Health Tips: ಡ್ರೈ ಫ್ರೂಟ್ಸ್ ಸೇವಿಸುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ
TV9 Web | Updated By: preethi shettigar
Updated on:
Oct 03, 2021 | 12:02 PM
ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇವುಗಳನ್ನು ನೆನೆಸಿದರೆ ಇದರ ಶಕ್ತಿಯು ಮತ್ತಷ್ಟು ಹೆಚ್ಚಾಗುತ್ತದೆ. ನೀವು ಹೆಚ್ಚಾಗಿ ಆಯಾಸಗೊಂಡಿದ್ದರೆ, ನಿಯಮಿತವಾಗಿ ನೆನೆಸಿದ ಡ್ರೈ ಫ್ರೂಟ್ಸ್ ಸೇವಿಸಬಹುದು.
1 / 6
ಅಂಜೂರದಲ್ಲಿ ಸತು, ಮ್ಯಾಂಗನೀಸ್, ಮೆಗ್ನೀಶಿಯಂ, ಕಬ್ಬಿಣದಂತಹ ಅನೇಕ ಪೋಷಕಾಂಶಗಳಿದ್ದು, ದೇಹಕ್ಕೆ ಬಲ ನೀಡುತ್ತದೆ. ನೀರಿನಲ್ಲಿ ನೆನಸಿದ ಅಂಜೂರದ ಪ್ರಯೋಜನಗಳು ಹೆಚ್ಚಾಗಿರುತ್ತದೆ. ಅಂಜೂರವು ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆಯನ್ನು ತ್ವರಿತವಾಗಿ ಪೂರೈಸುತ್ತದೆ. ಮೂಳೆಗಳು ಮತ್ತು ಹೃದಯಕ್ಕೆ ಕೂಡ ಇದು ಪ್ರಯೋಜನಕಾರಿ.
2 / 6
ಒಮೆಗಾ -3 ಕೊಬ್ಬಿನಾಮ್ಲಗಳು ನೆನೆಸಿದ ವಾಲ್ನಟ್ನಲ್ಲಿ (ಅಖ್ರೋಟ್) ಕಂಡುಬರುತ್ತವೆ. ಇದು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದು ಮೆದುಳಿಗೆ ಶಕ್ತಿಯನ್ನು ನೀಡುತ್ತದೆ ಮತ್ತು ದೈಹಿಕ ಆಯಾಸವನ್ನು ತೆಗೆದುಹಾಕುತ್ತದೆ.
3 / 6
ನೆನೆಸಿದ ಬಾದಾಮಿ ಆಂಟಿಆಕ್ಸಿಡೆಂಟ್‌ಗಳ ನಿಧಿ. ದೇಹಕ್ಕೆ ಬಲ ನೀಡುವುದರ ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಬಾದಾಮಿಯಲ್ಲಿ ವಿಟಮಿನ್ ಬಿ 17 ಮತ್ತು ಫೋಲಿಕ್ ಆಸಿಡ್ ಇದ್ದು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
4 / 6
ಖರ್ಜೂರವು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಖರ್ಜೂರದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇದ್ದು, ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಖರ್ಜೂರವು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
5 / 6
ಪಿಸ್ತಾ ದೇಹವನ್ನು ಸೋಂಕಿನಿಂದ ರಕ್ಷಿಸುವುದರ ಜೊತೆಗೆ ನಮ್ಮ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಪಿಸ್ತಾ ಫೈಬರ್, ಕಾರ್ಬೋಹೈಡ್ರೇಟ್, ಅಮೈನೋ ಆಸಿಡ್, ವಿಟಮಿನ್ ಎ, ಕೆ, ಸಿ, ಬಿ -6, ಡಿ, ಇ, ಪ್ರೋಟೀನ್, ಕ್ಯಾಲ್ಸಿಯಂ, ಮ್ಯಾಂಗನೀಸ್, ಫೋಲೇಟ್ ಅಂಶಗಳನ್ನು ಒಳಗೊಂಡಿದೆ. ಆಹಾರದಲ್ಲಿ ಇದನ್ನು ಸೇರಿಸುವುದರಿಂದ ದೇಹವು ಅನೇಕ ಪ್ರಯೋಜನಗಳನ್ನು ಪಡೆಯಬಹುದು.
6 / 6
ಗೋಡಂಬಿಯಲ್ಲಿ ತಾಮ್ರ, ಸತು, ಮೆಗ್ನೀಶಿಯಂ, ಕಬ್ಬಿಣ ಮತ್ತು ರಂಜಕದಂತಹ ಖನಿಜಾಂಶಗಳಿಂದ ಸಮೃದ್ಧವಾಗಿರುತ್ತದೆ. ಇದರ ಜೊತೆಯಲ್ಲಿ ಇದು ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದೆ. ಜತೆಗೆ ಗೋಡಂಬಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಅಧಿಕ ಪ್ರೋಟೀನ್, ಫೈಬರ್ ಮತ್ತು ಕೊಬ್ಬುಗಳಿರುವುದರಿಂದ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.