ನಂದಿ ಹಿಲ್ಸ್ ಬಿಟ್ಟು ಶ್ರೀನಿವಾಸ ಸಾಗರ ಜಲಾಶಯದತ್ತ ಜನವೂ ಜನ: ಧುಮ್ಮಿಕ್ಕುತ್ತಿರುವ ನೀರಲ್ಲಿ ಮಿಂದು ಎಂಜಾಯ್, ಫೋಟೋಗಳಿವೆ

| Updated By: ಆಯೇಷಾ ಬಾನು

Updated on: Aug 28, 2022 | 6:28 PM

ಕಳೆದ ಎರಡು ದಿನಗಳಿಂದ ಸುರಿದ ಧಾರಾಕರ ಮಳೆಗೆ, ಶ್ರೀನಿವಾಸಸಾಗರ ಜಲಾಶಯ ಉಕ್ಕಿ ಬಂದಿದೆ. 80 ಅಡಿ ಮೇಲಿನಿಂದ ನೀರು ಕೋಡಿ ಹರಿಯುತ್ತಿರುವುದನ್ನು ನೋಡಲು ಎರಡು ಕಣ್ಣುಗಳೆ ಸಾಲದು. ಆದ್ರೆ ಜಲಾವೃತವಾದ ರಸ್ತೆಯಲ್ಲಿ ಈಜಾಡಿ ಯುವಕರು ರಸ್ತೆ ದಾಟುವುದರ ಮೂಲಕ ಮಳೆಗೆ ಹಿಡಿ ಶಾಪ ಹಾಕಿದ್ದಾರೆ.

1 / 7

2 / 7
ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ಕಳೆದ ಎರಡು ಮೂರು ದಿನಗಳಿಂದ ಸುರಿದ ಧಾರಾಕರ ಮಳೆಗೆ, ತುಂಬಿ ಕೊಡಿ ಹರಿಯುತ್ತಿದೆ. ಸುಮಾರು 80 ಅಡಿಗಳ ಮೇಲಿನಿಂದ ಕೊಡಿ ನೀರು ಕೆಳಗೆ ಬಿಳುವ ದೃಶ್ಯ ನೋಡಲು ಎರಡು ಕಣ್ಣುಗಳೇ ಸಾಲದು.

3 / 7
ಇಂದು ಭಾನುವಾರವಾದ ಕಾರಣ, ವೀಕೆಂಡ್ ಮಸ್ತಿಗೆ ಅಂತ ನಂದಿಗಿರಿಧಾಮಕ್ಕೆ ಬಂದ ಜನ. ನಂದಿಗಿರಿಧಾಮದ ಬದಲು ಶ್ರೀನಿವಾಸ ಸಾಗರ ಜಲಾಶಯದತ್ತ ಲಗ್ಗೆ ಹಾಕಿದ್ರು. ಇದ್ರಿಂದ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಇಂದು ಜನಜಾತ್ರೆ ನೆರೆದಿತ್ತು. ಮಹಿಳೆಯರು ಮಕ್ಕಳು ವೃದ್ದರು ಸೇರಿದಂತೆ ಯುವಕ ಯುವತಿಯರು ನಾಮುಂದು ತಾಮುಂದು ಅಂತ ಕೊಡಿ ನೀರಿನಲ್ಲಿ ಮಿಂದು ಬಿದ್ದು ಒದ್ದಾಡಿ ಸಂಭ್ರಮಿಸಿದ್ದಾರೆ.

4 / 7
ಇದು ಶ್ರೀನಿವಾಸ ಸಾಗರ ಜಲಾಶಯದ ಜಲ ವೈಭವ ಪ್ರಕೃತಿ ಸೊಬಗು ಆದ್ರೆ ಜಕ್ಕಲಮಡಗು ಜಲಾಶಯದ ಹಿನ್ನೀರು ದೊಡ್ಡಬಳ್ಳಾಪುರ ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೆ ನುಂಗಿ ಹಾಕಿದೆ. ಇದ್ರಿಂದ ಗುಂಗಿರ್ಲಹಳ್ಳಿ ಗ್ರಾಮದ ಬಳಿ ರಸ್ತೆ ಸಂಫೂರ್ಣ ಜಲಾವೃತವಾಗಿ ಸುತ್ತಮುತ್ತಲ ಗ್ರಾಮಸ್ಥರು ಪರದಾಡ್ತಿದ್ದಾರೆ.

5 / 7
ಮಾಹಿತಿ ಕೊರತೆಯಿಂದ ಪ್ರವಾಸಿಗರು ಸಹ ಪರದಾಡುತ್ತಿದ್ದಾರೆ. ಇನ್ನೂ ಕೆಲವರು ದುಸ್ಸಾಹಸ ಮಾಡಿ ಅದೇನ್ ಆಗುತ್ತೊ ಆಗಲಿ ಅಂತ ನೀರಿನಲ್ಲೆ ಸ್ಕೂಟಿ ಬೈಕ್ ಕಾರುಗಳನ್ನು ಚಲಾಯಿಸಿ ಸಮಸ್ಯೆಗೆ ಸಿಲುಕಿದ್ದಾರೆ.

6 / 7
ಧಾರಾಕರ ಮಳೆ, ಒಂದೆಡೆ ಸಂತಸ ಸಂಭ್ರಮವನ್ನುಂಟು ಮಾಡಿದ್ರೆ. ಇನ್ನೂ ಕೆಲವು ಕಡೆ ಯಾಕಾದ್ರು ಮಳೆ ಬಂತೋ, ಇರುವ ರಸ್ತೆಯನ್ನು ನುಂಗಿಕೊಂಡು ಇನ್ನಿಲ್ಲದ ಸಮಸ್ಯೆ ಮಾಡಿದೆ ಅಂತ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

7 / 7
ಕಣ್ಮನ ಸೆಳೆಯುವ ಶ್ರೀನಿವಾಸ ಸಾಗರ ಜಲಾಶಯದ ದೃಶ್ಯ....  ಚಿತ್ರ ಸಂಗ್ರಹ: ಭೀಮಪ್ಪ ಪಾಟೀಲ

Published On - 6:26 pm, Sun, 28 August 22