Updated on: Aug 15, 2022 | 5:11 PM
ಅಜರ್‌ಬೈಜಾನ್‌ನ ಗರಡಾಗ್ ಜಿಲ್ಲೆಯಲ್ಲಿ ಆಗಸ್ಟ್ 11 ರಂದು ಮಣ್ಣಿನ ಜ್ವಾಲಾಮುಖಿ ಸ್ಫೋಟಗೊಂಡಿತು. ಬಹಳಷ್ಟು ಕೆಸರು ಹೊರ ಚಿಮ್ಮಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಣ್ಣಿನ ಜ್ವಾಲಾಮುಖಿಗಳನ್ನು ಮಣ್ಣಿನ ಗುಮ್ಮಟಗಳು ಎಂದು ಕರೆಯಲಾಗುತ್ತದೆ. ಬಿಸಿ ಮಣ್ಣಿನ ಜೊತೆಗೆ ನೀರು ಮತ್ತು ಅನಿಲವು ಮಣ್ಣಿನ ಜ್ವಾಲಾಮುಖಿಗಳಿಂದ ಹೊರಬರುತ್ತದೆ. ವಾಸ್ತವವಾಗಿ ಇವು ಜ್ವಾಲಾಮುಖಿಗಳಲ್ಲ. ಆದರೆ ಜ್ವಾಲಾಮುಖಿಗಳ ಸ್ಫೋಟದ ಮಾದರಿ ಮತ್ತು ಒಳಗಿನಿಂದ ಲಾವಾದಂತಹ ಮಣ್ಣಿನ ಹರಿವಿನಿಂದ ಇದನ್ನು ಜ್ವಾಲಾಮುಖಿ ಎಂದು ಕರೆಯಲಾಗುತ್ತದೆ.
Trending Mud Volcano Did you know People of this country are bathing in mud volcano