Bone Health: ಮೂಳೆಗಳ ಬಲವರ್ಧನಗೆ ಈ ಅಭ್ಯಾಸಗಳು ಒಳಿತು
TV9 Web | Updated By: Pavitra Bhat Jigalemane
Updated on:
Mar 19, 2022 | 11:02 AM
ದೇಹ ಸದೃಢವಾಗಿರಬೇಕೆಂದರೆ ಮೂಳೆಗಳು ಸರಿಯಾಗಿರಬೇಕು. ನಾವು ಸೇವಿಸುವ ಆಹಾರ, ದೈನಂದಿನ ಚಟುವಟಿಕೆಗಳು ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಅಭ್ಯಾಸಗಳು ಮೂಳೆಯ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.
1 / 8
ದೇಹದಲ್ಲಿ ಮೂಳೆಯ ಬಗೆಗಿನ ಆರೋಗ್ಯದೆಡೆಗೆ ಗಮನಹರಿಸವುದು ಅತೀ ಅಗತ್ಯವಾಗಿದೆ. ವಯಸ್ಸಾದಂತೆ ಮೂಳೆಗಳು ದುರ್ಬಲಗೊಳ್ಳುತ್ತದೆ. ಹೀಗಾಗಿ ದೈನಂದಿನ ಚಟುವಟಿಕೆಗಳನ್ನು ಬದಲಿಸುಕೊಳ್ಳುವುದು ಅಗತ್ಯವಾಗಿದೆ. ಈ ಅಭ್ಯಾಸಗಳು ಮೂಳಗಳನ್ನು ಸದೃಢವಾಗಿರಲು ಸಹಾಯಮಾಡುತ್ತದೆ.
2 / 8
ಮೂಳೆಗಳನ್ನು ಆರೋಗ್ಯವಾಗಿರಸಿಕೊಳ್ಳಲು ವಿಟಮಿನ್ ಡಿ ಪ್ರಮುಖವಾಗಿದೆ. ಅದು ವಿಟಮಿನ್ ಮಾತ್ರಗಳಿಂದಾಗಿರಬಹುದು ಅಥವಾ ಸೂರ್ಯ ಕಿರಣಗಳಿಂದ ಸಿಗುವ ಪೋಷಕಾಂಶಗಳಾಗಿರಬಹುದು. ಅವು ಮೂಳೆಗಳನ್ನು ಬಲಗೊಳಿಸುತ್ತದೆ.
3 / 8
ನೈಸರ್ಗಿಕ ಆಹಾರದಲ್ಲಿ ಕ್ಯಾಲ್ಸಿಯಂ ಅನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. ಮೊಸರು, ಸೋಯಾ, ಕೊಬ್ಬಿನ ಮೀನು ಮತ್ತು ಹಾಲು ಮುಂತಾದ ಆಹಾರಗಳು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ.
4 / 8
ಪ್ರತಿದಿನ ವ್ಯಾಯಾಮದ ಅಭ್ಯಾಸದಿಂದ ಮೂಳಗಳನ್ನು ಬಲವಾಗಿರಿಸಿಕೊಳ್ಳಬಹುದು. ಏರೋಬಿಕ್ಸ್ನಂತಹ ವ್ಯಾಯಾಮದ ಅಭ್ಯಾಸವಿರಲಿ.
5 / 8
ಕೆಫೀನ್ ಮೂಳೆಯ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಡಯೆಟರಿ ಕೆಫೀನ್ ಮೂತ್ರದ ಕ್ಯಾಲ್ಸಿಯಂ ನಷ್ಟವನ್ನು ತೀವ್ರವಾಗಿ ಹೆಚ್ಚಿಸುತ್ತದೆ ಎಂದು ಅಧ್ಯಯನವು ಹೇಳುತ್ತದೆ.
ಆದ್ದರಿಂದ ಟೀ ಕಾಫಿಯ ಅತಿಯಾದ ಸೇವನೆ ಬೇಡ.
6 / 8
ಅತಿಯಾದ ಉಪ್ಪಿನ ಸೇವನೆ ಮೂಳಗಳನ್ನು ದುರ್ಬಲಗೊಳಿಸುತ್ತದೆಆದ್ದರಿಂದ ಪದಾರ್ಥಗಳಿಗೆ ಮೇಲಿನಿಂದ ಉಪ್ಪನ್ನು ಹಾಕಿಕೊಳ್ಲುವ ಅಭ್ಯಾಸ ಬೇಡ.
7 / 8
ಧೂಮಪಾನವು ಮೂಳೆಯ ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ. ನಿಕೋಟಿನ್ ನಿಯಮಿತವಾದ ಮೂಳೆ ಪುನರುತ್ಪಾದನೆಯ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ, ಇದು ದೀರ್ಘಕಾಲದವರೆಗೆ ಮುಂದುವರಿದಾಗ ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ.
8 / 8
ಅತಿಯಾದ ಆಲ್ಕೋಹಾಲ್ ಸೇವನೆಯು ಮೂಳೆಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆಲ್ಕೋಹಾಲ್ ಸೇವನೆಯು ಕ್ಯಾಲ್ಸಿಯಂ ಅನ್ನು ಸರಿಯಾಗಿ ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ.