- Kannada News Photo gallery Cricket photos On this day MS Dhoni and Suresh Raina retired from International Cricket
MS Dhoni: 2 ವರ್ಷಗಳ ಹಿಂದೆ ಇದೆ ದಿನ ಯಾರೂ ಊಹಿಸದ ನಿರ್ಧಾರ ಪ್ರಕಟಿಸಿದ್ದ ಧೋನಿ- ರೈನಾ..!
MS Dhoni: ಧೋನಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಭಾರತದ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸುರೇಶ್ ರೈನಾ ಕೂಡ ಧೋನಿ ಹಾದಿಯನ್ನು ಅನುಸರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
Updated on: Aug 15, 2022 | 7:05 PM

ಎಂ ಎಸ್ ಧೋನಿ, ಕ್ರಿಕೆಟ್ ದುನಿಯಾದಲ್ಲಿ ಈ ಹೆಸರನ್ನು ಕೆಳದವರಿಲ್ಲ. 2007 ರ ಟಿ20 ವಿಶ್ವಕಪ್ನಿಂದ ಆರಂಭವಾದ ಧೋನಿಯ ಯಶಸ್ಸಿನ ವೃತ್ತಿ ಪಯಣ, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಪಿ ಗೆಲುವು, ಟೆಸ್ಟ್ನಲ್ಲಿ ಟೀಂ ಇಂಡಿಯಾ ನಂ.1 ತಂಡವಾಗುವವರೆಗೂ ಮುಂದುವರೆದಿತ್ತು. ಹೀಗೆ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೆ ಧೋನಿ ಯಾರು ಊಹಿಸದ ನಿರ್ಧಾರ ತೆಗೆದುಕೊಂಡು ಇಂದಿಗೆ 2 ವರ್ಷ ಭರ್ತಿಯಾಗಿದೆ.

ಮಹೇಂದ್ರ ಸಿಂಗ್ ಧೋನಿ ಭಾರತದ ಸಾರ್ವಕಾಲಿಕ ಶ್ರೇಷ್ಠ ನಾಯಕ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ 2007 ರಲ್ಲಿ ಚೊಚ್ಚಲ T20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು.

ಭಾರತ ಇವರೆಗೆ ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದಿದೆ. ಎರಡನೇ ಟ್ರೋಫಿ ಗೆಲ್ಲಲು 28 ವರ್ಷಗಳೇ ಬೇಕಾಯಿತು. ಈ ಎರಡನೇ ಏಕದಿನ ವಿಶ್ವಕಪನ್ನು 2011ರಲ್ಲಿ ಭಾರತ ಗೆದ್ದಾಗ ತಂಡದ ನಾಯಕತ್ವವನ್ನು ಧೋನಿ ವಹಿಸಿಕೊಂಡಿದ್ದರು.

ಎರಡು ವರ್ಷಗಳ ಹಿಂದೆ ಇದೆ ದಿನ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು.

ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಆ ಬಳಿಕ ಭಾರತ ಐಸಿಸಿ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಸೋತು ಚಾಂಪಿಯನ್ ಪಟ್ಟವನ್ನು ಮಿಸ್ಸ್ ಮಾಡಿಕೊಳ್ಳುತ್ತಿದೆ.

ಧೋನಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಭಾರತದ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸುರೇಶ್ ರೈನಾ ಕೂಡ ಧೋನಿ ಹಾದಿಯನ್ನು ಅನುಸರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಸುರೇಶ್ ರೈನಾ ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಯಶಸ್ವಿಯಾಗಿದ್ದಾರೆ. ಅವರ ನಿಷ್ಪಾಪ ಫೀಲ್ಡಿಂಗ್‌ಗಾಗಿ ವಿಶ್ವ ಕ್ರಿಕೆಟ್ ಅವರನ್ನು ನೆನಪಿಸಿಕೊಳ್ಳುತ್ತದೆ. ವಿಶ್ವದ ಅತ್ಯುತ್ತಮ ಫೀಲ್ಡರ್ ಜಾಂಟಿ ರೋಡ್ಸ್ ಕೂಡ ಸುರೇಶ್ ರೈನಾ ಅವರನ್ನು ಅತ್ಯುತ್ತಮ ಫೀಲ್ಡರ್ ಎಂದು ಆಯ್ಕೆ ಮಾಡಿದ್ದರು.



















