Kannada News Photo gallery these countries consider black cat as good omen or boon know why and how in kannada
ಮಿರಿಮಿರಿ ಮಿಂಚುವ ಕರಿ ಬೆಕ್ಕು ಈ ದೇಶಗಳಲ್ಲಿ ಶುಭದ ಸಂಕೇತ! ಏನಿದರ ರಹಸ್ಯ, ತಿಳಿಯಿರಿ
ನಾನಾ ದೇಶಗಳಲ್ಲಿ ನಾನಾ ಜನರು ನಾನಾ ನಂಬಿಕೆಗಳನ್ನು ಹೊಂದಿದ್ದಾರೆ; ಅವುಗಳನ್ನು ಚಾಚೂತಪ್ಪದೆ ಆಚರಿಸುತ್ತಾರೆ, ಪೂಜಿಸುತ್ತಾರೆ. ಅನೇಕ ದೇಶಗಳಲ್ಲಿ ಕಪ್ಪು ಬೆಕ್ಕು ಕಾಣಿಸಿಕೊಂಡರೆ ಅದನ್ನು ಶುಭದ ಸಂಕೇತ ಎಂದು ಬಗೆಯುವುದುಂಟು, ಸಂತಾನೋತ್ಪತ್ತಿ ಗುಣಲಕ್ಷಣದ್ದು ಎಂದೂ ಪರಿಗಣಿಸುತ್ತಾರೆ, ಪ್ರೇಮ ಮತ್ತು ಸಮೃದ್ಧಿಯ ಸಂಕೇತ ಎಂದು ಅದಕ್ಕೆ ಮಣೆ ಹಾಕುತ್ತಾರೆ. ಅದೇ ನಮ್ಮ ಭಾರತದಲ್ಲಿ ಕರಿ ಬೆಕ್ಕು ಹಾಗಿರಲೀ ಯಾವುದೇ ಬಣ್ಣದ ಬೆಕ್ಕಾಗಲೀ ಪ್ರಯಾಣಿಸುವಾಗ ದಾರಿಗೆ ಅಡ್ಡ ಬಂದರೆ ಮುಗಿಯಿತು, ಹಾವು ತುಳಿದವರಂತೆ ಬೆಚ್ಚಿಬೀಳುತ್ತಾರೆ!