Kannada News Photo gallery According to Vastu shastra these 4 plant Tamarind plant Cotton plant Acacia plant Henna plant should not be grown at home
Vastu Tips : ವಾಸ್ತು ಪ್ರಕಾರ ಮನೆಯ ಬಳಿ ಅಪ್ಪಿತಪ್ಪಿಯೂ ಈ ನಾಲ್ಕು ಗಿಡ ಹಾಕಬೇಡಿ, ಅದರಿಂದ ಹಾನಿಯೇ ಹೆಚ್ಚು
ವಾಸ್ತು ಶಾಸ್ತ್ರವನ್ನು ಚಾಚೂ ತಪ್ಪದೆ ಅನುಸರಿಸಿದರೆ ಮನೆಯಲ್ಲಿ ಸುಖ ಸಮೃದ್ಧಿ, ಯಶಸ್ಸು, ಶಾಂತಿ ನೆಲೆಸುವುದು ಖಚಿತ. ವಾಸ್ತು ಶಾಸ್ತ್ರದ ಅನುಸಾರ ರೂಢಿಗತವಾಗಿ ಕೆಲವೊಂದು ನಿರ್ದಿಷ್ಟ ನೀತಿ ನಿಯಮಗಳನ್ನು ಪಾಲಿಸುವುದು ಉಚಿತ. ಅದು ಶುಭ ಮತ್ತು ಶ್ರೇಯಸ್ಕರವೂ ಹೌದು. ಅದರಿಂದ ಮನೆಯಲ್ಲಿ ಧನಾತ್ಮಕತೆ ಹೆಚ್ಚಾಗಿ ಖುಣಾತ್ಮಕ ಪ್ರಭಾವನ್ನು ತಗ್ಗಿಸುತ್ತದೆ. ಆದರೆ ಕೆಲವು ಇರುತ್ತದೆ. ಅದನ್ನು ಮಾಡುವುದರಿಂದ ಮನೆಯಲ್ಲಿ ಖುಣಾತ್ಮಕತೆ ಹೆಚ್ಚಾಗಿಬಿಡುತ್ತದೆ. ಕೆಲವು ಗಿಡಗಳನ್ನು ಮನೆಯಲ್ಲಿ ಬೆಳೆಸುವುದು ಅಶುಭವೆನಿಸುತ್ತದೆ.
1. ಹುಣಸೆ ಮರ (Tamarind plant)
ವಾಸ್ತು ಮತ್ತು ಫೆಂಗ್ ಶೂಯಿ ತಜ್ಞರ ಪ್ರಕಾರ ಹುಣಸೆ ಗಿಡಗಳನ್ನು ಮನೆಯಲ್ಲಿ ಹಾಕಲೇಬಾರದು. ಈ ಗಿಡವನ್ನು ಬೆಳೆಸಿದರೆ ಮನೆಯಲ್ಲಿ ನಕಾರಾತ್ಮಕತೆಯೂ ಬೆಳೆಯುತ್ತದೆ. ಇದರಿಂದ ಮನೆಯು ವಾದ-ಪ್ರತಿವಾದ ಮತ್ತು ವಿವಾದಗಳ ಗೂಡಾಗುತ್ತದೆ. ಅಷ್ಟೇ ಅಲ್ಲ, ಎಲ್ಲಿ ಹುಣಸೆ ಹಣ್ಣಿನ ಗಿಡ/ ಮರ ಇರುತ್ತದೋ ಆ ಜಮೀನು/ ನಿವೇಶನದಲ್ಲಿ ಮನೆಯನ್ನು ಕಟ್ಟಬಾರದು.
1 / 4
2. ಹತ್ತಿ ಗಿಡ (Cotton plant):
ಹತ್ತಿ ಗಿಡವನ್ನು ಮನೆಯ ಅಂಗಣದಲ್ಲಿ ಬೆಳೆಸಬಾರದು ಅನ್ನುತ್ತದೆ ವಾಸ್ತು ಶಾಸ್ತ್ರ. ಇದು ದೌರ್ಭಾಗ್ಯ ಮತ್ತು ಬಡತನದ ಸಂಕೇತ. ಹಾಗಾಗಿ ಈ ಗಿಡವನ್ನು ನೆಯ ಸುತ್ತಮುತ್ತ ನೆಡಬಾರದು.
2 / 4
3. ಅಕೇಶಿಯ ಸಸ್ಯ (Acacia plant):
ಅಕೇಶಿಯ ಸಸ್ಯವನ್ನು ವಚೆಲಿಯಾ ನಿಲೋಟೊಕಾ ಎಂದು ವೈಜ್ಞಾನಿಕ ಹೆಸರಿನಿಂದ ಕರೆಯುತ್ತಾರೆ. ಔಷಧೀಯವಾಗಿ ಈ ಸಸ್ಯ ಬಹು ಪ್ರಯೋಜನಕಾರಿ. ಇದರಲ್ಲಿ ಸುಂದರವಾದ ಗುಂಡುಗುಂಡುನೆಯ ಪುಟ್ಟ ಪುಟ್ಟ ಹಳದಿ ಹೂಗಳು ಬಿಡುತ್ತವೆ - ಇದು ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದ ವಿಷಯವಾಯ್ತು. ಇನ್ನುವಾಸ್ತು ಪರಿಣತರ ಪ್ರಕಾರ ಹೇಳಬೇಕು ಅಂದರೆ ಅಕೇಶಿಯ ಸಸ್ಯವನ್ನು ಮನೆಯಲ್ಲಿ ಹಾಕುವುದು ಉಚಿತವಲ್ಲ. ಅಕೇಶಿಯ ಸಸ್ಯ ಬೆಳೆಸಿದ್ದೇ ಆದರೆ ಅದರಿಂದ ಮನೆಯಲ್ಲಿ ವಾದ ವಿವಾದಗಳು ಸಮೃದ್ಧವಾಗಿ ಬೆಳೆದುಬಿಡುತ್ತದೆ.
3 / 4
4. ಗೋರಂಟಿ ಗಿಡ ಅಥವಾ ಮೆಹಂದಿ ಸಸ್ಯ (Henna plant):
ಹೆಣ್ಣುಮಕ್ಕಳು ಇರುವ ಮನೆಯಲ್ಲಿ ಗೋರಂಟಿ ಗಿಡ ಅಥವಾ ಮೆಹಂದಿ ಸಸ್ಯ ಬೆಳೆಸುವುದನ್ನು ಇಷ್ಟಪಡುತ್ತಾರೆ. ಆದರೆ ವಾಸ್ತು ಪರಿಣತರ ಪ್ರಕಾರ ಗೋರಂಟಿ ಗಿಡವನ್ನು ಮನೆಯ ಸುತ್ತಮುತ್ತ ಬೆಳೆಯಬಾರದು. ಏಕೆಂದರೆ ಗೋರಂಟಿ ಗಿಡದಲ್ಲಿ ಕೆಟ್ಟ ಆತ್ಮಗಳು ವಾಸ ಮಾಡುತ್ತವೆ ಎನ್ನಲಾಗುತ್ತದೆ. ಈ ಗಿಡದ ಸುತ್ತಮುತ್ತ ನಕಾರಾತ್ಮಕತೆ ಹೆಚ್ಚಾಗಿ ಇರುತ್ತದೆ. ಹಾಗಾಗಿ ಮನೆಯ ಬಳಿ ಈ ಗಿಡವನ್ನು ಬೆಳೆಸಬಾರದು. ಇವಿಷ್ಟೂ ವಾಸ್ತು ನಿಯಮಗಳು.