿಯನ್ನು ಅನ್ನು ಪರಿಶೀಲಿಸಲು ಈ ಆಯ್ಕೆ ನೀಡಲಾಗಿದೆ. ಉದಾಹರಣೆಗೆ, ನೀವು ಒಂದು ಮಾರುಕಟ್ಟೆಗೆ ಭೇಟಿ ನೀಡುತ್ತಿದ್ದರೆ, ಆ ಜನಪ್ರಿಯ ತಾಣಗಳನ್ನು ನೋಡಲು ಈ ವೈಶಿಷ್ಟ್ಯವನ್ನು ಬಳಸಬಹುದು. ಈ ಜಾಗದ ರಿವ್ಯೂ, ಫೋಟೋಗಳು ಮತ್ತು ವೀಡಿಯೊಗಳನ್ನು ಒಳಗೊಂಡಂತೆ ಗೂಗಲ್ ಮ್ಯಾಪ್ ಬಳಕೆದಾರರಿಗೆ ಎಲ್ಲ ಮಾಹಿತಿ ನೀಡುತ್ತದೆ.