Updated on:Aug 28, 2022 | 5:12 PM
Prime Minister Narendra Modi appreciated Bagalkote district BilKeruru lake infostrcher in manki bath
ಗ್ರಾಮದಲ್ಲಿ ಸುಂದರವಾಗಿ ಅಮೃತ ಸರೋವರ ನಿರ್ಮಿಸಲಾಗಿದ್ದು, ಬೆಟ್ಟದಿಂದ ಹರಿದು ಬರುವ ನೀರಿನಿಂದ ಜನರಿಗೆ ತೊಂದರೆಯಾಗ್ತಿತ್ತು. ಇದರಿಂದ ಗ್ರಾಮದ ರೈತರ ಅಪಾರ ಬೆಳೆಗಳು ಸಹ ಹಾನಿಯಾಗುತ್ತಿತ್ತು ಎಂದರು.
ಹೀಗಾಗಿ ಕಾಲುವೆ ಮೂಲಕ ಒಂದೆಡೆ ನೀರು ಹರಿಸಿ ಕೆರೆ ತುಂಬಿಸಲಾಗಿದೆ. ಈ ಮೂಲಕ ಅಮೃತ ಸರೋವರ ಅಭಿಯಾನ ಯಶಸ್ವಿಯಾಗಿದೆ. ಇದು ಮುಂದಿನ ಪೀಳಿಗೆಗೆ ಬಹಳ ಅನುಕೂಲ ಆಗಲಿದೆ ಎಂದು ಹೇಳಿದ್ದಾರೆ.
1 ಎಕರೆ 23 ಗುಂಟೆಯ ಸೇದುಬಾವಿ ಎಂಬ ಹೆಸರಿನ ಕೆರೆ ನಿರ್ಮಾಣಗೊಂಡಿದ್ದು, ಕೆರೆಯಿಂದ 200 ಹೆಕ್ಟೇರ್ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳವಾಗುವ ಸಾಧ್ಯತೆ ಇದೆ. 20 ಲಕ್ಷ ವೆಚ್ಚದಲ್ಲಿ ಮನ್ರೇಗಾ ಯೋಜನೆಯಡಿಯಲ್ಲಿ ಕೆರೆ ಅಭಿವೃದ್ಧಿಯಾಗಿದೆ.
Published On - 5:11 pm, Sun, 28 August 22