ಸಾಮಾನ್ಯವಾಗಿ ಕೇದಾರನಾಥ ದೇವಾಲಯ ಈ ಸಮಯದಲ್ಲಿ ಈ ರೀತಿ ಇರುತ್ತದೆ. ಮಂಜು ಸರಿದು ದೇವಾಲಯದ ಇಡೀ ಸೊಬಗನ್ನು ಸವಿಯಬಹುದಿತ್ತು. ಆದ್ರೆ ಹಿಮಪಾತವಾಗುತ್ತಿರುವ ಕಾರಣ ಮಂಜು ಆವರಿಸಿದೆ. ಬದರಿನಾಥ್ ಜೊತೆಗೆ ಯಮುನೋತ್ರಿ, ಗಂಗೋತ್ರಿ ಮತ್ತು ಔಲಿಯಲ್ಲಿ ಹಿಮಪಾತವಾಗಿದೆ. ರಾಜ್ಯದ ಎತ್ತರದ ಪ್ರದೇಶಗಳಲ್ಲಿ ಭಾನುವಾರದಿಂದ ಹಿಮ ಸುರಿಯುತ್ತಿದೆ. ಔಲಿ, ಬದರಿನಾಥ್ ಧಾಮ್, ಹೇಮಕುಂಡ್ ಸಾಹಿಬ್, ನಿತಿ ಮಲಾರಿ ಕಣಿವೆ ಮತ್ತು ಇತರ ಎತ್ತರದ ಪ್ರದೇಶಗಳಲ್ಲಿನ ಪರ್ವತಗಳು ಹಿಮದ ಬಿಳಿ ಹೊದಿಕೆಯಿಂದ ಆವೃತವಾಗಿವೆ. ಹಿಮಪಾತದಿಂದಾಗಿ ರಾಜ್ಯದಲ್ಲಿ ಚಳಿ ಹೆಚ್ಚುತ್ತಿದೆ.