
ಲವ ಕುಶ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಕೋಲಾರ ಜಿಲ್ಲೆಯ ಆವಣಿಯಲ್ಲಿ ಲವಕುಶ ಮಂದಿರಕ್ಕೆ ಇಂದು(ಜ.29) ಶಂಕುಸ್ಥಾಪನೆ ಮಾಡಲಾಯಿತು.

ಇನ್ನು ಈ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನ ಅದ್ದೂರಿಯಾಗಿ ಆಚರಿಸಲಾಯಿತು ಹಲವಾರು ಸಂಖ್ಯೆಯಲ್ಲಿ ಜನರು ಸೇರುವ ಮೂಲಕ ಇದರ ಮೆರೆಗನ್ನ ಹೆಚ್ಚಿಸಿದರು.

ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ಅವರು ಶಂಕುಸ್ಥಾಪನೆ ನೆರವೇರಿಸಿದರು.

ರಾಮಾಯಣದ ಕುರುಹುಗಳನ್ನು ಹೊಂದಿರುವ ವಾಲ್ಮೀಕಿ ಆಶ್ರಮ ಎಂದೇ ಹೇಳಲಾಗುವ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಆವಣಿಯಲ್ಲಿ ಲವಕುಶ ಮಂದಿರ ನಿರ್ಮಾಣ ಮಾಡಲಾಗುತ್ತಿದೆ.

ಅಯೋಧ್ಯೆ ರಾಮಜನ್ಮಭೂಮಿ ಯಾದರೆ, ಆವನಿ ಲವಕುಶರ ಜನ್ಮಭೂಮಿ ಎಂದೇ ಹೇಳಾಗುತ್ತದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಂತೆ ಆವಣಿಯಲ್ಲಿ ಲವಕುಶ ಮಂದಿರ ನಿರ್ಮಾಣ ಮಾಡಲು ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು.

ಇನ್ನು ಈ ಲವಕುಶ ಮಂದಿರ ನಿರ್ಮಾಣ ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.